ಅರಹತೊಳಲು ಗ್ರಾಮದಲ್ಲಿ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ

| Published : Jul 30 2025, 12:45 AM IST

ಸಾರಾಂಶ

ಅರಹತೊಳಲು ಗ್ರಾಮದಲ್ಲಿ ಶಿವಮೊಗ್ಗದ ಮಲ್ನಾಡ್ ಸಮಾಜ ಸೇವಾ ಸಂಸ್ಥೆ, ತಾಲೂಕು ಆರೋಗ್ಯ ಕೇಂದ್ರ, ಅರಹತೊಳಲು ಪ್ರಾಥಮಿಕ ಅರೋಗ್ಯ ಕೇಂದ್ರ ಇವರ ಸಹಯೋಗದಲ್ಲಿ ಸೋಮವಾರ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಅರಹತೊಳಲು ಗ್ರಾಮದಲ್ಲಿ ಶಿವಮೊಗ್ಗದ ಮಲ್ನಾಡ್ ಸಮಾಜ ಸೇವಾ ಸಂಸ್ಥೆ, ತಾಲೂಕು ಆರೋಗ್ಯ ಕೇಂದ್ರ, ಅರಹತೊಳಲು ಪ್ರಾಥಮಿಕ ಅರೋಗ್ಯ ಕೇಂದ್ರ ಇವರ ಸಹಯೋಗದಲ್ಲಿ ಸೋಮವಾರ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ ನಡೆಸಲಾಯಿತು.

ಈ ಸಂದರ್ಭದಲ್ಲಿ ಆಗರದಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಯಶವಂತ್ ಮಾತನಾಡಿ, ಇತ್ತೀಚೆಗೆ ಕ್ಯಾನ್ಸರ್ ಕಾಯಿಲೆಗೆ ತುತ್ತಾಗುತ್ತಿರುವ ಜನರ ಸಂಖ್ಯೆ ಹೆಚ್ಚುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಅದಕ್ಕೆ ನಮ್ಮ ನಿತ್ಯ ಬದುಕಿನ ಆಹಾರ ಮತ್ತು ಜೀವನ ಶೈಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಕ್ಯಾನ್ಸರ್ ಅನ್ನು ಆರಂಭದಲ್ಲೆ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಪಡೆದಲ್ಲಿ ಸಂಪೂರ್ಣ ಗುಣಮುಖ ಹೊಂದಬಹುದಾಗಿದೆ. ಈಗ ಆಧುನಿಕ ಚಿಕಿತ್ಸಾ ಸೌಲಭ್ಯ ದೊರೆಯುತ್ತಿದೆ. ಜನರು ಆತಂಕ ಪಡುವ ಅಗತ್ಯ ಇಲ್ಲ. ಯಾವುದಾರೂ ಅನಾರೋಗ್ಯ ಲಕ್ಷಣ ಕಂಡುಬಂದಲ್ಲಿ ತಕ್ಷಣ ತಜ್ಞರಲ್ಲಿ ಪರೀಕ್ಷಿಸಿಕೊಳ್ಳಬೇಕು ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಧಾ, ಪಿಡಿಓ ಜಿ. ಅನಿತಾ, ಸ್ಪರ್ಶ ಯೋಜನೆಯ ಸಂಯೋಜಕ ಅಶೋಕ್, ಹೊಳೆಹೊನ್ನೂರು ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಎನ್‍ಸಿಡಿ ವಿಭಾಗದ ಗೋವರ್ಧನ್, ಕಿರಣ್, ಗ್ರಾಮ ಪಂಚಾಯತಿ ಸದಸ್ಯ ಆರ್.ಪ್ರಭಾಕರ್, ಮಂಜುನಾಥ, ಮಹಿಳಾ ಮಹಾ ಸಂಘದ ಅಧ್ಯಕ್ಷೆ ಶಕುಂತಲಾ, ಕಾರ್ಯಕರ್ತೆ ನಾಗವೇಣಿ, ಸಮಾಜ ಸೇವಕ ತಟ್ಟೆಹಳ್ಳಿ ಎಂ.ರಂಗನಾಥ್, ಲಕ್ಷ್ಮೀ ರಂಗನಾಥ, ಸಂಘದ ಮಹಿಳೆಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.