ನಾಳೆ ಉಚಿತ ಆರೋಗ್ಯ ತಪಾಸಣೆ, ಆಯುರ್ವೇದ ಸಲಹೆ ಶಿಬಿರ - ಎಸ್.ಕೆ.ಕುಮಾರ್

| Published : Feb 26 2025, 01:05 AM IST

ನಾಳೆ ಉಚಿತ ಆರೋಗ್ಯ ತಪಾಸಣೆ, ಆಯುರ್ವೇದ ಸಲಹೆ ಶಿಬಿರ - ಎಸ್.ಕೆ.ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣ ರಸ್ತೆಯ ಲಯನ್ಸ್ ಭವನದಲ್ಲಿ ಫೆ.27ರಂದು ಉಚಿತ ಆರೋಗ್ಯ ತಪಾಸಣೆ ಹಾಗೂ ಆಯುರ್ವೇದ ಆರೋಗ್ಯ ಸಲಹೆ ಮತ್ತು ಔಷಧಿ ವಿತರಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಎನ್.ಕೆ.ಕುಮಾರ್ ತಿಳಿಸಿದರು.ಸರ್ಕಾರಿ ಆಯುರ್ವೇದ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ ಮೈಸೂರು ಮತ್ತು ಹಲಗೂರು ಲಯನ್ಸ್ ಕ್ಲಬ್ ಸಂಸ್ಥೆ ಆಶ್ರಯದಲ್ಲಿ ಶಿಬಿರವು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1:30ರವರೆಗೆ ನಡೆಯಲಿದೆ.

ಹಲಗೂರು: ಚನ್ನಪಟ್ಟಣ ರಸ್ತೆಯ ಲಯನ್ಸ್ ಭವನದಲ್ಲಿ ಫೆ.27ರಂದು ಉಚಿತ ಆರೋಗ್ಯ ತಪಾಸಣೆ ಹಾಗೂ ಆಯುರ್ವೇದ ಆರೋಗ್ಯ ಸಲಹೆ ಮತ್ತು ಔಷಧಿ ವಿತರಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಎನ್.ಕೆ.ಕುಮಾರ್ ತಿಳಿಸಿದರು.

ಸರ್ಕಾರಿ ಆಯುರ್ವೇದ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ ಮೈಸೂರು ಮತ್ತು ಹಲಗೂರು ಲಯನ್ಸ್ ಕ್ಲಬ್ ಸಂಸ್ಥೆ ಆಶ್ರಯದಲ್ಲಿ

ಶಿಬಿರವು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1:30ರವರೆಗೆ ನಡೆಯಲಿದೆ. ಹಲಗೂರು ಸುತ್ತಮುತ್ತಲಿನ ಆಸಕ್ತರು ಸಕಾಲದಲ್ಲಿ ಆಗಮಿಸಿ, ಶಿಬಿರದ ಪ್ರಯೋಜನ ಪಡೆದುಕೊಳ್ಳಲು ಮನವಿ ಮಾಡಿದರು.

ಶಿಬಿರದಲ್ಲಿ ಆಯುರ್ವೇದ ತಜ್ಞರಾದ ಡಾ.ಆರ್‌.ಸಿ.ಮೈತ್ರೇಯಿ ಮತ್ತು ವೈದ್ಯರ ತಂಡದಿಂದ ದಮ್ಮು, ಉಸಿರಾಟ ತೊಂದರೆ, ನರಗಳ ದೌರ್ಬಲ್ಯ, ಗಂಟು, ಸಂಧಿ ನೋವು, ಬಾಹುಗಳು, ನವೆ, ತುರಿಕೆ ಹಾಗೂ ಇತರೆ ಚರ್ಮ ಸಮಸ್ಯೆಗಳು, ರಕ್ತ ಹೀನತೆ, ನಿದ್ರಾ ಹೀನತೆ, ಮಕ್ಕಳ ಜ್ಞಾಪಕ ಶಕ್ತಿ ಮತ್ತು ರೋಗ ನಿರೋಧಕ ವೃದ್ಧಿ ಸೇರಿದಂತೆ ವಿವಿಧ ಬಗೆಯ ಸಮಸ್ಯೆಗಳಿಗೆ ತಪಾಸಣೆ ಮತ್ತು ಆಯುರ್ವೇದ ಔಷಧಿ ಮತ್ತು ಸಲಹೆಗಳನ್ನು ನೀಡಲಾಗುತ್ತದೆ ಎಂದು ಲಯನ್ಸ್ ಕ್ಲಬ್ ಹಿರಿಯ ಸದಸ್ಯ ಡಾ.ಶಂಷುದ್ದೀನ್ ತಿಳಿಸಿದರು.

ಲಯನ್ಸ್ ಕ್ಲಬ್ ಕಾರ್ಯದರ್ಶಿ ಡಿ.ಎಲ್.ಮಾದೇಗೌಡ, ಖಜಾಂಚಿ ಶಿವರಾಜು, ಸದಸ್ಯರಾದ ಮನೋಹರ್, ಕೃಷ್ಣ, ಪ್ರವೀಣ್ ಸೇರಿ ಹಲವರು ಭಾಗವಹಿಸಿದ್ದರು.