ಸಾರಾಂಶ
ಕನಕಪುರ: ಕನಕಪುರ ರೋಟರಿ ಸಂಸ್ಥೆ 49 ವರ್ಷಗಳಿಂದ ಸೇವಾಕಾರ್ಯದಲ್ಲಿ ತೊಡಗಿಕೊಂಡಿದೆ ಎಂದು ರೋಟರಿ ಅಧ್ಯಕ್ಷ ಸಿದ್ದರಾಜು ತಿಳಿಸಿದರು.
ಕಸಬಾ ಹೋಬಳಿ ಕೆಬ್ಬಳ್ಳಿ ಸರ್ಕಾರಿ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಿಸಿ ಮಾತನಾಡಿದ ಅವರು, ಸಂಸ್ಥೆ ವತಿಯಿಂದ ತಾಲೂಕಿನಲ್ಲಿ ಈಗಾಗಲೇ 1500 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನೀಡಲಾಗಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ಮತ್ತು ಲೇಖನ ಸಾಮಗ್ರಿ ಹಾಗೂ ಶಾಲೆಗಳಿಗೆ ಬೇಕಾಗುವ ಪೀಠೋಪಕರಣಗಳನ್ನು ನೀಡುತ್ತಿದ್ದೇವೆ ಎಂದರು.ಸರ್ಕಾರಿ ಮತ್ತು ಗಡಿ ಭಾಗದ ಶಾಲೆಗಳ ಉತ್ತೇಜನಕ್ಕೆ ಒತ್ತು ಕೊಟ್ಟು ಕೆಲಸ ಮಾಡಲಾಗುತ್ತಿದೆ, ತಾಲೂಕಿನ ಸರ್ಕಾರಿ ಶಾಲೆಗಳ 10 ಸಾವಿರ ವಿದ್ಯಾರ್ಥಿಗಳಿಗೆ 60 ಸಾವಿರ ನೋಟ್ ಪುಸ್ತಕಗಳನ್ನು ಉಚಿತವಾಗಿ ನೀಡಲು ತೀರ್ಮಾನಿಸಿದ್ದು ಶೀಘ್ರವಾಗಿ ನೋಟ್ ಪುಸ್ತಕ ಹಂಚುವುದಾಗಿ ತಿಳಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಭಾರತಿ ಮಾತನಾಡಿ, ಶಾಲೆಗೆ ಶೌಚಾಲಯದ ಅವಶ್ಯಕತೆ ಇದ್ದು ಅದನ್ನು ನಿರ್ಮಿಸಿಕೊಡುವಂತೆ ಮನವಿ ಮಾಡಿದರು. ರೋಟರಿ ಸಂಸ್ಥೆ ಖಜಾಂಚಿ ಭಾನುಪ್ರಕಾಶ್, ರೋಟರಿ ನಿರ್ದೇಶಕರಾದ ಚೆನ್ನಕೇಶವ, ಸಿ.ಎಸ್.ನಾಗರಾಜು, ಕಾಂತರಾಜು, ಮುನಿನಿಂಗಯ್ಯ ಸುನೀಲ್, ದೇಸಾಯಿ, ಗವಿರಾಜು, ಬೆಂಗಳೂರು ಸೌತ್ ಅಂಡ್ ಕ್ಲಬ್ ಧನುಷ್, ಎಸ್ ಡಿ ಎಂ ಸಿ ಅಧ್ಯಕ್ಷ ಕೃಷ್ಣಪ್ಪ, ಗ್ರಾಮದ ಮುಖಂಡರಾದ ಸಿ.ಲಿಂಗೇಗೌಡ, ದೇವುಗೌಡ, ನಾಗೇಶ್, ಶಾಲೆಯ ಮುಖ್ಯ ಶಿಕ್ಷಕಿ ಭಾರತಿ, ಅಡುಗೆ ಸಹಾಯಕಿ ಗೀತಾ ಉಪಸ್ಥಿತರಿದ್ದರು.
(ಫೋಟೋ ಕ್ಯಾಫ್ಷನ್)ಕಸಬಾ ಹೋಬಳಿ ಕೆಬ್ಬಳ್ಳಿ ಸರ್ಕಾರಿ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರಗಳನ್ನು ರೋಟರಿ ಅಧ್ಯಕ್ಷ ಸಿದ್ದರಾಜು ವಿತರಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))