ಸಾರಾಂಶ
ಹಾಸನ ನಗರದ ನಗರದ ಸಿಟಿ ಬಸ್ ನಿಲ್ದಾಣದ ಬಳಿ ಶ್ರೀ ಗಣಪತಿ ಪೆಂಡಾಲಿನಲ್ಲಿ ಶನಿವಾರ ನಡೆದ ಉಚಿತ ರಕ್ತದಾನ ಶಿಬಿರ, ಉಚಿತ ಬಿ.ಪಿ. ಮತ್ತು ಸಕ್ಕರೆ ಪರೀಕ್ಷಾ ಶಿಬಿರಕ್ಕೆ ನಗರಸಭೆ ಅಧ್ಯಕ್ಷರಾದ ಎಂ. ಚಂದ್ರೇಗೌಡ ಅವರು ಚಾಲನೆ ನೀಡಿದರು. ಪೆಂಡಾಲ್ ಗಣಪತಿ ಸೇವಾ ಸಂಸ್ಥೆಯವರು ರಕ್ತದಾನ ಶಿಬಿರ, ರಕ್ತ ಪರೀಕ್ಷೆ, ಬಿಪಿ ಪರೀಕ್ಷೆಯನು ಉಚಿತವಾಗಿ ಮಾಡುತ್ತಿದ್ದಾರೆ. ಭಗವಂತನಿಗೆ ಭಕ್ತಿಯ ಜೊತೆಗೆ ಸಮಾಜಕ್ಕೆ ಒಳ್ಳೆಯದಾಗುವ ಕಾರ್ಯವನ್ನು ಶ್ರೀ ಗಣಪತಿ ಸೇವಾ ಸಮಿತಿಯವರು ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಈ ಆರೋಗ್ಯ ಶಿಬಿರದ ಪ್ರಯೋಜವನ್ನು ಎಲ್ಲಾರು ಪಡೆಯಲಿ. ಇಂತಹ ಸಮಾಜಮುಖಿ ಕಾರ್ಯಗಳು ಹೆಚ್ಚು ನಡೆಯುತ್ತಿರಲಿ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಹಾಸನ
ನಗರದ ಸಿಟಿ ಬಸ್ ನಿಲ್ದಾಣದ ಬಳಿ ಶ್ರೀ ಗಣಪತಿ ಪೆಂಡಾಲಿನಲ್ಲಿ ಶನಿವಾರ ನಡೆದ ಉಚಿತ ರಕ್ತದಾನ ಶಿಬಿರ, ಉಚಿತ ಬಿ.ಪಿ. ಮತ್ತು ಸಕ್ಕರೆ ಪರೀಕ್ಷಾ ಶಿಬಿರಕ್ಕೆ ನಗರಸಭೆ ಅಧ್ಯಕ್ಷರಾದ ಎಂ. ಚಂದ್ರೇಗೌಡ ಅವರು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ನಗರದ ಪೆಂಡಾಲ್ ಗಣಪತಿ ಸೇವಾ ಸಂಸ್ಥೆಯವರು ರಕ್ತದಾನ ಶಿಬಿರ, ರಕ್ತ ಪರೀಕ್ಷೆ, ಬಿಪಿ ಪರೀಕ್ಷೆಯನು ಉಚಿತವಾಗಿ ಮಾಡುತ್ತಿದ್ದಾರೆ. ಭಗವಂತನಿಗೆ ಭಕ್ತಿಯ ಜೊತೆಗೆ ಸಮಾಜಕ್ಕೆ ಒಳ್ಳೆಯದಾಗುವ ಕಾರ್ಯವನ್ನು ಶ್ರೀ ಗಣಪತಿ ಸೇವಾ ಸಮಿತಿಯವರು ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಈ ಆರೋಗ್ಯ ಶಿಬಿರದ ಪ್ರಯೋಜವನ್ನು ಎಲ್ಲಾರು ಪಡೆಯಲಿ. ಇಂತಹ ಸಮಾಜಮುಖಿ ಕಾರ್ಯಗಳು ಹೆಚ್ಚು ನಡೆಯುತ್ತಿರಲಿ ಎಂದು ಹೇಳಿದರು. ನಗರಸಭೆ ಆಯುಕ್ತರಾದ ನರಸಿಂಹ ಮಾತನಾಡಿ, ಸಾರ್ವಜನಿಕರಿಗೆ ಅನುಕೂಲವಾಗುವಂತಹ ಆರೋಗ್ಯ ಶಿಬಿರ ನಡೆಸಿಕೊಂಡು ಬರುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳು ಇದೆ ರೀತಿ ನಿರಂತರವಾಗಿ ನಡೆಸಿಕೊಂಡು ಹೋಗಲಿ. ಈ ಶಿಬಿರದ ಯಶಸ್ವಿಗೆ ಕಾರಣರಾಗಿರುವ ಎಲ್ಲರಿಗೂ ಅಭಿನಂದನೆ ಹೇಳುವುದಾಗಿ ತಿಳಿಸಿದರು. ಶ್ರೀ ಗಣಪತಿ ಸೇವಾ ಸಂಸ್ಥೆ ಅಧ್ಯಕ್ಷ ಡಾ. ಎಚ್. ನಾಗರಾಜು ಮಾತನಾಡುತ್ತಾ, ಸಂಸ್ಥೆ ವತಿಯಿಂದ ಸಾರ್ವಜನಿಕರ ಸಹಬಾಗಿತ್ವದಲ್ಲಿ ಉಚಿತ ರಕ್ತದಾನ ಶಿಬಿರ, ಉಚಿತ ಬಿ.ಪಿ. ಮತ್ತು ಸಕ್ಕರೆ ಪರೀಕ್ಷೆ ಜೊತೆಗೆ ಸಕ್ಕರೆ ಕಾಯಿಲೆ ಇರುವವರಿಗೆ ಉಚಿತ ಔಷಧಿ ಮತ್ತು ಮಾತ್ರೆಗಳನ್ನು ಕೊಡಲಾಗುತ್ತಿದೆ. ಬೆಳಗಿನಿಂದಲೂ ಸಾವಿರಾರು ಸಂಖ್ಯೆಯಲ್ಲಿ ಜನರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಸಮಾಜಮುಖಿಯಾಗಿ ಈ ಕಾರ್ಯಕ್ರಮ ನಡೆಯುತ್ತಿದೆ. ಎಲ್ಲರೂ ಸೇರಿ ಉತ್ತಮವಾದ ಗಣಪತಿ ಸೇವೆ ಮಾಡುವುದಾಗಿ ಹೇಳಿದರು. ಕಾರ್ಯದರ್ಶಿ ಚನ್ನವೀರಪ್ಪ ಮಾತನಾಡಿ, ಗಣಪತಿ ಪ್ರತಿಷ್ಠಾಪನೆ ದಿನದಿಂದ ಇದುವರೆಗೂ ಧಾರ್ಮಿಕ ಕಾರ್ಯ ಮಾಡಲಾಗಿದ್ದರೂ ಇವತ್ತು ಮಾಡುತ್ತಿರುವುದು ಶ್ರೇಷ್ಠವಾದ ಕಾರ್ಯ. ಶ್ರೀ ಗಣಪತಿ ಸೇವಾ ಸಂಸ್ಥೆಯಿಂದ ಬಡವರಿಗೆ, ಶ್ರೀಮಂತರಿಗೆ ಎಂದು ಭೇದಭಾವ ಮಾಡದೇ ಬಿಪಿ, ಶುಗರ್ ಪರೀಕ್ಷೆ ಮಾಡಲಾಗುತ್ತಿದೆ ಎಂದರು. ಇದೇ ವೇಳೆ ಪ್ರತಿದಿನದಂತೆ ಮಧ್ಯಾಹ್ನ ೧೨:೩೦ಕ್ಕೆ ಮಹಾಮಂಗಳಾರತಿ ನೆರವೇರಿಸಲಾಯಿತು. ನಂತರ ಬಂದ ಭಕ್ತರಿಗೆಲ್ಲಾ ಪ್ರಸಾದ ವಿತರಿಸಿದರು. ಈ ವೇಳೆ ೮೬ ಸಾರಿ ರಕ್ತದಾನ ಮಾಡಿ ಮಂಜುನಾಥ್ ಕೂಡ ಶ್ರೀ ಗಣಪತಿ ಸೇವಾ ಸಮಿತಿಯ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿ ಗಮನಸೆಳೆದರು. ಕಾರ್ಯಕ್ರಮದಲ್ಲಿ ಶ್ರೀ ಗಣಪತಿ ಸೇವ ಸಂಸ್ಥೆ ಧರ್ಮದರ್ಶಿಗಳಾದ ಎಂ.ಕೆ. ಕಮಲ್ ಕುಮಾರ್, ಎಚ್.ಎಸ್. ಅನಂತ ನಾರಾಯಣ, ಎನ್.ಎಸ್. ಶಂಕರ್ ರಾವ್, ನಗರಸಭೆ ಸದಸ್ಯ ಗಿರೀಶ್ ಚನ್ನವೀರಪ್ಪ, ನಗರಸಭೆ ಮಾಜಿ ಅಧ್ಯಕ್ಷ ಆರ್, ಮೋಹನ್, ಮಾಜಿ ಅಧ್ಯಕ್ಷೆ ನೇತ್ರಾವತಿ ಗಿರೀಶ್, ಸದಸ್ಯೆ ಹೇಮಲತಾ, ಮಂಜುನಾಥ್ ಹಾಗೂ ಹನುಮಂತೇಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.