ಏಮ್ಸ್ ವಿಚಾರದಲ್ಲಿ ಕೇಂದ್ರದಿಂದ ದಿಕ್ಕು ತಪ್ಪಿಸುವ ಕೆಲಸ : ರವಿ ಬೋಸರಾಜು

| Published : Feb 11 2025, 12:48 AM IST

ಏಮ್ಸ್ ವಿಚಾರದಲ್ಲಿ ಕೇಂದ್ರದಿಂದ ದಿಕ್ಕು ತಪ್ಪಿಸುವ ಕೆಲಸ : ರವಿ ಬೋಸರಾಜು
Share this Article
  • FB
  • TW
  • Linkdin
  • Email

ಸಾರಾಂಶ

ರಾಯಚೂರು: ಜಿಲ್ಲೆಗೆ ಏಮ್ಸ್‌ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಒಂದು ಸಾವಿರ ದಿನಗಳಿಗೂ ಹೆಚ್ಚು ಕಾಲ ನಡೆಯುತ್ತಿರುವ ಹೋರಾಟಕ್ಕೆ ಸ್ಪಂದಿಸದ ಕೇಂದ್ರ ಬಿಜೆಪಿ ಸರ್ಕಾರವು ಉದ್ದೇಶ ಪೂರ್ವಕವಾಗಿ ನಿಳಂಬ ಧೋರಣೆ ಅನುಸರಿಸುತ್ತಾ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್‌ ಮುಖಂಡ ರವಿ ಬೋಸರಾಜು ಆರೋಪಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ 22 ರಾಜ್ಯಗಳಲ್ಲಿ ಯಾವುದೇ ರೀತಿಯ ತಕರಾರಿಲ್ಲದೇ ಪಿಎಂಜಿಎಸ್‌ವೈ ಅಡಿ ಏಮ್ಸ್‌ ನೀಡಿದೆ. ಆದರೆ ಕರ್ನಾಟಕ ರಾಜ್ಯ ಅದರಲ್ಲಿಯೂ ರಾಯಚೂರಿನ ವಿಚಾರಕ್ಕೆ ಬಂದಾಗ ಎನ್‌ಆರ್‌ಎಚ್‌ಎಂ ಮುಖಾಂತರ ಮಂಜೂರು ಮಾಡಲು ಪರಿಶೀಲನೆ ಮಾಡುತ್ತಿರುವುದಾಗಿ ಬೇಕಾಬಿಟ್ಟಿಯ ಪತ್ರ ಬರೆದಿದ್ದಾರೆ ಎಂದು ದೂರಿದರು.ರಾಯಚೂರಿನಲ್ಲಿಯೇ ಏಮ್ಸ್‌ ಸ್ಥಾಪಿಸುವ ಬಗ್ಗೆ ರಾಜ್ಯದ ಕಾಂಗ್ರೆಸ್‌ ಸರ್ಕಾರ ಬದ್ಧತೆ ಪ್ರದರ್ಶಿಸಿ ಅದಕ್ಕೆ ಅಗತ್ಯವಾದ ವಿಮಾನ ನಿಲ್ದಾಣ, ಸಂಪರ್ಕ ಇತರೆ ಸವಲತ್ತುಗಳನ್ನು ಒದಗಿಸಲು ಕ್ರಮ ವಹಿಸುವುದರೊಂದಿಗೆ ಸಿಎಂ, ಸಚಿವರು ಕೇಂದ್ರಕ್ಕೆ ಪತ್ರ ಬರೆದಿದ್ದು, ನಿಯೋಗವು ಸಹ ಭೇಟಿ ನೀಡಿ ಮನವರಿಕೆ ಮಾಡುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಿದೆ. ಆದರೆ ಕೇಂದ್ರ ಸರ್ಕಾರ ಮಾತ್ರ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ ಎಂದು ದೂರಿದರು.ರಾಜ್ಯ ಸರ್ಕಾರ ಜಿಲ್ಲೆ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿದ್ದು, ಇತ್ತೀಚೆಗೆ ನಗರಸಭೆಯನ್ನು ಮೇಲ್ದರ್ಜೇಗೇರಿಸಿ ಮಹಾನಗರ ಪಾಲಿಕೆಯನ್ನಾಗಿ ಘೋಷಿಸಿದೆ. ಸಿಎಂ ಅವರು ಪಾಲಿಕೆ ಸಮಗ್ರ ಅಭಿವೃದ್ಧಿಗಾಗಿ 200 ಕೋಟಿ ರು. ಮಂಜೂರು ಮಾಡಿದ್ದಾರೆ ಎಂದು ತಿಳಿಸಿದರು. ಸುದ್ದಗೋಷ್ಠಿಯಲ್ಲಿ ಪಾಲಿಕೆ ಉಪಾಧ್ಯಕ್ಷ ಸಾಜೀದ್‌ ಸಮೀರ್, ಪಕ್ಷದ ಮುಖಂಡರಾದ ಮೊಹಮ್ಮದ ಶಾಲಂ, ನರಸಿಂಹಲು ಮಾಡಗಿರಿ, ಜಿಂದಪ್ಪ,ಶ್ರೀನಿವಾಸರೆಡ್ಡಿ, ನರಸರೆಡ್ಡಿ,ಯು.ಗೋವಿಂದ ರೆಡ್ಡಿ, ರಾಜೇಶ, ಚಂದ್ರಶೇಖರ ರೆಡ್ಡಿ ಪೋಗುಲ್‌ ಸೇರಿ ಇತರರು ಇದ್ದರು.