ಸಾರಾಂಶ
ಶಾಲೆಯಲ್ಲಿ ಹಲವು ವರ್ಷಗಳಿಂದ ೧೨೦ಕ್ಕೂ ಅಧಿಕ ವಿದ್ಯಾರ್ಥಿಗಳ ಮನೆಗೆ ಉಚಿತ ಎಲ್.ಪಿ.ಜಿ ಸಂಪರ್ಕ, ೨೫ ವಿದ್ಯಾರ್ಥಿಗಳ ಮನೆಗೆ ವಿದ್ಯುತ್ ಸಂಪರ್ಕ, ೮೧ ವಿದ್ಯಾರ್ಥಿಗಳ ಮನೆಗೆ ಸೋಲಾರ್ ಸಂಪರ್ಕ, ೧೫೦ ವಿದ್ಯಾರ್ಥಿಗಳ ಮನೆಗೆ ಉಚಿತ ಕುಕ್ಕರ್ ಕಲ್ಪಿಸಿದ್ದು, ಈ ಬಾರಿ ೫ ವಿದ್ಯಾರ್ಥಿಗಳಿಗೆ ದಾನಿಗಳ ನೆರವಿನಿಂದ ಎಲ್.ಪಿ.ಜಿ ಗ್ಯಾಸ್ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ನಿಟ್ಟೂರು ಪ್ರೌಢಶಾಲೆಯಲ್ಲಿ ಶನಿವಾರ ಈ ವರ್ಷ ಹೊಸ ದಾಖಲಾತಿಯಾದ ೮೦ ವಿದ್ಯಾರ್ಥಿಗಳಿಗೆ ಹಳೆವಿದ್ಯಾರ್ಥಿ, ನಿಟ್ಟೂರು ಎಜ್ಯುಕೇಶನಲ್ ಸೊಸೈಟಿಯ ಸದಸ್ಯ ಹಾಗೂ ಕ್ಲಾಸಿಕ್ ಬಿಲ್ಡರ್ಸ್ ಮಾಲಕ ಪ್ರಭಾಕರ ಜಿ. ಅವರ ಪ್ರಾಯೋಜಕತ್ವದಲ್ಲಿ ಉಚಿತ ಸಮವಸ್ತ್ರ ವಿತರಿಸಲಾಯಿತು.ಶಾಲೆಯಲ್ಲಿ ಹಲವು ವರ್ಷಗಳಿಂದ ೧೨೦ಕ್ಕೂ ಅಧಿಕ ವಿದ್ಯಾರ್ಥಿಗಳ ಮನೆಗೆ ಉಚಿತ ಎಲ್.ಪಿ.ಜಿ ಸಂಪರ್ಕ, ೨೫ ವಿದ್ಯಾರ್ಥಿಗಳ ಮನೆಗೆ ವಿದ್ಯುತ್ ಸಂಪರ್ಕ, ೮೧ ವಿದ್ಯಾರ್ಥಿಗಳ ಮನೆಗೆ ಸೋಲಾರ್ ಸಂಪರ್ಕ, ೧೫೦ ವಿದ್ಯಾರ್ಥಿಗಳ ಮನೆಗೆ ಉಚಿತ ಕುಕ್ಕರ್ ಕಲ್ಪಿಸಿದ್ದು, ಈ ಬಾರಿ ೫ ವಿದ್ಯಾರ್ಥಿಗಳಿಗೆ ದಾನಿಗಳ ನೆರವಿನಿಂದ ಎಲ್.ಪಿ.ಜಿ ಗ್ಯಾಸ್ ನೀಡಲಾಯಿತು.
ಈ ಸಂದರ್ಭ ಶಾಲೆಯ ಹಳೆವಿದ್ಯಾರ್ಥಿ ಕೆನರಾ ಬ್ಯಾಂಕ್ ಮುಖ್ಯ ಪ್ರಬಂಧಕ ವಿನಯ್ ಕುಮಾರ್ ಜಿ. ತಮ್ಮ ಪ್ರಾಯೋಜಕತ್ವದಲ್ಲಿ ೨೦ ವಿದ್ಯಾರ್ಥಿಗಳಿಗೆ ಉಚಿತ ಕುಕ್ಕರ್ ನೀಡುವ ಭರವಸೆ ನೀಡಿದರು.ಆಡಳಿತ ಮಂಡಳಿಯ ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯೋಪಾಧ್ಯಾಯಿನಿ ಅನಸೂಯ ಸ್ವಾಗತಿಸಿದರು. ಹಳೆವಿದ್ಯಾರ್ಥಿ ಸಂಘ ಅಧ್ಯಕ್ಷ ದಿನೇಶ್ ಪಿ. ಪೂಜಾರಿ, ಕಾರ್ಯದರ್ಶಿ ಹರೀಶ್ ಆಚಾರ್ಯ, ಜತೆಕಾರ್ಯದರ್ಶಿ ಹಯವದನ ಭಟ್ ಉಪಸ್ಥಿತರಿದ್ದರು. ಶಿಕ್ಷಕ ದೇವದಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ನಮಿತಾಶ್ರೀ ವಂದಿಸಿದರು.