ಕಾನೂನು ಸೇವೆಯಡಿ ಆರ್ಥಿಕ ಅಶಕ್ತರಿಗೂ ಉಚಿತ ಕಾನೂನು ನೆರವು: ಸವಿತಾರಾಣಿ

| Published : Nov 10 2024, 01:53 AM IST

ಕಾನೂನು ಸೇವೆಯಡಿ ಆರ್ಥಿಕ ಅಶಕ್ತರಿಗೂ ಉಚಿತ ಕಾನೂನು ನೆರವು: ಸವಿತಾರಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು, ಎಲ್ಲ ತಾಲೂಕುಗಳ ನ್ಯಾಯಾಲಯಗಳಲ್ಲಿ ಉಚಿತ ಕಾನೂನು ಸೇವಾ ಸಮಿತಿ ಇದ್ದು ಆರ್ಥಿಕವಾಗಿ ಅಶಕ್ತರಾಗಿರುವ ಅರ್ಹರು ಉಚಿತ ಕಾನೂನು ನೆರವು ಪಡೆದುಕೊಳ್ಳಬಹುದು ಎಂದು ಕಡೂರು ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶರಾದ ಸವಿತಾರಾಣಿ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟನೆ

ಕನ್ನಡಪ್ರಭ ವಾರ್ತೆ,ಕಡೂರು

ಎಲ್ಲ ತಾಲೂಕುಗಳ ನ್ಯಾಯಾಲಯಗಳಲ್ಲಿ ಉಚಿತ ಕಾನೂನು ಸೇವಾ ಸಮಿತಿ ಇದ್ದು ಆರ್ಥಿಕವಾಗಿ ಅಶಕ್ತರಾಗಿರುವ ಅರ್ಹರು ಉಚಿತ ಕಾನೂನು ನೆರವು ಪಡೆದುಕೊಳ್ಳಬಹುದು ಎಂದು ಕಡೂರು ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶರಾದ ಸವಿತಾರಾಣಿ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಪದವಿ ಪೂರ್ವ ಕಾಲೇಜಿನಿಂದ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 1987 ರಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಕಾಯ್ದೆ ಜಾರಿಗೆ ಬಂದಿದ್ದು ಆರ್ಥಿಕ ಅಶಕ್ತರು ಎಂಬ ಕಾರಣ ದಿಂದ ಯಾವುದೇ ನಾಗರಿಕರು ನ್ಯಾಯ ಪಡೆಯುವ ಅವಕಾಶ ನಿರಾಕರಿಸಲಾಗುವುದಿಲ್ಲ ಎಂದು ಖಚಿತಪಡಿಸಿ ಕೊಳ್ಳಲು ಸಂವಿಧಾನದ ಆಧಾರದ ಮೇಲೆ ಕಾನೂನು ಸೇವಾ ಪ್ರಾಧಿಕಾರದ ಸೇವೆ ನೀಡುವ ಉದ್ದೇಶಕ್ಕಾಗಿ ತಾಲೂಕು ಕಾನೂನು ಸೇವಾ ಪ್ರಾಧಿಕಾರ ತೆರೆಯಲಾಗಿದೆ ಎಂದರು. ಜನತಾ ನ್ಯಾಯಾಲಯದಲ್ಲಿಯೇ ಈ ಅವಕಾಶ ಪಡೆಯಬಹುದು. ಪ್ರತಿಯೊಬ್ಬರು ಕಾನೂನಿನ ಬಗ್ಗೆ ತಿಳಿದು ಕೊಳ್ಳುವುದರಿಂದ ಅಪರಾಧಗಳನ್ನು ನಿಯಂತ್ರಿಸಬಹುದು. ಕಾನೂನಿನ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಂಡರೆ ಭವಿಷ್ಯದಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಇದೆ. ಅಲ್ಲದೆ ಸಮಾಜದ ಎಲ್ಲ ವರ್ಗದವರಿಗೆ ಉಚಿತ ಕಾನೂನು ನೆರವು ನೀಡಲು, ಕಾನೂನು ಅರಿವು ಮೂಡಿಸಲು ರಾಷ್ಟ್ರ,ರಾಜ್ಯ,ಜಿಲ್ಲಾ ಹಾಗೂ ತಾಲೂಕು ಕಾನೂನು ಸೇವಾ ಪ್ರಾಧಿಕಾರ ಸದಾ ಸಿದ್ಧ ಎಂದರು.. ಹಿರಿಯ ವಕೀಲ ಕೆ.ಎನ್.ರಾಜಣ್ಣ ಮಾತನಾಡಿ, ಬದಲಾದ ನ್ಯಾಯಾಂಗ ವ್ಯವಸ್ಥೆಯಲ್ಲಿ ₹3 ಲಕ್ಷ ವರಮಾನ ಇದ್ದವರು ಕಾನೂನು ಸೇವಾ ಪ್ರಾಧಿಕಾರದಲ್ಲಿ ಉಚಿತ ನ್ಯಾಯ ಪಡೆಯಲು ಅರ್ಹರು. ನ್ಯಾಯಾಂಗಕ್ಕೆ ಉನ್ನತ ಸ್ಥಾನವಿದ್ದು ಶಾಸಕಾಂಗ, ಕಾರ್ಯಾಂಗಗಳು ತಪ್ಪು ಮಾಡಿದರೆ ನ್ಯಾಯಾಂಗ ತಿದ್ದಿ ಬುದ್ದಿ ಹೇಳಿ ಶಿಕ್ಷಿಸುವ ಅಧಿಕಾರ ಹೊಂದಿದೆ. ಇಂತಹ ಕಾನೂನು ಅರಿವನ್ನು ವಿದ್ಯಾರ್ಥಿಗಳು ಪಡೆದರೆ ನಿಮ್ಮ ಅಕ್ಕಪಕ್ಕದವರಿಗೂ ಕಾನೂನಿನ ಬಗ್ಗೆ ತಿಳಿಸಲು ಸಾಧ್ಯವಿದೆ.ಕಾನೂನಿನ ಅಡಿ ಎಲ್ಲರೂ ಒಂದೇ. ವ್ಯಕ್ತಿ ಎಷ್ಟೇ ದೊಡ್ಡವನಾಗಿದ್ದರೂ ತಪ್ಪು ಮಾಡಿದರೆ ಕಾನೂನು ಶಿಕ್ಷೆ ನೀಡುತ್ತದೆ. ಸಾಮಾನ್ಯ ಕಾನೂನಿನ ಜ್ಞಾನದಿಂದ ಯಾವುದೇ ಅಪರಾಧ ಆಗದಂತೆ ನೋಡಿಕೊಳ್ಳಲು ಸಾಧ್ಯವಿದೆ. ಪೋಕ್ಸೊ, ಬಾಲ್ಯ ವಿವಾಹಗಳನ್ನು ತಡೆಯಲು ತಾವುಗಳು ಸಹ ಮುಂದೆ ಬರಬೇಕು ಕಾನೂನಿನ ಬಗ್ಗೆ ತಿಳಿ ಹೇಳಬೇಕು ಎಂದರು. ವಕೀಲರಾದ ಮಂಜುಳ ಮಚ್ಚೇರಿ ಮಾತನಾಡಿ, ಸಮಾಜ ತಿದ್ದಲು ಕಾನೂನಿನ ಅರಿವು ಮುಖ್ಯ. ಕಾನೂನು ಸೇವಾ ಪ್ರಾಧಿಕಾರ ಅರಿವು ಮೂಡಿಸಲು ಕಾಲೇಜುಗಳಲ್ಲಿ ಸಭೆ ಮಾಡುತ್ತಿದ್ದು ಕಾನೂನಿನ ಬಗ್ಗೆ ತಿಳಿದುಕೊಂಡು ಬೇರೆಯವರಿಗೂ ತಿಳಿಸಿ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಎಸ್.ತವರಾಜ್ ಮಾತನಾಡಿ, ವಿದ್ಯಾರ್ಥಿಗಳಿಗೆ ಕಾನೂನು ಮಾಹಿತಿ ನೀಡಿದ ನ್ಯಾಯಧೀಶರು, ವಕೀಲರಿಗೆ ಧನ್ಯವಾದ ಹೇಳುತ್ತೇವೆ. ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಇದ್ದರೆ ಯಾವುದೇ ಸಮಸ್ಯೆ ಬಂದರೂ ನಿಭಾಯಿಸಬಹುದು ಎಂದರು.3 ನೇ ಹೆಚ್ಚುವರಿ ನ್ಯಾಯಧೀಶರಾದ ತಹಖಲೀಲ್, ಉಪನ್ಯಾಸಕ ಬಸವರಾಜಪ್ಪ, ಸನಾಹುಲ್ಲಾ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.9ಕೆಕೆಡಿಯು1.

ಕಡೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾನೂನಿನ ಅರಿವು ಕಾರ್ಯಕ್ರಮವನ್ನು ನ್ಯಾಯಧೀಶರಾದ ಸವಿತಾರಾಣಿ ಉದ್ಘಾಟಿಸಿದರು.