ಸಾರಾಂಶ
ರಬಕವಿ-ಬನಹಟ್ಟಿ: ನಗರದ ವಿಶ್ವಚೇತನ ಜ್ಞಾನ ಯೋಗಾಶ್ರಮದಲ್ಲಿ ಲಿಂಗರಾಜ ಗ್ರಾಮೀಣಾಭಿವೃದ್ಧಿ ಸೇವಾ ಸಂಘದಿಂದ ನೇತ್ರ ಶಸ್ತ್ರಚಿಕತ್ಸಾ ಉಚಿತ ಶಿಬಿರ ಹಾಗೂ ನೇತ್ರದಾನ ನೋಂದಣಿ ಕಾರ್ಯಕ್ರಮ ಶುಕ್ರವಾರ ಜರುಗಿತು. ತೇರದಾಳ ಶಾಸಕ ಸಿದ್ದು ಸವದಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನೂರಾರು ಜನರ ನೇತ್ರ ತಪಾಸಣೆ ಮಾಡಿಸಿಕೊಂಡರು. ಅಗತ್ಯ ಇರೋರಿಗೆ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ,ರಬಕವಿ-ಬನಹಟ್ಟಿ
ಕಣ್ಣು ಮಾನವನ ದೇಹದ ಅತೀ ಸೂಕ್ಷ್ಮವಾದ ಅಂಗ. ಇದನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕು. ನೇತ್ರಚಿಕಿತ್ಸೆ ಸೌಲಭ್ಯ ಇಂದು ಬಹಳಷ್ಟು ದುಬಾರಿಯಾಗಿರುವ ಕಾರಣ ಬಡಜನರಿಗೆ ಆರೋಗ್ಯ ಉಚಿತ ತಪಾಸಣೆ ಶಿಬಿರಗಳು ಅನುಕೂಲವಾಗಿವೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.ಶುಕ್ರವಾರ ರಬಕವಿ-ಬನಹಟ್ಟಿ ನಗರದ ವಿಶ್ವಚೇತನ ಜ್ಞಾನ ಯೋಗಾಶ್ರಮದಲ್ಲಿ ಲಿಂಗರಾಜ ಗ್ರಾಮೀಣಾಭಿವೃದ್ಧಿ ಸೇವಾ ಸಂಘದಿಂದ ನೇತ್ರ ಶಸ್ತ್ರಚಿಕತ್ಸಾ ಉಚಿತ ಶಿಬಿರ ಹಾಗೂ ನೇತ್ರದಾನ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದಿನ ಒತ್ತಡದ ಜೀವನ, ಆಹಾರ ಹಾಗೂ ಜೀವನ ಕ್ರಮದಿಂದ ನಿತ್ಯ ಆರೋಗ್ಯದಲ್ಲಿ ಒಂದಲ್ಲೊಂದು ಸಮಸ್ಯೆ ಕಾಣುತ್ತಿದ್ದೇವೆ. ಪ್ರತಿಯೊಬ್ಬರೂ 2-3 ತಿಂಗಳಿಗೆ ಒಂದು ಬಾರಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ದೇಹದ ಆರೋಗ್ಯದ ರಕ್ಷಣೆಯ ಜತೆಗೆ ಕಣ್ಣಿನ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕೆಂದು ಸವದಿ ಹೇಳಿದರು.
ತಾಲೂಕು ವೈದಾಧಿಕಾರಿ ಡಾ.ಜಿ.ಎಸ್. ಗಲಗಲಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಬಾಬಾಗೌಡ ಪಾಟೀಲ, ಸುರೇಶ ಅಕ್ಕಿವಾಟ, ಧರೆಪ್ಪ ಉಳ್ಳಾಗಡ್ಡಿ, ಶಿವಬಸಯ್ಯ ಮಠಪತಿ, ವಿಜಯಕುಮಾರ ಡೊಮನಾಳ, ವಿರೇಶ ಆಸಂಗಿ, ವರ್ಧಮಾನ ಕೋರಿ, ಭುಜಬುಲಿ ವೆಂಕಟಾಪೂರ ಶಿವಪ್ರಕಾಶ ತುಕ್ಕಣ್ಣವರ, ಪವಿತ್ರಾ ತುಕ್ಕಣ್ಣವರ ಇತರರು ಇದ್ದರು.