20ರಿಂದ 23ರ ವರೆಗೆ ಲಿಂ. ಡಾ. ಸಂಗನ ಬಸವ ಸ್ವಾಮೀಜಿ ಪಟ್ಟಾಧಿಕಾರ ಸುವರ್ಣ ಮಹೋತ್ಸವ

| Published : Nov 11 2023, 01:17 AM IST

20ರಿಂದ 23ರ ವರೆಗೆ ಲಿಂ. ಡಾ. ಸಂಗನ ಬಸವ ಸ್ವಾಮೀಜಿ ಪಟ್ಟಾಧಿಕಾರ ಸುವರ್ಣ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಲಿಂ. ಡಾ. ಸಂಗನಬಸವ ಸ್ವಾಮೀಜಿಯವರ ಪಟ್ಟಾಧಿಕಾರ ಸುವರ್ಣ ಮಹೋತ್ಸವದ ನಿಮಿತ್ತ ನೂತನ ಶಿಲಾಮಠ, ಶ್ರೀಪ್ರೌಢದೇವರಾಯ ವಸತಿಯುತ ಪ್ರಸಾದ ನಿಲಯ, ಶ್ರೀ ಕಪ್ಪಿನ ಚನ್ನಬಸವೇಶ್ವರ ಅತಿಥಿಗೃಹ ಉದ್ಘಾಟನೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಲಿಂ. ಡಾ. ಸಂಗನಬಸವ ಸ್ವಾಮೀಜಿಯವರ ಪಟ್ಟಾಧಿಕಾರ ಸುವರ್ಣ ಮಹೋತ್ಸವದ ನಿಮಿತ್ತ ಬಸವದರ್ಶನ ಪ್ರವಚನ ಆಯೋಜಿಸಲಾಗಿದೆ. ಜತೆಗೆ ನ. 20ರಿಂದ ಮತ್ತು 23ರ ವರೆಗೆ ವಿವಿಧ ಕಾರ್ಯಕ್ರಮ ಮತ್ತು ಬಸವದರ್ಶನ ಪ್ರವಚನ ಮಂಗಲೋತ್ಸವ ಆಯೋಜಿಸಲಾಗಿದೆ ಎಂದು ಕೊಟ್ಟೂರು ಸಂಸ್ಥಾನಮಠದ ಕೊಟ್ಟೂರು ಬಸವಲಿಂಗ ಸ್ವಾಮೀಜಿ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಲಿಂ. ಡಾ. ಸಂಗನಬಸವ ಸ್ವಾಮೀಜಿಯವರ ಪಟ್ಟಾಧಿಕಾರ ಸುವರ್ಣ ಮಹೋತ್ಸವದ ನಿಮಿತ್ತ ನೂತನ ಶಿಲಾಮಠ, ಶ್ರೀಪ್ರೌಢದೇವರಾಯ ವಸತಿಯುತ ಪ್ರಸಾದ ನಿಲಯ, ಶ್ರೀ ಕಪ್ಪಿನ ಚನ್ನಬಸವೇಶ್ವರ ಅತಿಥಿಗೃಹ ಉದ್ಘಾಟನೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ನ. 20ರಂದು ಸಂಜೆ 7 ಗಂಟೆಗೆ ವಿಚಾರಗೋಷ್ಠಿ ನಡೆಯಲಿದೆ. ಕುದುರಿಮೋತಿಯ ವಿಜಯಮಹಾಂತ ಸ್ವಾಮೀಜಿ, ಗುರುಮಹಾಂತ ಸ್ವಾಮೀಜಿ ಮತ್ತು ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರು “ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಗುರುಪರಂಪರೆ ಮತ್ತು ಹಂಡೆ ಅರಸು ಮನೆತನ” ಗ್ರಂಥ ಲೋಕಾರ್ಪಣೆ ಮಾಡಲಿದ್ದಾರೆ. ಸಂಸದ ಪಿ.ಸಿ. ಗದ್ದಿಗೌಡರ ಇತರರು ಭಾಗವಹಿಸಲಿದ್ದಾರೆ ಎಂದರು.

ನ. 21ರಂದು ವಿಜಯನಗರ ಜಿಲ್ಲೆಯ ಸಂಪನ್ಮೂಲ ಹಾಗೂ ಅಭಿವೃದ್ಧಿ ಕುರಿತು ವಿಚಾರಗೋಷ್ಠಿ ನಡೆಯಲಿದೆ. ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ, ಶ್ರೀಶೈಲ ಪೀಠದ ಡಾ. ಚೆನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ, ಶಿರಹಟ್ಟಿಯ ಫಕೀರಸಿದ್ಧರಾಮ ಸ್ವಾಮೀಜಿ, ಫಕೀರ ದಿಂಗಾಲೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕರಾದ ನಾರಾ ಭರತ್‌ರೆಡ್ಡಿ, ಜಿ.ಎಸ್. ಪಾಟೀಲ್, ಹಂಪನಗೌಡ ಬಾದರ್ಲಿ, ಬಿ.ಎಂ. ನಾಗರಾಜ, ವೈ. ಸತೀಶ್‌ರೆಡ್ಡಿ, ಡಾ. ಎನ್.ಟಿ. ಶ್ರೀನಿವಾಸ್, ಮಾಜಿ ಶಾಸಕ ಅಲ್ಲಂ ವೀರಭದ್ರಪ್ಪ ಭಾಗವಹಿಸಲಿದ್ದಾರೆ ಎಂದರು.

ನ. ೨೨ರಂದು ಬಸವದರ್ಶನ ಪ್ರವಚನ ಮಂಗಲಮಹೋತ್ಸವ ನಡೆಯಲಿದೆ. ಮುಂಡರಗಿಯ ಡಾ. ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಶೇಗುಣಸಿಯ ಮಹಾಂತ ಸ್ವಾಮೀಜಿ ವಿಜಯ ಕಲ್ಯಾಣ ಗ್ರಂಥ ಬಿಡುಗಡೆ ಮಾಡಲಿದ್ದಾರೆ. ಸಚಿವ ಜಮೀರ್ ಅಹಮದ್ ಖಾನ್, ಶಾಸಕ ಬಸವರಾಜ ರಾಯರಡ್ಡಿ ಸೇರಿದಂತೆ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.

ನ. 23ರಂದು ಬೆಳಗ್ಗೆ 11 ಗಂಟೆಗೆ ಶಿಲಾಮಠ, ಶ್ರೀಪ್ರೌಢದೇವರಾಯ ವಸತಿಯುತ ಪ್ರಸಾದ ನಿಲಯ, ಶ್ರೀ ಕಪ್ಪಿನ ಚನ್ನಬಸವೇಶ್ವರ ಅತಿಥಿಗೃಹ ಉದ್ಘಾಟನೆ ಸಮಾರಂಭ ನಡೆಯಲಿದೆ. ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್, ಅರಣ್ಯ ಸಚಿವ ಈಶ್ವರ ಖಂಡ್ರೆ, ಕ್ರೀಡಾ ಸಚಿವ ಬಿ. ನಾಗೇಂದ್ರ, ಮಾಜಿ ಸಚಿವ ಆನಂದ ಸಿಂಗ್, ಶಾಸಕರಾದ ಎಚ್.ಆರ್. ಗವಿಯಪ್ಪ, ವಿನಯ ಕುಲಕರ್ಣಿ, ಲತಾ ಮಲ್ಲಿಕಾರ್ಜುನ, ಜೆ.ಎನ್. ಗಣೇಶ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದರು.

ಮುಖಂಡರಾದ ಶರಣುಸ್ವಾಮಿ, ಸಾಲಿಸಿದ್ದಯ್ಯಸ್ವಾಮಿ, ರವಿಶಂಕರ, ಅಶ್ವಿನ್ ಕೋತ್ತಂಬರಿ, ಲಿಂಗಪ್ಪ, ಜಗದೀಶ್, ರೇವಣಸಿದ್ದಪ್ಪ, ಸಾಲಿ ಬಸವರಾಜ, ಎಲ್. ಬಸವರಾಜ, ಜೆ. ಕಾರ್ತಿಕ್, ಸೋಮಶೇಖರ್, ರವಿಕಾಂತ್, ಮಂಜುನಾಥ ಮತ್ತಿತರರಿದ್ದರು.