ಮೆಗ್ಗಾನ್‌ ಆಸ್ಪತ್ರೆಯಲ್ಲಿ 3000 ರೋಗಿಗಳಿಗೆ ಉಚಿತ ಚಿಕಿತ್ಸೆ: ಡಾ.ವಿರೂಪಾಕ್ಷಪ್ಪ

| Published : Oct 16 2025, 02:00 AM IST

ಮೆಗ್ಗಾನ್‌ ಆಸ್ಪತ್ರೆಯಲ್ಲಿ 3000 ರೋಗಿಗಳಿಗೆ ಉಚಿತ ಚಿಕಿತ್ಸೆ: ಡಾ.ವಿರೂಪಾಕ್ಷಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಜನವರಿಯಿಂದ ಆಗಸ್ಟ್ ನಲ್ಲಿ ಪ್ರತಿ ದಿನ ಹೊರರೋಗಿಗಳು ಮತ್ತು ಒಳರೋಗಿಗಳು ಸೇರಿ 4500 ಜನ ಹಾಗೂ ಪ್ರತಿ ತಿಂಗಳು ಎಬಿಆರ್‌ಕೆ (ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ) ಯೋಜನೆಯಡಿ 3000 ರೋಗಿಗಳು ಉಚಿತ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲಾ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಜನವರಿಯಿಂದ ಆಗಸ್ಟ್ ನಲ್ಲಿ ಪ್ರತಿ ದಿನ ಹೊರರೋಗಿಗಳು ಮತ್ತು ಒಳರೋಗಿಗಳು ಸೇರಿ 4500 ಜನ ಹಾಗೂ ಪ್ರತಿ ತಿಂಗಳು ಎಬಿಆರ್‌ಕೆ (ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ) ಯೋಜನೆಯಡಿ 3000 ರೋಗಿಗಳು ಉಚಿತ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ 200 ಕೋಟಿ ರು. ಹಣವನ್ನು ಪ್ರತಿರ್ಷ ರೋಗಿಗಳಿಗೆ ಈ ಯೋಜನೆಯಲ್ಲಿ ವೆಚ್ಚ ಮಾಡುತ್ತಿದೆ ಎಂದು ಸಿಮ್ಸ್ ನಿರ್ದೇಶಕ ಡಾ.ವಿರೂಪಾಕ್ಷಪ್ಪ ತಿಳಿಸಿದರು.

ನಗರದಲ್ಲಿ ಮಂಗಳವಾರ ಮಾಧ್ಯಮಗೊಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಮೆಗ್ಗಾನ್ ಆಸ್ಪತ್ರೆ 1200 ಹಾಸಿಗೆಯ ಸಾಮರ್ಥ್ಯವನ್ನು ಹೊಂದಿದೆ. ಇದರಿಂದ ಅಕ್ಕ ಪಕ್ಕದ ಜಿಲ್ಲೆಗಳಾದ ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಾವೇರಿ ಹಾಗೂ ಉತ್ತರ ಕನ್ನಡದಿಂದಲೂ ಸಹ ರೋಗಿಗಳು ಚಿಕಿತ್ಸೆಗಾಗಿ ಬರುತ್ತಿದ್ದು, ಪ್ರತಿ ದಿನ ಶೇ.90 ರಷ್ಟು ಹೊರರೋಗಿಗಳು ದಾಖಲಾಗುತ್ತಿದ್ದಾರೆ ಎಂದರು.

ಪ್ರತಿದಿನ 50 ರಿಂದ 60 ಮೇಜರ್ ಸರ್ಜರಿ ಹಾಗೂ 130 ರಿಂದ 140 ಜನ ಮೈನರ್ ಸರ್ಜರಿ ಮಾಡಲಾಗುತ್ತಿದ್ದು, ಪ್ರತಿ ತಿಂಗಳು 240 ನವಜಾತ ಶಿಶುಗಳ ಮಕ್ಕಳಿಗೆ ಉಚಿತ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ 25 ರಿಂದ 30 ಎಂಆರ್‌ಐ, 125 ಸಿಟಿಸ್ಕ್ಯಾನಿಂಗ್, 370 ರಿಂದ 400 ಜನರಿಗೆ ಎಕ್ಸ್ರೇ ಹಾಗೂ 100 ಜನರಿಗೆ ಅಲ್ಟ್ರಸೌಂಡ್ ಸ್ಕ್ಯಾನಿಂಗ್ ಸೇವೆಗಳನ್ನು ಪ್ರತಿ ದಿನ ನೀಡಲಾಗುತ್ತಿದೆ. ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಉಚಿತವಾಗಿ ಹಾಗೂ ಉತ್ತಮ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಇದರಿಂದ ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೆ ಅಕ್ಕಪಕ್ಕ ಜಿಲ್ಲೆಯ ಜನರಿಗೂ ಅನುಕೂಲವಾಗುತ್ತಿದೆ ಎಂದು ತಿಳಿಸಿದರು.

ಹೊರರೋಗಿಗಳ ಅನುಕೂಲಕ್ಕಾಗಿ ದಿನದ 24 ಗಂಟೆಯು ಒಪಿಡಿ ವಿಭಾಗವು ತೆರದಿದ್ದು, ಪ್ರಸ್ತುತ ಸೇವೆಯನ್ನು ಹೆಚ್ಚುವರಿ ಮಾಡಲು ಸೂಪರ್ ಸ್ಪೆಷಾಲಿಟಿ ಸೇವೆಗಳನ್ನು ಆರಂಭಿಸಲಾಗುತ್ತಿದೆ. ಅದರಂತೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ಲಾಸ್ಟಿಕ್ ಸರ್ಜರಿ, ಕ್ಯಾನ್ಸರ್ ಸರ್ಜರಿ, ನ್ಯೂರೋ ಸರ್ಜರಿ, ಮಕ್ಕಳ ಶಸ್ತ್ರಚಿಕಿತ್ಸೆ, ಮೂತ್ರ ರೋಗ ಶಸ್ತçಚಿಕಿತ್ಸೆ ಹಾಗೂ ಕಿಡ್ನಿ ಕಾಯಿಲೆ ಸಂಬಂಧಿಸಿದಂತೆ ಚಿಕಿತ್ಸೆ ನೀಡಲು ಚಿಂತನೆ ಮಾಡಲಾಗಿದ್ದು, ಇದರ ಸೇವೆ ಸೋಮವಾರ ಮತ್ತು ಗುರುವಾರ ಮಾತ್ರ ದೊರೆಯಲಿದೆ. ನರರೋಗ ಶಸ್ತ್ರಚಿಕಿತ್ಸಾ ಸೇವೆ ಮಂಗಳವಾರ, ಗುರುವಾರ, ಶನಿವಾರದಂದು ಹೊರರೋಗಿಗಳ ಸೇವೆಗೆ ಲಭ್ಯವಿದ್ದು, ಈ ಚಿಕಿತ್ಸೆಗೆ ಬಿ.ಪಿಎಲ್. ಕಾರ್ಡುದಾರರಿಗೆ ಎ,ಬಿ,ಎ,ಆರ್,ಕೆ ಅಡಿಯಲ್ಲಿ ಉಚಿತ ಸೌಲಭ್ಯ ನೀಡಲಾಗುತ್ತದೆ ಎಂದರು.

ಈಗ ಪ್ಯಾರ ಮೆಡಿಕಲ್, ಪಿಎಚ್‌ಎಸ್, ನರ್ಸಿಂಗ್ ಕಾಲೇಜುಗಳು ನಡೆಯುತ್ತಿದ್ದು, 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗುತ್ತಿದ್ದಾರೆ. ಸೂಪರ್ ಸ್ಪೆಷಲಿಟಿ, ಮಕ್ಕಳ ಆಸ್ಪತ್ರೆ, ವಸತಿ ಗೃಹ, ಯುಜಿ ಹಾಸ್ಟೆಲ್, ಬಾಯ್ಸ್ ಅಂಡ್ ಗರ್ಲ್ಸ್ ಹಾಸ್ಟೆಲ್, ಆಧುನಿಕ ಶವಗಾರ ಹಾಗೂ ವೈದ್ಯಕೀಯ ಅಧಿಕಾರಿಗಾಗಿ 237 ಕ್ವಾಟ್ರಸ್ ಮನೆಗಳನ್ನು ನಿರ್ಮಿಸಲಾಗಿದೆ ಎಂದರು.

ಸಿಮ್ಸ್ನ ಮುಖ್ಯ ಅಧೀಕ್ಷಕ ಡಾ.ಸಿದ್ದಪ್ಪ ಮಾತನಾಡಿ, ಉಪ ಲೋಕಾಯುಕ್ತರು ಮೆಗ್ಗಾನ್ ಭೇಟಿ ನೀಡಿ ರೋಗಿಗಳೊಂದಿಗೆ ಸಮಾಲೋಚಿಸಿದ್ದರೂ ಆಸ್ಪತ್ರೆಯ ಬಗ್ಗೆ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಆಸ್ಪತ್ರೆಯ ಒಳಾಂಗಣದಲ್ಲಿ ಹಾಗೂ ಹೊರಾಂಗಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮಾಡಲು ಈಗಾಗಲೇ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಸಿಮ್ಸ್ ಅಧೀಕ್ಷಕ ಡಾ. ತಿಮ್ಮಪ್ಪ, ಸಿಮ್ಸ್ ವಿಶೇಷ ಅಧಿಕಾರಿ ಪರಮೇಶ್ವರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಸಿದ್ದನಗೌಡ ಪಾಟೀಲ್, ವೈದ್ಯಕೀಯ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.