ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಬಸವನ ಬೆಟ್ಟದ ಬಸವನಹಳ್ಳಿಯಲ್ಲಿ ಲಯನ್ಸ್ ಕ್ಲಬ್‌ನಿಂದ ನಡೆದ ಆರೋಗ್ಯ ಹಾಗೂ ಮಧುಮೇಹ ಉಚಿತ ತಪಾಸಣೆ ಶಿಬಿರದಲ್ಲಿ ಸುಮಾರು 85ಕ್ಕೂ ಹೆಚ್ಚು ಶಿಬಿರಾರ್ಥಿಗಳನ್ನು ಪರೀಕ್ಷಿಸಿ ಉಚಿತವಾಗಿ ಮಾತ್ರೆ, ಔಷಧಿ ನೀಡಲಾಯಿತು.ವೈದಾಧಿಕಾರಿ ಡಾ.ನಾಗೇಶ್ ಆರೋಗ್ಯ ತಪಾಸಣೆ ನಡೆಸಿ ಮಾತನಾಡಿ, ಜನರು ವರ್ಷಕ್ಕೊಮ್ಮೆಯಾದರೂ ನಿಮ್ಮ ಆರೋಗ್ಯದ ದೃಷ್ಟಿಯಿಂದ ತಪಾಸಣೆ ಮಾಡಿಸಿಕೊಳ್ಳುವುದು ತುಂಬಾ ಸೂಕ್ತ. ಯಾವುದಾದರೂ ಕಾಯಿಲೆ ಇದ್ದರೆ ಪ್ರಥಮ ಹಂತದಲ್ಲೇ ಚಿಕಿತ್ಸೆ ಪಡೆದುಕೊಂಡರೆ ಮುಂದೆಯೂ ನೀವು ಆರೋಗ್ಯವಂತರಾಗಿರಲು ಸಹಕಾರಿಯಾಗಲಿದೆ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಎನ್.ಕೆ.ಕುಮಾರ್ ಮಾತನಾಡಿ, ಸಂಸ್ಥೆಯಿಂದ ಬಸವನಹಳ್ಳಿ ಕುಗ್ರಾಮ ಜನರ ಆರೋಗ್ಯದ ದೃಷ್ಟಿಯನ್ನು ಶಿಬಿರ ಏರ್ಪಡಿಸಿದ್ದೇವೆ. ಪಟ್ಟಣ ಪ್ರದೇಶಗಳಿಗೆ ಹೋಗಿ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಹೆಚ್ಚು ಹಣ ವೆಚ್ಚ ಮಾಡುವುದಕ್ಕಿಂತ ಇಂತಹ ಶಿಬಿರದಗಳ ಸದ್ಬಳಕೆ ಮಾಡಿಕೊಳ್ಳುವಂತೆ ಗ್ರಾಮಸ್ಥರಿಗೆ ಮನವಿ ಮಾಡಿದರು.ಬಸವನಹಳ್ಳಿ ಯುವ ಮುಖಂಡ ಹಾಗೂ ಗ್ರಾಪಂ ಸದಸ್ಯ ಶಶಿ ಮಾತನಾಡಿ, ಗ್ರಾಮದಲ್ಲಿ ಲಯನ್ಸ್ ಸಂಸ್ಥೆ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ. ನಮ್ಮ ಗ್ರಾಮದಲ್ಲಿ ಜನರ ಆರೋಗ್ಯ ಹದಗೆಟ್ಟರೆ 10 ಕಿಮೀ ಹಲಗೂರಿಗೆ ಹಾಗೂ 12 ಕಿಲೋಮೀಟರ್ ದಳವಾಯಿ ಕೋಡಿಹಳ್ಳಿಗೆ ಹೋಗಬೇಕು ವಾಹನದ ಸೌಕರ್ಯ ಇಲ್ಲ. ಇಂತಹ ಶಿಬಿರಗಳು ಗ್ರಾಮೀಣ ಪ್ರದೇಶದ ಜನತೆಗೆ ತುಂಬಾ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಎನ್.ಕೆ.ಕುಮಾರ್, ಡಾ.ನಾಗೇಶ್, ಜಯಶಂಕರ್, ಅಶ್ವಥ್ ನಾರಾಯಣ್, ಸಿ. ಪ್ರವೀಣ, ಮನೋಹರ, ಡಿ.ಎಲ್.ಮಾದೇಗೌಡ, ಶಿವರಾಜು, ಗ್ರಾಮ ಪಂಚಾಯ್ತಿ ಸದಸ್ಯ ಶಶಿಕುಮಾರ್, ಗ್ರಾಮದ ಮುಖಂಡ ಪುಟ್ಟೇಗೌಡ, ಹಾಗೂ ಆಸ್ಪತ್ರೆಯ ಸಿಬ್ಬಂದಿ ಇದ್ದರು.ನಾಳೆ ವಿದ್ಯುತ್ ವ್ಯತ್ಯಯ
ಮಂಡ್ಯ:66/11 ಕೆ.ವಿ ಕೆ.ಐ.ಎ.ಡಿ.ಬಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಹಮ್ಮಿಕೊಂಡಿರುವುದರಿಂದ ಎಫ್-1 ಅಸಿಟೇಟ್, ಎಫ್-2 ಹನಕೆರೆ, ಎಫ್-3 ಡೈರಿ, ಎಫ್-4 ಕೀಲಾರ, ಎಫ್-5 ಬಸವನಪುರ ಮತ್ತು ಎಫ್-11 ಡಿ.ಜಿ.ದೊಡ್ಡಿ ಫೀಡರ್‌ಗಳ ಮಾರ್ಗಗಳಲ್ಲಿ ಮೇ 15 ರಂದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್‌ನಲ್ಲಿ ವ್ಯತ್ಯಯವಾಗಲಿದೆ.
ಕೆ.ಐ.ಎ.ಡಿ.ಬಿ ವಿದ್ಯುತ್ ವಿತರಣಾ ಕೇಂದ್ರದ ನಗರ ಪ್ರದೇಶಗಳಾದ ಅಸಿಟೇಟ್ ಟೌನ್, ಡಿ.ಜಿ.ದೊಡ್ಡಿ, ಫ್ಯಾಕ್ಟರಿ ವೃತ್ತ ಮತ್ತು ಬೆಂಗಳೂರು ಮುಖ್ಯ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.ಗ್ರಾಮಾಂತರ ಪ್ರದೇಶಗಳಾದ ಮರಕಾಡುದೊಡ್ಡಿ, ಶ್ರೀನಿವಾಸಪುರ ಗೇಟ್, ಮಲ್ಲಯ್ಯನದೊಡ್ಡಿ ಕಟ್ಟೆದೊಡ್ಡಿ , ಬಿ.ಗೌಡಗೆರೆ, ಹೊಸಬೂದನೂರು, ಹಳೇಬೂದನೂರು, ಹನಕೆರೆ ಐಪಿ ಮಾರ್ಗ, ಕೀಲಾರ ಐ.ಪಿ ಮಾರ್ಗ, ಬಸವನಪುರ ಐ.ಪಿ ಮಾರ್ಗ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯಾತ್ಯಯ ಉಂಟಾಗಲಿದ್ದು ಸಾರ್ವಜನಿಕರು ಕಂಪನಿಯೊಂದಿಗೆ ಸಹಕರಿಸಬೇಕಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.