ಗರ್ಭಕಂಠ ಕ್ಯಾನ್ಸರ್ ತಡೆಗೆ ಪ್ರತಿ ಹೆಣ್ಣು ಮಗುವಿಗೂ ಉಚಿತ ಲಸಿಕೆ-ಶಾಸಕ ಜಿಎಸ್ಪಿ

| Published : Jul 22 2025, 12:17 AM IST

ಗರ್ಭಕಂಠ ಕ್ಯಾನ್ಸರ್ ತಡೆಗೆ ಪ್ರತಿ ಹೆಣ್ಣು ಮಗುವಿಗೂ ಉಚಿತ ಲಸಿಕೆ-ಶಾಸಕ ಜಿಎಸ್ಪಿ
Share this Article
  • FB
  • TW
  • Linkdin
  • Email

ಸಾರಾಂಶ

ಗಂಭಕಂಠ ಕ್ಯಾನ್ಸರ್‌ನಿಂದ ಉಂಟಾಗುವ ಮಹಿಳೆಯರ ಸಾವು ತಪ್ಪಿಸುವಲ್ಲಿ ಪ್ರತಿ ಹೆಣ್ಣು ಮಗುವಿಗೂ ಎಚ್.ಪಿ.ವಿ ಲಸಿಕೆ (ವ್ಯಾಕ್ಸಿನೇಷನ್) ಹಾಕಿಸುವುದು ಅತೀ ಮುಖ್ಯವಾಗಿದ್ದು, ಈ ದಿಶೆಯಲ್ಲಿ ರೋಣ ತಾಲೂಕು ಹಾಗೂ ಮತಕ್ಷೇತ್ರದ ಪ್ರತಿಯೊಂದು ಹೆಣ್ಣು ಮಗುವಿಗೂ ಆ.1ರಿಂದ ಉಚಿತವಾಗಿ ಆರೋಗ್ಯ ಲಸಿಕೆ ಹಾಕುವ ಆಂದೋಲನ ಪ್ರಾರಂಭಗೊಳ್ಳಲಿದೆ ಎಂದು ಶಾಸಕ‌ ಜಿ.ಎಸ್. ಪಾಟೀಲ ಹೇಳಿದರು.

ರೋಣ: ಗಂಭಕಂಠ ಕ್ಯಾನ್ಸರ್‌ನಿಂದ ಉಂಟಾಗುವ ಮಹಿಳೆಯರ ಸಾವು ತಪ್ಪಿಸುವಲ್ಲಿ ಪ್ರತಿ ಹೆಣ್ಣು ಮಗುವಿಗೂ ಎಚ್.ಪಿ.ವಿ ಲಸಿಕೆ (ವ್ಯಾಕ್ಸಿನೇಷನ್) ಹಾಕಿಸುವುದು ಅತೀ ಮುಖ್ಯವಾಗಿದ್ದು, ಈ ದಿಶೆಯಲ್ಲಿ ರೋಣ ತಾಲೂಕು ಹಾಗೂ ಮತಕ್ಷೇತ್ರದ ಪ್ರತಿಯೊಂದು ಹೆಣ್ಣು ಮಗುವಿಗೂ ಆ.1ರಿಂದ ಉಚಿತವಾಗಿ ಆರೋಗ್ಯ ಲಸಿಕೆ ಹಾಕುವ ಆಂದೋಲನ ಪ್ರಾರಂಭಗೊಳ್ಳಲಿದೆ ಎಂದು ಶಾಸಕ‌ ಜಿ.ಎಸ್. ಪಾಟೀಲ ಹೇಳಿದರು.

ಅವರು ಸೋಮವಾರ ಪಟ್ಟಣದ ಗುರುಭವನದಲ್ಲಿ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ವತಿಯಿಂದ ಗರ್ಭಕೋಶ ಕ್ಯಾನ್ಸರ್ ತಡೆ ಎಚ್.ಪಿ.ವಿ. ಲಸಿಕೆ ಅಳವಡಿಕೆ ಆಂದೋಲನ ಪ್ರಾರಂಭ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಗರ್ಭಕೋಶ ಕ್ಯಾನ್ಸರ್‌ನಿಂದ ದೇಶದಲ್ಲಿ ಪ್ರತಿ 8 ನಿಮಿಷಕ್ಕೆ‌ ಒಬ್ಬ ಮಹಿಳೆಯ ಸಾವ ಸಂಭವಿಸುತ್ತಿದೆ ಎಂಬ ಆರೋಗ್ಯ ಇಲಾಖೆಯಿಂದ ದೃಢಪಟ್ಟಿದ್ದು, ಇದನ್ನು ತಡೆಗಟ್ಟುವಲ್ಲಿ ಎಚ್.ಪಿ.ವಿ ಲಸಿಕೆ ಕಂಡು ಹಿಡಿಯಲಾಗಿದೆ. ಈ ಲಸಿಕೆಯು ಅತ್ಯಂತ ಸುರಕ್ಷಿತವಾಗಿದೆ.ಆರೋಗ್ಯದ ಮೇಲೆ ಯಾವುದೇ ರೀತಿಯಿಂದ ಅಡ್ಡಪರಿಣಾಮ ಬೀರುವದಿಲ್ಲ. 9 ವರ್ಷದಿಂದ 14 ವರ್ಷದ ಹೆಣ್ಣು ಮಗುವಿಗೆ ಗರ್ಭಕೋಶ ಕ್ಯಾನ್ಸರ್ ತಡೆಗೆ ಎಚ್.ಪಿ.ವಿ. ಲಸಿಕೆ ಹಾಕಿಸಬೇಕು. ಈ ಲಸಿಕೆಗೆ ಹೊರಗಡೆ ₹ 2830 ಬೆಲೆಯಿದೆ. ಆದರೆ ಎಸ್.ಆರ್.ಪಾಟೀಲ‌ ಪ್ರತಿಷ್ಠಾನ ಮತ್ತು ಆರೋಗ್ಯ ಇಲಾಖೆ ವತಿಯಿಂದ‌‌ ಎಚ್.ಪಿ.ವಿ ಲಸಿಕೆಯನ್ನು ಉಚಿತವಾಗಿ ಹಾಕಿಸಲಾಗುವುದು. ರೋಣ ತಾಲೂಕಿನ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳಲ್ಲಿನ 9ರಿಂದ 14 ವರ್ಷದ ಒಟ್ಟು 9000 ಹೆಣ್ಣು ಮಕ್ಕಳಿಗೆ ಎಚ್.ಪಿ.ವಿ ಲಸಿಕೆ ಹಾಕಿಸುವ ಗುರಿ ಹೊಂದಲಾಗಿದೆ. ಲಸಿಕೆ ಆಂದೋಲನಕ್ಕೆ ಜು.30ರಂದು ರೋಣ ಪಟ್ಟಣದ ರಾಜೀವಗಾಂಧಿ ಗಾಂಧಿ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಚಾಲನೆ ನೀಡಲಾಗುವದು.‌ಆ. 1ರಿಂದ ವೈದ್ಯರ ತಂಡ ಪ್ರತಿ ಶಾಲೆಗೆ ತೆರಳಿ ಗರ್ಭಕೋಶ ಕ್ಯಾನ್ಸರ್ ತಡೆ ಎಚ್.ಪಿ.ವಿ ಲಸಿಕೆ(ವ್ಯಾಕ್ಸಿನೇಷನ್‌) ಹಾಕಲಾಗುವದು. ಲಸಿಕೆ ಹಾಕುವ ತಂಡವು ಆಯಾ ಶಾಲೆಗಳಿಗೆ, ಶಾಲೆಗಳ ಮೂಲಕ ಪಾಲಕರು ಮುಂಗಡವಾಗಿ ತಿಳಿಸಲಾಗುತ್ತದೆ. ಲಸಿಕೆ ಅತ್ಯಂತ ಸುರಕ್ಷಿತವಾಗಿದ್ದು, ಪಾಲಕರು ತಮ್ಮ‌ ಮಕ್ಕಳಿಗೆ ಈ ಲಸಿಕೆ ಹಾಕಿಸುವಲ್ಲಿ ಮುಂದಾಗಬೇಕು. ಜು. 30 ರಂದು ಜರುಗುವ ಲಸಿಕೆ ಆಂದೋಲನ ಚಾಲನೆ‌ ದಿನದಂದು ಸ್ವತಃ ನಾನೇ ನನ್ನ ಮೊಮ್ಮಗಳಿಗೆ ಈ ಲಸಿಕೆ ಹಾಕಿಸುತ್ತನೆ. ಅತ್ಯಂತ ಸುರಕ್ಷಿತ ಲಸಿಕೆ ಇದಾಗಿದ್ದು, ಯಾವುದೇ ರೀತಿಯಲ್ಲಿ ಪಾಲಕರು ಭಯಪಡದೇ ಹೆಣ್ಣು ಮಗುವಿಗೆ ಲಸಿಕೆ ಹಾಕಿಸಬೇಕು ಎಂದರು.

ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ.ಹಾದಿಮನಿ ಮಾತನಾಡಿ, ಮಹಿಳೆಯರಲ್ಲಿ ಉಂಟಾಗುವ ಗರ್ಭ ಕೊರಳಿನ ಕ್ಯಾನ್ಸರ್, ಜನನಾಂಗದ ಹೊರ ಭಾಗದಲ್ಲಿ ಕ್ಯಾನ್ಸರ್ ಸೇರಿದಂತೆ 6 ತರಹದ ಕ್ಯಾನ್ಸರ್ ತಡೆಗಟ್ಟಲು

ಎಚ್.ಪಿ.ವಿ ವ್ಯಾಕ್ಸಿನೇಷನ್ (ಲಸಿಕೆ) ರಕ್ಷಣೆ ನೀಡುವದು. ಶಾಸಕರು ರೋಣ ತಾಲೂಕು ಸೇರಿದಂತೆ ರೋಣ ಮತಕ್ಷೇತ್ರದ ಎಲ್ಲಾ ಶಾಲೆ ಹೆಣ್ಣು ಮಕ್ಕಳಿಗೆ ಆರೋಗ್ಯದ ಹಿತದೃಷ್ಡಿಯಿಂದ ಪ್ರತಿಯೊಂದು ಲಸಿಕೆ ಹಾಕಿಸಲು ಸೂಚಿಸಿದ್ದಾರೆ. 9ರಿಂದ 14 ವರ್ಷದೊಳಗಿನ ರೋಣ ತಾಲೂಕಿನಲ್ಲಿ 9000 ಹೆಣ್ಣು ಮಕ್ಕಳಿಗೆ ಲಸಿಕೆ ನೀಡಲಾಗುವದು.

6 ರಿಂದ 9ವರ್ಷದೊಳಗೆ 2 ಹಂತದಲ್ಲಿ, 18 ವರ್ಷ ಮೇಲ್ಪಟ್ಟಾಗ 3ನೇ ಡೋಸ್ ಲಸಿಕೆ ಹಾಕಲಾಗುವದು. ಈ ಲಸಿಕೆ ಒಂದರಿಂದಾಗಿ ಜೀವಮಾನದವರೆಗೆ ಕ್ಯಾನ್ಸರ್ ಕಾಯಿಲೆ ಬರದಂತೆ ತಡೆಗಟ್ಟಲಾಗುವುದು. ಜೊತೆಗೆ ರೋಗ ನಿರೋಧಕ ಶಕ್ತಿಯು ವೃದ್ಧಿಯಾಗುವುದು. ಆದ್ದರಿಂದ ಮಕ್ಕಳಿಗೆ ಲಸಿಕೆ ನೀಡುವುದು ಅತೀ ಮುಖ್ಯವಾಗಿದೆ. ಈ ವೇಳೆ ತಾಲೂಕ ವೈದ್ಯಾಧಿಕಾರಿ ಡಾ.ಎಸ್.ಬಿ.ಭಜಂತ್ರಿ, ಭಾರತರತ್ನ ಡಾ. ಭೀಮಸೇನಜೋಶಿ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಶಕೀಲ ಅಹ್ಮದ ದಂದುರಗಿ, ಡಾ.ಐ.ಬಿ.ಕೊಟ್ಟೂರಶೆಟ್ಟಿ, ಡಾ.ವಾಮನ್ ರಾಜಪುರೋಹಿತ, ಬಿ.ಇಒ‌ಅರ್ಜುನ‌ ಕಾಂಬೋಗಿ, ಅಕ್ಷರ ದಾಸೋಹ ತಾಲೂಕ‌ ಸಹಾಯಕ ನಿರ್ದೇಶಕ‌ ಆರ್.ಎಲ್.ನಾಯಕ, ಕ್ಷೇತ್ರ ಸಮನ್ವಯ ಅಧಿಕಾರಿ ಎಂ..ಫಣಿಬಂಧ, ಡಾ.ರಾಜು ಕೆಂಚರಡ್ಡಿ, ವೀರಣ್ಣ ಶೆಟ್ಟರ, ವ್ಹಿ.ಬಿ.ಸೋಮನಕಟ್ಟಿಮಠ, ಬಸವರಾಜ ನವಲಗುಂದ ಮುಂತಾದವರು ಉಪಸ್ಥಿತರಿದ್ದರು.