ಕಣ್ಣಿನ ಉಚಿತ ತಪಾಸಣಾ ಶಿಬಿರದಲ್ಲಿ ನಾವು ಸುಮಾರು 75 ಜನರಿಗೆ ಬಿಪಿ ತಪಾಸಣೆ ನಡೆಸಿ ಹಾಗೂ ಕಣ್ಣಿನ ತಪಾಸಣೆ ನಡೆಸಲಾಗಿದೆ. 30 ಜನರಿಗೆ ಅತ್ಯವಶ್ಯಕವಾಗಿ ಶಸ್ತ್ರ ಚಿಕಿತ್ಸೆಗಾಗಿ ಬೆಂಗಳೂರಿಗೆ ಬರುವಂತೆ ಸೂಚನೆ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಹಲಗೂರು

ಉಚಿತ ಕಣ್ಣಿನ ತಪಾಸಣೆ ಶಿಬಿರದಲ್ಲಿ ಸುಮಾರು 75ಹೆಚ್ಚು ಶಿಬಿರಾರ್ಥಿಗಳನ್ನು ಪರೀಕ್ಷಿಸಿ 30 ಜನರಿಗೆ ಶಸ್ತ ಚಿಕಿತ್ಸೆ ಅವಶ್ಯಕತೆ ಇದ್ದು, ಬೆಂಗಳೂರು ಆಸ್ಪತ್ರೆ ಗೆ ಕರೆದುಕೊಂಡು ಹೋಗಿ ಉಚಿತವಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಗುಣೇಶ್ ತಿಳಿಸಿದರು.

ಲಯನ್ಸ್ ಕ್ಲಬ್ ಆವರಣದಲ್ಲಿ ಬಿ.ಡಬ್ಲ್ಯೂಲಯನ್ಸ್ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಲಯನ್ಸ್ ಕಣ್ಣು ಆಸ್ಪತ್ರೆ, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ, ಜಿಲ್ಲಾ ಆರೋಗ್ಯ ಇಲಾಖೆ ಆಶ್ರಯದಲ್ಲಿ ನಡೆದ ಶಿಬಿರದಲ್ಲಿ ಮಾತನಾಡಿ , ಹಲಗೂರು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಶಿಬಿರದ ಸದುಪಯೋಗ ಪಡೆದುಕೊಂಡಿದ್ದಾರೆ ಎಂದರು.

ವೈದ್ಯಾಧಿಕಾರಿ ಎಸ್.ದರ್ಶನ್ ಮಾತನಾಡಿ , ಈ ಶಿಬಿರದಲ್ಲಿ ನಾವು ಸುಮಾರು 75 ಜನರಿಗೆ ಬಿಪಿ ತಪಾಸಣೆ ನಡೆಸಿ ಹಾಗೂ ಕಣ್ಣಿನ ತಪಾಸಣೆ ನಡೆಸಲಾಗಿದೆ. 30 ಜನರಿಗೆ ಅತ್ಯವಶ್ಯಕವಾಗಿ ಶಸ್ತ್ರ ಚಿಕಿತ್ಸೆಗಾಗಿ ಬೆಂಗಳೂರಿಗೆ ಬರುವಂತೆ ಸೂಚನೆ ನೀಡಲಾಗಿದೆ ಎಂದರು.

ಈ ವೇಳೆ ಕ್ಲಬ್ಬಿನ ಎ.ಎಸ್.ನಾಗೇಶ್,ಡಿ.ವೈ ನಾಗರಾಜು (ಬಾಬು), ಎನ್.ಯೋಗೇಶ್, ಡಿ.ಎಲ್.ಮಾದೇಗೌಡ, ಕೆ. ಶಿವರಾಜು, ಗುರುಸಿದ್ಧು, ಶಿಬಿರದ ಮೇಲ್ವಿಚಾರಕ ನಾಗೇಶ್ ಸೇರಿದಂತೆ ಇತರರು ಇದ್ದರು.ಆರೋಗ್ಯ ತಪಾಸಣಾ ಶಿಬಿರ, ವೃದ್ಧರಿಗೆ ಹಣ್ಣು ಹಂಪಲು ವಿತರಣೆ

ಕೆ.ಆರ್.ಪೇಟೆ:ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬ ಪ್ರಯುಕ್ತ ಪಟ್ಟಣದ ಹೊರ ಹೊಲಯದಲ್ಲಿ ಮಾತೃಭೂಮಿ ವೃದ್ಧಾಶ್ರಮದಲ್ಲಿ ಆರೋಗ್ಯ ತಪಾಸಣಾ ಶಿಬಿರ ಮತ್ತು ಹಣ್ಣು ಹಂಪಲು ವಿತರಿಸಲಾಯಿತು.

ಕಿಕ್ಕೇರಿ ವಿಭಾಗದಯೋಜನೆ ಬಿ.ಸಿ.ಟ್ರಸ್ಟ್ ಯೋಜನಾ ಕಚೇರಿಯಿಂದ ನಡೆದ ಕಾರ್ಯಕ್ರಮದಲ್ಲಿ ಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಶ್ರೀ ಹೆಗ್ಗಡೆಯವರ ಆಶಯ, ಚಿಂತನೆ ಹಾಗೂ ಸಾಧನೆ ಅಪಾರ ಧರ್ಮಾಧಿಕಾರಿಗಳ ಆಶಯವೇ ಮಾನವೀಯತೆ, ಸೇವೆಯೇ ಧರ್ಮ. ಅವರ ಚಿಂತನೆ ಇಡೀ ಸಮಾಜಕ್ಕೆ ದಾರಿದೀಪ ಎಂದರು.ಗ್ರಾಮಾಭಿವೃದ್ಧಿ, ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣದಲ್ಲಿ ಅವರ ಸಾಧನೆ ಅಸಾಧಾರಣ. ಅವರ ಹಾದಿಯಲ್ಲಿ ನಾವು ನಡೆಯಬೇಕು. ವೃದ್ಧರು ನಮ್ಮ ಆಸ್ತಿ. ಅವರನ್ನು ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಈ ಆಶ್ರಮದಲ್ಲಿ ಅವರಿಗೆ ಪ್ರೀತಿ, ಆರೈಕೆ ಸಿಗುತ್ತಿರುವುದು ಸಂತೋಷದ ವಿಷಯ. ಈ ಸೇವಾ ಕಾರ್ಯಗಳು ನಿರಂತರವಾಗಿಲಿ ಎಂದರು.

ವೃದ್ಧಾಶ್ರಮದಲ್ಲಿರುವ ಹಿರಿಯರ ಆರೋಗ್ಯ ತಪಾಸಣೆ ಮಾಡಲಾಯಿತು. ಬಳಿಕ ಅವರಿಗೆ ಹಣ್ಣು ಹಂಪಲು ವಿತರಿಸಿದರು.ಕಾರ್ಯಕ್ರಮದಲ್ಲಿ ಕಿಕ್ಕೇರಿ ವಿಭಾಗದ ಯೋಜನಾಧಿಕಾರಿ ಶ್ರೀನಿವಾಸ್, ಮೇಲ್ವಿಚಾರಕಿ ನಂದಿನಿ, ಸೇವಾಪ್ರತಿನಿಧಿ ಲಕ್ಷ್ಮಿ, ವೃದ್ಧಾಶ್ರಮದ ವ್ಯವಸ್ಥಾಪ ಜೈ ಹಿಂದ್ ನಾಗಣ್ಣ, ಸೇರಿದಂತೆ ಉಪಸ್ಥಿತರಿದ್ದರು.