ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ವಿಜಯನಗರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಸಾಹಿತ್ಯ ಪ್ರಕಾರಗಳು, ಕೊಳ್ಳೇಗಾಲ ವಿದ್ಯಾನಗರ ಜೆ.ಎಸ್.ಎಸ್ ಶುಶ್ರೂಷ್ ಶಾಲೆ ಜಾನಪದ, ಮೈಸೂರು ಸರಸ್ವತಿಪುರಂ ಜೆ ಎಸ್ಎಸ್ ಮಹಿಳಾ ಐಟಿಐ ಡಿ.ಎಲ್.ಡಿ ಕಾಲೇಜಿನ ವಿದ್ಯಾರ್ಥಿಗಳ ಶಿವತಾಂಡವ ನೃತ್ಯಕ್ಕೆ ನೆರೆದಿದ್ದ ಯುವಕರು ಶಿಳ್ಳೆ, ಚಪ್ಪಾಳೆ ಮೂಲಕ ಕುಣಿದು ಕುಪ್ಪಳಿಸಿದರು.ಮಾನಸಗಂಗೋತ್ರಿ ಬಯಲುರಂಗ ಮಂದಿರದಲ್ಲಿ ನಾಲ್ಕನೇ ದಿನ ಶಿಕ್ಷಣ ವಸ್ತು ವಿಷಯ, ತಂದೆ ತಾಯಿ ಪಾಲನೆ ಪೋಷಣೆಯಲ್ಲಿ ಮಕ್ಕಳ ಪಾತ್ರ, ಸಂಭ್ರಮವನ್ನು ತೆರೆದಿಡುವ ಪ್ರಯತ್ನವನ್ನು ವಿದ್ಯಾರ್ಥಿಗಳು ತಮ್ಮ ನೃತ್ಯದ ಮೂಲಕ ಮಾಡಿದರು.ಮೈಸೂರು ಚಟುವಟಿಕೆಗಳ ಭಾಗವಾಗಿ ಯುವ ಸಮುದಾಯದ ಪ್ರತಿಭೆ ಅನಾವರಣಕ್ಕೆ ಅವಕಾಶ ನೀಡುವ ವಿದ್ಯಾರ್ಥಿಗಳ ಯುವ ಸಂಭ್ರಮ ಕಳೆ ಗಟ್ಟಿದೆ. ಇಂದು ನಡೆದ ಕಾರ್ಯಕ್ರಮದಲ್ಲಿ 53 ನೃತ್ಯ ಪ್ರದರ್ಶನ ಮಾಡಲಾಯಿತು. ದೇಶಭಕ್ತಿ ಸ್ವಾತಂತ್ಯ ಚಳುವಳಿ, ಯುವಜನತೆಯ ರೈತರು ಮತ್ತು ಯೋಧರು, ಆದಿಶಕ್ತಿ, ವೀರ ವನಿತೆಯರ ಕುರಿತು, ಮತದಾನ ಮತ್ತು ಪ್ರಜಾಪ್ರಭುತ್ವ, ಕನ್ನಡ ಸಂಸ್ಕೃತಿ, ಭಾರತೀಯ ಸೈನ್ಯದಲ್ಲಿ ಮಹಿಳಾ ಯೋಧರು ಹೀಗೆ ಮಂಡ್ಯ, ಮೈಸೂರು, ವಿಜಯಪುರ, ಮದ್ದೂರು, ಬೆಂಗಳೂರು, ಹುಣಸೂರು ನಾನಾ ಕಡೆಯ ಕಾಲೇಜಿನ ವಿದ್ಯಾರ್ಥಿಗಳು ಈ ಹಾಡುಗಳಿಗೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.