ಸಿದ್ದಾಪುರದಲ್ಲಿ ಉಚಿತ ಆರೋಗ್ಯ ತಪಾಸಣೆ

| Published : May 18 2025, 01:28 AM IST

ಸಾರಾಂಶ

ಸಿದ್ದಾಪುರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ಗಣ್ಯರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಎಸ್.ಎನ್.ಡಿ.ಪಿ ಯೋಗಂ ಕೊಡಗು ಯೂನಿಯನ್ ವತಿಯಿಂದ ಸಿದ್ದಾಪುರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದು ಸಾರ್ವಜನಿಕರು‌ ಸದುಪಯೋಗ ಪಡೆದುಕೊಳ್ಳುವಂತೆ ಎಸ್ ಎನ್ ಡಿ ಪಿ ಯೋಗಂ ಅಧ್ಯಕ್ಷ ವಿ ಕೆ ಲೋಕೇಶ್ ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಎಸ್ ಎನ್ ಡಿ ಪಿ ಸಂಘಟನೆ ಸಮಾಜದಲ್ಲಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ ಬಡವರಿಗೆ ವೈದ್ಯಕೀಯ ನೆರವು ಬಡವರಿಗೆ ಉಚಿತ ಆಂಬುಲೆನ್ಸ್ ಸೇವೆಯನ್ನು ಒದಗಿಸುತ್ತಿದೆ. ಸೇವೆಯಿಂದ ಸಂಘಟನೆ ಎಂಬ ಧ್ಯೇಯ ವಾಕ್ಯದಂತೆ ಸಂಘಟನೆ ಕಾರ್ಯನಿರ್ವಹಿಸುತಿದೆ ಎಂದರು.

ಮೇ 18ರಂದು ಎಸ್ ಎನ್ ಡಿ ಪಿ ಯೋಗಂ ಕೊಡಗು ಪ್ರಾಯೋಜಕತ್ವದಲ್ಲಿ ಕೆ.ವಿ.ಜಿ. ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಕೆ.ವಿ.ಜಿ. ಆಯುರ್ವೇದ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ, ಸುಳ್ಯ ಇವರುಗಳ ಸಹಯೋಗದೊಂದಿಗೆ ಸಿದ್ದಾಪುರದ ಸ್ವರ್ಣಮಾಲ ಕಲ್ಯಾಣ ಮಂಟಪದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದು ಶಿಬಿರದಲ್ಲಿ ಸಾರ್ವಜನಿಕರ ಸಂಪೂರ್ಣ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ತಪಾಸಣೆ ಮತ್ತು ಆಲೋಪಥಿ ಮತ್ತು ಆಯುರ್ವೇದಿಕ್ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು.

18 ರಂದು ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಮಾಜಿ ಸಭಾಧ್ಯಕ್ಷರಾದ ಕೆ ಜಿ ಬೋಪಯ್ಯ ಉದ್ಘಾಟಿಸಲಿದ್ದು ಶಿಬಿರವನ್ನು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಹರಪಳ್ಳಿ ರವಿಂದ್ರ ಉದ್ಘಾಟಿಸಲಿರುವರು ಹಾಗೂ ಅಕಾಡೆಮಿ ಆಪ್ ಲಿಬರಲ್ ಎಜುಕೇಶ್ ಹಾಗೂ ಕೆವಿಜಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ನಿರ್ದೇಶಕರಾದ ಡಾ. ಕೆ ವಿ ಚಿದಾನಂದ ಪ್ರಾಸ್ತಾವಿಕ ಮಾತನಾಡಲಿದ್ದಾರೆ. ನೆಲ್ಯಹುದಿಕೇರಿಯ ಸ್ವರ್ಣ ಕ್ಲಿನಿಕ್ ವೈದ್ಯರಾದ ಡಾ. ಉದಯಕುಮಾರ್ ಗೌರವ ಉಪಸ್ಥಿತಿ ಇರುವುದಾಗಿ ಹೇಳಿದರು. ಸಿದ್ದಾಪುರ ಸುತ್ತಮುತ್ತಲಿನ ಜನತೆ ಈ ಉಚಿತ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.

ಗೋಷ್ಠಿಯಲ್ಲಿ ಯೋಗಂ ಕಾರ್ಯದರ್ಶಿ ಕೆ.ವಿ. ಪ್ರೇಮಾನಂದ , ಯೋಗಂ ಪ್ರಮುಖರಾದ ಆರ್. ದಿಲೀಪ್ , ಪಾಪಯ್ಯ , ರಾಜು, ಆನಂಧ , ಗಿರೀಶ್ ವನಿತಾ ಯೂನಿಯನ್ ಅಧ್ಯಕ್ಷೆ ರೀಶಾ ಸುರೇಂದ್ರನ್ ಇದ್ದರು.