ಶಾಲಾ ಮಕ್ಕಳ ಉಚಿತ ನೇತ್ರ ಚಿಕಿತ್ಸೆ

| Published : Feb 20 2024, 01:49 AM IST

ಸಾರಾಂಶ

ಬಾದಾಮಿ: ತಾಲೂಕಿನ ಕಾತರಕಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆಯ ವೈದ್ಯರು ಉಚಿತ ನೇತ್ರ ತಪಾಸಣೆ ಶಿಬಿರ ನಡೆಸಿದರು. ನೇತ್ರ ವೈದ್ಯೆ ಡಾ.ಲಕ್ಷ್ಮಿ ಹಾಗೂ ಸಿಬ್ಬಂದಿ ಶಶಾಂಕ್ ಅವರು ಶಾಲಾ ಮಕ್ಕಳಿಗೆ ನೇತ್ರ ತಪಾಸಣೆ ಮಾಡಿ ಕಣ್ಣಿನ ರಕ್ಷಣೆಯ ಮಹತ್ವ ತಿಳಿಸಿದರು. ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಒಟ್ಟು 188 ಮಕ್ಕಳ ನೇತ್ರತಪಾಸಣೆ ಮಾಡಿದರು.

ಕನ್ನಡಪ್ರಭ ವಾರ್ತೆ ಬಾದಾಮಿ

ತಾಲೂಕಿನ ಕಾತರಕಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆಯ ವೈದ್ಯರು ಉಚಿತ ನೇತ್ರ ತಪಾಸಣೆ ಶಿಬಿರ ನಡೆಸಿದರು.

ನೇತ್ರ ವೈದ್ಯೆ ಡಾ.ಲಕ್ಷ್ಮಿ ಹಾಗೂ ಸಿಬ್ಬಂದಿ ಶಶಾಂಕ್ ಅವರು ಶಾಲಾ ಮಕ್ಕಳಿಗೆ ನೇತ್ರ ತಪಾಸಣೆ ಮಾಡಿ ಕಣ್ಣಿನ ರಕ್ಷಣೆಯ ಮಹತ್ವ ತಿಳಿಸಿದರು. ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಒಟ್ಟು 188 ಮಕ್ಕಳ ನೇತ್ರತಪಾಸಣೆ ಮಾಡಿದರು. ಕೆಲವು ಮಕ್ಕಳಿಗೆ ಕಣ್ಣಿನ ದೋಷಗಳು ಕಂಡು ಬಂದಿದ್ದು, 8 ಮಕ್ಕಳಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ. ಕೆಲವರಿಗೆ ಕನ್ನಡಕ ಉಚಿತವಾಗಿ ಒದಗಿಸಲಾಗುವುದು ಎಂದು ಹೇಳಿದರು.

ಮುಖ್ಯಶಿಕ್ಷಕ ಆರ್.ಎಂ. ಸಾರವಾಡ ಮಾತನಾಡಿ, ಜ್ಞಾನೇಂದ್ರಿಯಗಳಲ್ಲಿ ನೇತ್ರ ಬಹಳ ಪ್ರಮುಖ ಅಂಗ. ಈಗಿನ ಮಕ್ಕಳು ಮೊಬೈಲ್‌ ನೋಡುತ್ತಾ ಕಣ್ಣಿನ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆ. ಮೊಬೈಲ್ ಕಣ್ಣಿನ ಆರೋಗ್ಯದ ಜೊತೆಗೆ ಮಕ್ಕಳ ವಿದ್ಯಾಭ್ಯಾಸ ಹಾಳು ಮಾಡುತ್ತಿದೆ ಎಂದು ಹೇಳಿದರು.

ಪ್ರೌಢಶಾಲೆ ಮುಖ್ಯ ಶಿಕ್ಷಕ ಆರ್.ಎಸ್. ಬೂದನ್ನವರ, ಸಹಶಿಕ್ಷಕರಾದ ಎಸ್.ಆರ್. ಕಾತರಕಿ, ಎಚ್.ಎನ್. ನರಸಾಪುರ, ಐ.ಎ. ಸೋಲಾಪುರ, ಎಸ್.ಎಸ್. ಲೋಣಿ, ನಾಗರಾಜ ಹೊಸೂರ, ಮೃಣಾಲ್ ಮಣೂರ, ಎಲ್.ಎಸ್. ಗುಮಾಸ್ತ, ಭಾರತಿ ಮಾನ್ವಿ, ಶಂಕ್ರಮ್ಮ ಮಂಗಳೂರು, ಗಿರಿಜಾ ದಳವಾಯಿ, ಸುವರ್ಣ ಹೂಗಾರ, ಪದ್ಮಾವತಿ ಕೋಳಿವಾಡ ಇತರರು ಉಪಸ್ಥಿತರಿದ್ದರು.