ಸಾರಾಂಶ
ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಉತ್ತೇಜಿಸುವ ನಿಟ್ಟಿನಲ್ಲಿ 6ರಿಂದ 10ನೇ ತರಗತಿಯವರೆಗೆ ಉಚಿತ ಶಿಕ್ಷಣ ವ್ಯವಸ್ಥೆ ಆಯೋಜಿಸಲಾಗಿದೆ ಎಂದು ಆಳ್ವಾಸ್ ಪ್ರೌಡಶಿಕ್ಷಣ ವಿಭಾಗದ ಮುಖ್ಯೋಪಾದ್ಯಯ ಶ್ರೀನಿಧಿ ಹೇಳಿದರು.
ಶೃಂಗೇರಿ:
ದಕ್ಷಿಣ ಕನ್ನಡ ಜಿಲ್ಲೆ ಮೂಡಿಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಿಂದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಉತ್ತೇಜಿಸುವ ನಿಟ್ಟಿನಲ್ಲಿ 6ರಿಂದ 10ನೇ ತರಗತಿಯವರೆಗೆ ಉಚಿತ ಶಿಕ್ಷಣ ವ್ಯವಸ್ಥೆ ಆಯೋಜಿಸಲಾಗಿದೆ ಎಂದು ಆಳ್ವಾಸ್ ಪ್ರೌಡಶಿಕ್ಷಣ ವಿಭಾಗದ ಮುಖ್ಯೋಪಾದ್ಯಯ ಶ್ರೀನಿಧಿ ಹೇಳಿದರು.ಅವರು ಪಟ್ಟಣದ ಶಾರದಾ ಕಂಪರ್ಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 6, 7, 8, 9ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶವಿದ್ದು, ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿ ಸಂಪೂರ್ಣ ಉಚಿತ ಶಿಕ್ಷಣ, ವಸತಿ, ಪಠ್ಯ, ಬಟ್ಟೆ ಮೂಲಸೌಕರ್ಯ ಉಚಿತವಾಗಿ ನೀಡಲಾಗುವುದು. 10ನೇ ತರಗತಿಯವರೆಗೆ ಸಂಪೂರ್ಣ ಉಚಿತ ಶಿಕ್ಷಣ ನೀಡಲಾಗುವುದು.
ಫೆಬ್ರವರಿ 25ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಕನ್ನಡ, ಇಂಗ್ಲೀಷ್ ಭಾಷೆಯಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ನಂತರ ಕನ್ನಡ ಮಾಧ್ಯಮದಲ್ಲಿ ವಿದ್ಯಾಬ್ಯಾಸ ಮಾಡಬೇಕಾಗುತ್ತದೆ. ಮಾರ್ಚ 3ರಂದು ಮಾನಗಾರು ಜ್ಞಾನಭಾರತೀ ವಿದ್ಯಾಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಓದುತ್ತಿರುವ ತರಗತಿ ಪಠ್ಯ ವಿಷಯ ಜೊತೆಗೆ ಮಾನಸಿಕ ಸಾಮಾರ್ಥ್ಯದ ವಿಷಯವಿರುತ್ತದೆ. ಶೃಂಗೇರಿ ಶ್ರೀ ಶಾರದಾ ಎಜುಕೇಶನ್ ಟ್ರಸ್ಟ್ ಸಹಯೋಗದೊಂದಿಗೆ ಪರೀಕ್ಷೆ ನಡೆಯಲಿದೆ ಎಂದರು. ಟ್ರಸ್ಟ್ ಋಷ್ಯಶೃಂಗ ಹೆಗ್ಡೆ, ವೇಣುಮಾದವ ನಾಯಕ್, ಪನ್ನಗ, ಇಂಜಿತ್ ಕುಮಾರ್, ಪ್ರಜ್ಞಾ ಇಂಜಿತ್ ಕುಮಾರ್ ಮತ್ತಿತರರಿದ್ದರು.