ಸಾರಾಂಶ
ಮೇ 26ರ ವರೆಗೆ ಪ್ರತಿದಿನ ಬೆಳಗ್ಗೆ ೯ರಿಂದ ಸಂಜೆ ೪ರ ವರೆಗೆ ಮೈಗ್ರೇನ್‌ಗೆ ಉಚಿತ ತಪಾಸಣಾ ಹಾಗೂ ಪಂಚಕರ್ಮ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ. ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಲಾಗಿದೆ.
ಕನ್ನಡಪ್ರಭ ವಾರ್ತೆ ಮಣಿಪಾಲ
ಇಲ್ಲಿನ ಶಿವಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮೇ 13ರಂದು ಆರಂಭವಾಗಿ 26ರ ವರೆಗೆ ಪ್ರತಿದಿನ ಬೆಳಗ್ಗೆ ೯ರಿಂದ ಸಂಜೆ ೪ರ ವರೆಗೆ ಮೈಗ್ರೇನ್‌ಗೆ ಉಚಿತ ತಪಾಸಣಾ ಹಾಗೂ ಪಂಚಕರ್ಮ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ.ಶಿಬಿರವನ್ನು ಮುನಿಯಾಲ್ ಆಯುರ್ವೇದ ಸಂಸ್ಥೆಯ ಪ್ರಾಂಶುಪಾಲ ಡಾ. ಸತ್ಯನಾರಾಯಣ ಬಿ. ಉದ್ಘಾಟಿಸಿದರು. ಕಾಲೇಜಿನ ಆಡಳಿತಾಧಿಕಾರಿ ಯೋಗೀಶ್ ಶೆಟ್ಟಿ, ಸ್ನಾತಕೋತ್ತರ ವಿಭಾಗದ ಡೀನ್ ಮತ್ತು ದ್ರವ್ಯಗುಣ ವಿಭಾಗದ ಮುಖ್ಯಸ್ಥ ಡಾ. ಚಂದ್ರಕಾಂತ್ ಭಟ್, ರಸಶಾಸ್ತ್ರ ಮತ್ತು ಬೈಷಜ್ಯ ವಿಭಾಗದ ಪ್ರಾಧ್ಯಾಪಕ ಡಾ. ದಿನೇಶ್ ನಾಯಕ್ ಜೆ., ಆಸ್ಪತ್ರೆಯ ಮೇಲ್ವಿಚಾರಕ ಡಾ. ಪ್ರಮೋದ್ ಶೇಟ್, ಪಂಚಕರ್ಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ವಿದ್ಯಾಶ್ರೀ, ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ಪೂಜಾ ಪಾಟೀಲ್ ಮತ್ತು ಸಂಸ್ಥೆಯ ಇತರ ವೈದ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಅರ್ಧ ತಲೆನೋವು, ಕಣ್ಣು, ಕಿವಿ, ಹಣೆ ಮತ್ತು ಹುಬ್ಬು ಪ್ರದೇಶದಲ್ಲಿ ನೋವು ಮತ್ತು ವಾಕರಿಕೆ, ವಾಂತಿ ಮುಂತಾದ ಲಕ್ಷಣಗಳಿರುವ ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಸ್ಥೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.