ಹಿರಿಯರ ತ್ಯಾಗದ ಫಲದಿಂದ ಸ್ವಾತಂತ್ರ್ಯ ಲಭಿಸಿದೆ: ಶಿವಶರಣಪ್ಪ ಕಟ್ಟೋಳಿ

| Published : Aug 19 2024, 12:51 AM IST / Updated: Aug 19 2024, 12:52 AM IST

ಹಿರಿಯರ ತ್ಯಾಗದ ಫಲದಿಂದ ಸ್ವಾತಂತ್ರ್ಯ ಲಭಿಸಿದೆ: ಶಿವಶರಣಪ್ಪ ಕಟ್ಟೋಳಿ
Share this Article
  • FB
  • TW
  • Linkdin
  • Email

ಸಾರಾಂಶ

ಅಜ್ಜಂಪುರ, ನಮ್ಮ ಹಿರಿಯರು ಮಾಡಿರುವ ತ್ಯಾಗದ ಫಲದಿಂದ ನಮಗೆ ಸ್ವಾತಂತ್ರ್ಯ ಲಭಿಸಿದೆ. ಪೂರ್ವಜರನ್ನು ಸ್ಮರಿಸುತ್ತಾ, ನಮ್ಮ ದೇಶದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಬೇಕು ಎಂದು ತಹಸೀಲ್ದಾರ್ ಶಿವಶರಣಪ್ಪ ಕಟ್ಟೋಳಿ ಹೇಳಿದರು

ಕನ್ನಡಪ್ರಭ ವಾರ್ತೆ, ಅಜ್ಜಂಪುರ, ನಮ್ಮ ಹಿರಿಯರು ಮಾಡಿರುವ ತ್ಯಾಗದ ಫಲದಿಂದ ನಮಗೆ ಸ್ವಾತಂತ್ರ್ಯ ಲಭಿಸಿದೆ. ಪೂರ್ವಜರನ್ನು ಸ್ಮರಿಸುತ್ತಾ, ನಮ್ಮ ದೇಶದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಬೇಕು ಎಂದು ತಹಸೀಲ್ದಾರ್ ಶಿವಶರಣಪ್ಪ ಕಟ್ಟೋಳಿ ಹೇಳಿದರು.

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಪಟ್ಟಣದ ಶೆಟ್ರು ಇದ್ದಪ್ಪ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ದ್ವಜಾರೋಹಣ ನೆರವೇರಿಸಿ ಮಾತನಾಡಿದರು. ದೇಶ ರಕ್ಷಣೆಗೆ ನಾವೆಲ್ಲರೂ ಬದ್ಧರಾಗಬೇಕು. ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ ವಾಗದಂತೆ ಬದುಕಬೇಕು. ಬಡಜನರ ಮೇಲೆತ್ತುವ ಕಾರ್ಯ ಮಾಡಬೇಕು ಎಂದರು.

ಪೋಲಿಸ್ ಗೃಹರಕ್ಷಕದಳ, ಶಾಲಾಮಕ್ಕಳಿಂದ ಪಥಸಂಚಲನ ನಡೆಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಗ್ಗವಳ್ಳಿ ಭಾರತದ ನಿವೃತ್ತ ಲೆ. ಜನರಲ್ ಬಿ.ಎಸ್ ರಾಜು, ನಿವೃತ್ತ ಯೋಧ ನಾಗರಾಜಪ್ಪ, ಪೌರಕಾರ್ಮಿಕ ನಾಗೇಂದ್ರಪ್ಪ, ಶ್ರೀಲಂಕಾದಲ್ಲಿ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಶಿಪ್ ಪಡೆದ ಎ ಕಲ್ಲಪ್ಪ ಅವರ ಮರಣೋತ್ತರವಾಗಿ ಅವರ ಮಗ ಹಿರಿಯ ಪತ್ರಕರ್ತ ಕೆ. ರಾಜೇಂದ್ರ ಅವರನ್ನು ಗೌರವಿಸಲಾಯಿತು. ಪಥಚಂಚಲನದ ಹೈಸ್ಕೂಲ್ ವಿಭಾಗದಲ್ಲಿ ಕನ್ನಡ ನೂತನಶಾಲೆ, ಸಿಬಿಎಸ್ ಸಿ, ವಾಸವಿಶಾಲೆ,ಎಚ್ ಪಿಜಿಎಸ್ ಶಾಲೆಗೆ ಬಹುಮಾನ ವಿತರಿಸಲಾಯಿತು.ಪೋಲಿಸ್ ಅಧಿಕಾರಿ ವೀರೇಂದ್ರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತಾಲೂಕು ಅಧ್ಯಕ್ಷ ಈಶ್ವರಪ್ಪ, ಪಟ್ಟಣ ಪಂಚಾಯ್ತಿ ಸಿಓಟಿಜಿ ರಮೇಶ್, ತಾಲೂಕು ಪಂಚಾಯ್ತಿ ನವೀನ್, ಡಾ. ಎಂ.ಆರ್ ನಟರಾಜು, ರಾಷ್ಟ್ರೀಯ ಪ್ರಶಸ್ತಿ ವಿಜೇತ ಎಚ್ ಪುಟ್ಟಸ್ವಾಮಿ ಮತ್ತು ಕಲಾವಿದ ಎಸ್ ಮೋಹನ್ ರಾವ್ ಕಾರ್ಯಕ್ರಮ ನಿರೂಪಿಸಿದರು.