ಸಾರಾಂಶ
ಶಿವಮೊಗ್ಗ ನಗರದ ಬೊಮ್ಮನಕಟ್ಟೆಯಲ್ಲಿ ಕೆರೆ ಕೊಡಿ ಒಡೆದು ನೀರು ನುಗ್ಗಿದ ಮನೆಗಳಿಗೆ ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್ ಭೇಟಿ ನೀಡಿದ್ದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದ್ದು, ಆಗಾಗ್ಗೆ ಸುರಿಯವ ಜೋರು ಮಳೆಗೆ ಅಲ್ಲಲ್ಲಿ ಹಾನಿಯಾಗಿವೆ.ಜೋರು ಮಳೆಗೆ ನಗರದ ಬೊಮ್ಮನೆಕಟ್ಟೆ ಬಡಾವಣೆಯಲ್ಲಿ ಕರೆ ಭರ್ತಿಯಾಗಿದ್ದು, ಕರೆ ಕೋಡಿ ಒಡೆದು ಮನೆಗಳಿಗೆ ನೀರು ನುಗ್ಗಿದೆ. ಮಲವಗೊಪ್ಪದಲ್ಲಿ ಮಳೆಗೆ ಮನೆ ಗೋಡೆ ನೆಲಕ್ಕುರುಳಿದೆ. ಶಿವಮೊಗ್ಗ ನಗರದ ಬೊಮ್ಮನಕಟ್ಟೆಯಲ್ಲಿ ಕೆರೆ ಕೊಡಿ ಒಡೆದು ನೀರು ನುಗ್ಗಿದ ಮನೆಗಳಿಗೆ ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಪಾಲಿಕೆ ಮಾಜಿ ಸದಸ್ಯ ವಿಶ್ವಾಸ್ ಮತ್ತಿತರರು ಇದ್ದರು.ಆನಂದಪುರದಲ್ಲಿ ಗದ್ದೆ, ತೋಟಕ್ಕೆ ನುಗ್ಗಿದ ನೀರು ಸೋಮವಾರ ಮಧ್ಯಾಹ್ನ ಸುರಿದ ಭಾರಿ ಮಳೆಗೆ ಆನಂದಪುರದ ಮುಂಬಾಳ ಗ್ರಾಮದಲ್ಲಿ ಗದ್ದೆ ಸಂಪೂರ್ಣ ಜಲಾವೃತಗೊಂಡಿದ್ದು ನಾಟಿ ಮಾಡಿದ್ದ ಭತ್ತದ ಬೆಳೆ ಹಾಗೂ ಅಡಕೆ ಗಿಡಗಳಿಗೆ ಹಾನಿಯಾಗಿದೆ. ಕಳೆದ ಒಂದು ವಾರದ ಹಿಂದೆ ಈ ಭಾಗದಲ್ಲಿನ ರೈತರು ಗದ್ದೆಗಳಲ್ಲಿ ಭತ್ತ ನಾಟಿ ಮಾಡಿದ್ದು, ಸೋಮವಾರ ಸುರಿದ ಮಳೆಯಿಂದ ನಾಟಿ ಮಾಡಿದ ಗದ್ದೆಗಳು ಸಂಪೂರ್ಣ ಕೊಚ್ಚಿ ಹೋಗಿ ಲಕ್ಷಾಂತರ ರು. ನಷ್ಟ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿ ಸಾಗರ ರಸ್ತೆ ಹಾಗೂ ಆನಂದಪುರ ಶಿಕಾರಿಪುರ ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.