ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ದುಬೈಯಲ್ಲಿ ನೆಲೆಸಿರುವ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಆಯೋಜಿಸಿದ ಸ್ನೇಹ ಸಮ್ಮಿಲನ 2025 ಕಾರ್ಯಕ್ರಮ ದುಬೈಯ ಆಶಿಯಾನ ಫಾರ್ಮ್ ಹೌಸ್ ಸಭಾಂಗಣದಲ್ಲಿ ಸಡಗರ ಸಂಭ್ರಮದಿಂದ ಜರುಗಿತು.ಸಮಾರಂಭದ ಅಧ್ಯಕ್ಷತೆಯನ್ನು ಹೊದ್ದೆಟ್ಟಿ ರಾಮಚಂದ್ರರವರು ವಹಿಸಿಕೊಂಡಿದ್ದು, ಮುಖ್ಯ ಅತಿಥಿಯಾಗಿ ಮುಕ್ಕಾಟಿ ಕಿಶೋರ್ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ, ದೇಶ ಹಾಗೂ ವಿದೇಶದಲ್ಲಿ ಸಾಧನೆ ಮಾಡಿದ ಮಕ್ಕಳನ್ನು ಹಾಗೂ ಉದ್ಯಮಿಗಳನ್ನು ಸನ್ಮಾನ ಮಾಡಿ ಗೌರವಿಸಲಾಯಿತು. ಮಕ್ಕಳಿಗೆ ಆಟೋಟ ಸ್ಪರ್ಧೆ ಮತ್ತು ವಾಲಿಬಾಲ್ ಹಾಗೂ ತ್ರೋಬಾಲ್ ಪಂದ್ಯಾಟವನ್ನು ಏರ್ಪಡಿಸಲಾಗಿತ್ತು. ಸಮ್ಮೇಳನದ ಮುಖ್ಯ ಆಯೋಜಕರಾಗಿ ಮೋಹನ್ ಕಡಂಬಳ, ಹರೀಶ್ ಕೋಡಿ, ಸುನಿಲ್ ಮೊಟ್ಟೆ ಮನೆ, ಸುರೇಶ್ ಕುಂಪಲ, ತೇಜ್ ಕುಮಾರ್ ಕೊರಂಬಡ್ಕ, ದಿಲೀಪ್ ಉಳುವಾರ, ಶರತ್ ಚೊಕ್ಕಾಡಿ, ರೋಶನ್ ಕಂಪ, ಸುಪ್ರೀತ್ ಕುಂಡಡ್ಕ, ಜೀವನ್ ಗೌಡ ಕುಂಜತ್ತಾಡಿ, ಯತೀಶ್ ಗೌಡ ಕಾಡಮನೆ, ರತೀಶ್ ಬಗ್ಗನಮನೆ, ಆಶಿಶ್ ಹರೀಶ್ ಕೋಡಿ, ಮೀನಾ ಹರೀಶ್ ಕೋಡಿ, ಪುಲೋಮ ಮಹೇಂದ್ರ ಕೊಳಂಬೆ ಹಾಗೂ ಇತರ ಸದಸ್ಯರು ಶ್ರಮಿಸಿದ್ದರು. ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಸುಮಾರು 300 ಕ್ಕೂ ಮಿಕ್ಕಿದ ಗೌಡ ಕುಲ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾರ್ಯಕ್ರಮದ ಸಂಪೂರ್ಣ ನಿರ್ವಹಣೆಯನ್ನು ನಿತಿನ್ ದೋರ್ತೋಡಿ ಸಾರಥ್ಯದೊಂದಿಗೆ ಯುವ ನಿರೂಪಕಿ ಶ್ರಾವ್ಯ ಗೌಡ ಹಾಗೂ ರಕ್ಷಿತಾ ಸುಪ್ರೀತ್ ಬಹಳ ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟರು.
;Resize=(128,128))
;Resize=(128,128))
;Resize=(128,128))