ಸಾರಾಂಶ
Free Tool: Application Invitation from Eligible
ಯಾದಗಿರಿ: 2024-25ನೇ ಸಾಲಿನ ಜಿಲ್ಲಾ ವಲಯ ಯೋಜನೆಯ “ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಸಲಕರಣೆ ಯೋಜನೆಯಡಿ ಗ್ರಾಮೀಣ ಪ್ರದೇಶದ ವೃತ್ತಿನಿರತ ಗೌಂಡಿ ಕಸಬುದಾರರಿಗೆ ಉಚಿತ ಉಪಕರಣ ವಿತರಿಸಲು ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿ.ಪಂ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಉಪನಿರ್ದೇಶಕರ ಮಹೇಶ ತಿಳಿಸಿದ್ದಾರೆ.
ಜನ್ಮ ದಿನಾಂಕ, ಜಾತಿ ಪ್ರಮಾಣ ಪತ್ರ, ಆದಾಯ ದೃಢೀಕರಣ ಪತ್ರ, ಪಡಿತರ ಚೀಟಿ, ಪಾಸ್ಪೋರ್ಟ್ ಅಳತೆ ಭಾವಚಿತ್ರ, 20ರು. ಇ-ಸ್ಟ್ಯಾಂಪ್ ನಲ್ಲಿ ನಿಗದಿತ ನಮೂನೆಯಲ್ಲಿ ಮುಚ್ಚಳಿಕೆ ಪತ್ರ. ವಿಕಲಚೇತನ ಪ್ರಮಾಣ ಪತ್ರ, ಆಯಾ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಯಿಂದ, ತಾಲೂಕಿನ ಕೈಗಾರಿಕಾ ವಿಸ್ತರಣಾಧಿ ಕಾರಿಯಿಂದ ಗೌಂಡಿ ವೃತ್ತಿ ಬಗ್ಗೆ ಧೃಢೀಕರಣ ಪ್ರಮಾಣ ಪತ್ರ ಸಲ್ಲಿಸಬೇಕು. ಅರ್ಜಿದಾರರು ಆಯಾ ತಾಲೂಕಿನಲ್ಲಿ ಅರ್ಜಿ ಸಲ್ಲಿಸಬೇಕು. ಕನಿಷ್ಠ 18 ವರ್ಷ ತುಂಬಿರಬೇಕು, ಎಸ್.ಸಿ, ಎಸ್.ಟಿ ವರ್ಗದವರಿಗೆ ಗರಿಷ್ಠ 45 ವರ್ಷ, ಸಾಮಾನ್ಯ, ಹಿಂದುಳಿದ ವರ್ಗದವರಿಗೆ, ಇತರೆ 42 ವರ್ಷ ಒಳಗಿರಬೇಕು. ವೆಬ್‌ಸೈಟ್ zpyadgiri.karnataka.gov.in, yadgir.nic.in ನಲ್ಲಿ 18 ರಿಂದ 31ರ ಒಳಗೆ ಅರ್ಜಿ ಸಲ್ಲಿಸಬೇಕು. ದೂ.ಸಂ.08473253791ಗೆ ಸಂಪರ್ಕಿಸಬಹುದು ತಿಳಿಸಿದ್ದಾರೆ.