ಸಾರಾಂಶ
ಸುಮಾ ಚಿತ್ರ ಮಂದಿರದಲ್ಲಿ ನಟ ದಿ.ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಶಿವರಾಜ್ ಕುಮಾರ್ ಅಭಿಮಾನಿಗಳ ಬಳಗದ ಮೆಣಸಗೆರೆ ರಾಜೇಶ್ ರ ‘ಬೇಗೂರು ಕಾಲೋನಿ’ ಎಂಬ ಚಲನಚಿತ್ರದ ಉಚಿತ ಪ್ರದರ್ಶನವನ್ನು ಅಪ್ಪು ಅಭಿಮಾನಿಗಳಿಗೆ ಏರ್ಪಡಿಸಿದರು.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಸುಮಾ ಚಿತ್ರ ಮಂದಿರದಲ್ಲಿ ನಟ ದಿ.ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಶಿವರಾಜ್ ಕುಮಾರ್ ಅಭಿಮಾನಿಗಳ ಬಳಗದ ಮೆಣಸಗೆರೆ ರಾಜೇಶ್ ರ ‘ಬೇಗೂರು ಕಾಲೋನಿ’ ಎಂಬ ಚಲನಚಿತ್ರದ ಉಚಿತ ಪ್ರದರ್ಶನವನ್ನು ಅಪ್ಪು ಅಭಿಮಾನಿಗಳಿಗೆ ಏರ್ಪಡಿಸಿದರು.ಚಿತ್ರನಟ ಮಂಜು ಹಾಗೂ ಸಿನಿಮಾ ಹಂಚಿಕೆದಾರ ಮೆಣಸಗೆರೆ ರಾಜೇಶ್ ಅವರನ್ನು ಈ ವೇಳೆ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರು ಅಭಿನಂದಿಸಿ ಗೌರವಿಸಿದರು. ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು.
ನಂತರ ಕೇಕ್ ಕತ್ತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಎಡಗೈಲಿ ಕೊಟ್ಟಿದ್ದು ಬಲಗೈಗೆ ತಿಳಿಯಬಾರದು ಎಂಬ ರೀತಿ ಸಮಾಜಮುಖಿ ಕಾರ್ಯಗಳನ್ನು ಮಾಡಿ ತಮ್ಮ ವ್ಯಕ್ತಿತ್ವಕ್ಕೆ ಮಾದರಿಯಾದವರು ನಟ ಪುನೀತ್ ರಾಜಕುಮಾರ್. ಅವರು ಸೂರ್ಯ ಚಂದ್ರ ಇರುವವರೆಗೂ ಅಜರಾಮರ ಎಂದರು.ಗ್ರಾಮಾಂತರ ಪ್ರದೇಶದ ಕಲಾವಿದರು ಬೇಗೂರು ಕಾಲೋನಿ ಸಿನಿಮಾವನ್ನು ಬಿಡುಗಡೆಗೊಳಿಸಿದ್ದಾರೆ. ಈ ಸಿನಿಮಾ ಸಾಮಾನ್ಯವಾಗಿ ಗರೀಬಿ ಕಾಲೋನಿಯಲ್ಲಿ ವಾಸಿಸುವವರ ಸಮಸ್ಯೆಗಳ ಬಗ್ಗೆ ಮೂಡಿ ಬಂದಿದೆ. ಬೇಗೂರು ಕಾಲೋನಿ ಚಿತ್ರ ಯಶಸ್ಸು ಗಳಿಸಲಿ ಎಂದು ಹಾರೈಸಿದರು.
ಬಳಿಕ ಸುಮಾ ಚಲನಚಿತ್ರಮಂದಿರದಲ್ಲಿ ತಮ್ಮ ಅಭಿಮಾನಿಗಳು, ಬೆಂಬಲಿಗರೊಂದಿಗೆ ಕುಳಿತು ಬೇಗೂರು ಕಾಲೋನಿ ಸಿನಿಮಾ ವೀಕ್ಷಿಸಿದರು. ಈ ವೇಳೆ ಬೇಗೂರು ಕಾಲೋನಿ ಚಿತ್ರದ ನಾಯಕ ನಟ ಮಂಜು, ಕಿರುತೆರೆ ನಟಿ ಲತಾ, ಮೆಣಸಗೆರೆ ರಾಜೇಶ್, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಹಾಗಲಹಳ್ಳಿ ಚಿಕ್ಕತಿಮ್ಮೇಗೌಡ, ಮುಖಂಡರಾದ ಕೆ.ಟಿ.ಸುರೇಶ್, ಹೋಂಡಾ ಸಿದ್ದೇಗೌಡ, ಅಣ್ಣೂರು ವಿನು, ಚಂದ್ರೇಶ್ ಪಟೇಲ್, ರಘು ವೆಂಕಟೇಗೌಡ, ಮನೋಹರ್, ಕರಡಕೆರೆ ಯೋಗೇಶ್, ಗುಡಿಗೆರೆ ಬಸವರಾಜು, ತೊರೆಬೊಮ್ಮನಹಳ್ಳಿ ಗ್ರಾಪಂ ಅಧ್ಯಕ್ಷ ಜಗದೀಶ್, ಶ್ರೀನಿವಾಸ್, ಈಶಪ್ರಸಾದ್, ಬೊಪ್ಪಸಮುದ್ರದ ಗೌರಿಶಂಕರ್, ಗುರುದೇವರಹಳ್ಳಿ ವಿನಯ್, ಮೆಣಸಗೆರೆ ಸುರೇಶ್ ಸೇರಿದಂತೆ ಹಲವರಿದ್ದರು.