ಸಾರಾಂಶ
ಕನ್ನಡಪ್ರಭ ಪಾರ್ತೆ ಗುಬ್ಬಿ
ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸಿಗಬೇಕು ಎಂಬ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಭಾಗದಲ್ಲೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಮಾಡಲಾಗುತ್ತಿದೆ ಎಂದು ಸಿದ್ದಗಂಗಾ ಆಸ್ಪತ್ರೆಯ ವೈದ್ಯ ಡಾ. ಎಸ್. ಪರಮೇಶ್ ತಿಳಿಸಿದರು.
ತಾಲೂಕಿನ ಕಲ್ಲೂರು ಕ್ರಾಸ್ ನಲ್ಲಿ ಸಿದ್ದಗಂಗಾ ಮಹಾವಿದ್ಯಾಲಯ ಮತ್ತು ಸಿದ್ದಗಂಗಾ ಆಸ್ಪತ್ರೆಯ ಎಸ್. ಪರಮೇಶ್ ಹಿತೈಷಿ ಬಳಗದಿಂದ ಬೃಹತ್ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಆಸ್ಪತ್ರೆಯಿಂದ ಇದುವರೆಗೂ ನೂರಾರು ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಲಕ್ಷಾಂತರ ಜನರಿಗೆ ಅನುಕೂಲವಾಗಿದೆ.
ಸಿದ್ದಗಂಗಾ ಶ್ರೀಗಳ ಆಶೀರ್ವಾದದಿಂದ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಬೇಕು ಎಂಬ ನಿಟ್ಟಿನಲ್ಲಿ ಈ ಕೆಲಸವನ್ನು ನಿರಂತರ ಮಾಡುತ್ತಿದ್ದೇವೆ.
ಸಿದ್ದಗಂಗಾ ಆಸ್ಪತ್ರೆಯಲ್ಲಿ ಉಚಿತವಾಗಿಯೂ ಸಹ ಚಿಕಿತ್ಸೆ ನೀಡಲು ನಾವು ಬದ್ಧರಾಗಿದ್ದು, ಎಲ್ಲ ರೀತಿಯ ಆರೋಗ್ಯಕ್ಕೆ ಸಂಬಂಧಪಟ್ಟ ಅನುಕೂಲತೆಗಳನ್ನು ಕಲ್ಪಿಸಲಾಗಿದೆ. ಇದರ ಸದುಪಯೋಗವನ್ನು ತಾವು ಪಡೆದುಕೊಳ್ಳಬೇಕು.
ಪ್ರತಿನಿತ್ಯದ ಜೀವನದಲ್ಲಿ ಒಂದಲ್ಲ ಒಂದು ಅನಾರೋಗ್ಯ ಸಮಸ್ಯೆಗಳು ಕಾಡುತ್ತಲೇ ಇವೆ. ಯಾರೂ ಕೂಡ ಅದನ್ನು ನಿರ್ಲಕ್ಷಿಸದೇ ಒಮ್ಮೆಯಾದರೂ ಸಂಪೂರ್ಣ ದೇಹಪರೀಕ್ಷೆ ಮಾಡಿಸಿದಾಗ ಮಾತ್ರ ಸಮಸ್ಯೆಗಳು ಅರ್ಥವಾಗುತ್ತವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಡಾ.ವೀಣಾ ಪರಮೇಶ್, ಡಾ.ದುಷ್ಯಂತ್, ಪಿ.ಆರ್.ಓ ಕಾಂತರಾಜ್ ಸೇರಿದಂತೆ ಸಿದ್ದಲಿಂಗ ಸ್ವಾಮಿ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು
ಗುಬ್ಬಿ ತಾಲೂಕಿನ ಕಲ್ಲೂರು ಕ್ರಾಸ್ ನಲ್ಲಿ ಸಿದ್ದಗಂಗಾ ಮಹಾವಿದ್ಯಾಲಯ ಮತ್ತು ಸಿದ್ದಗಂಗಾ ಆಸ್ಪತ್ರೆಯ ಎಸ್. ಪರಮೇಶ್ ರ ಹಿತೈಷಿ ಬಳಗದಿಂದ ಬೃಹತ್ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮ ನಡೆಯಿತು.