ಯೋಗದಿಂದ ನಿರೋಗಿಯಾಗಿ ದೇಶದ ಆಸ್ತಿಯಾಗಿ: ಭಾರತಿ ತಾಳಿಕೋಟಿ

| Published : Jun 23 2024, 02:06 AM IST

ಯೋಗದಿಂದ ನಿರೋಗಿಯಾಗಿ ದೇಶದ ಆಸ್ತಿಯಾಗಿ: ಭಾರತಿ ತಾಳಿಕೋಟಿ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವಕ್ಕೆ ಹೆಮ್ಮೆಯ ಯೋಗ ಶಿಕ್ಷಣ ಪರಿಚಯಿಸಿದ ಕೀರ್ತಿ ಭಾರತ ದೇಶಕ್ಕೆ ಸಲ್ಲುತ್ತಿದೆ. ಋಷಿಗಳಿಂದ ಸೃಜಿಸಲ್ಪಟ್ಟ ಯೋಗ ಇಂದು ಪ್ರಪಂಚದಾದ್ಯಂತ ಚಿರಪರಿಚಿತವಾಗಿದೆ ಎಂದು ಪದ್ಮಾವತಿ ಇಂಟರ್‌ನ್ಯಾಶನಲ್ ಶಾಲೆಯ ಆಡಳಿತಾಧಿಕಾರಿ ಭಾರತಿ ತಾಳಿಕೋಟಿ ಹೇಳಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ವಿಶ್ವಕ್ಕೆ ಹೆಮ್ಮೆಯ ಯೋಗ ಶಿಕ್ಷಣ ಪರಿಚಯಿಸಿದ ಕೀರ್ತಿ ಭಾರತ ದೇಶಕ್ಕೆ ಸಲ್ಲುತ್ತಿದೆ. ಋಷಿಗಳಿಂದ ಸೃಜಿಸಲ್ಪಟ್ಟ ಯೋಗ ಇಂದು ಪ್ರಪಂಚದಾದ್ಯಂತ ಚಿರಪರಿಚಿತವಾಗಿದೆ ಎಂದು ಪದ್ಮಾವತಿ ಇಂಟರ್‌ನ್ಯಾಶನಲ್ ಶಾಲೆಯ ಆಡಳಿತಾಧಿಕಾರಿ ಭಾರತಿ ತಾಳಿಕೋಟಿ ಹೇಳಿದರು.ಪದ್ಮಾವತಿ ಸಮೂಹ ಸಂಸ್ಥೆಗಳಿಂದ ಶುಕ್ರವಾರ ಪದ್ಮಾವತಿ ಇಂಟರನ್ಯಾಶನಲ್ ಶಾಲೆಯ ಆವರಣದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜೀವನದುದ್ದಕ್ಕೂ ದೈಹಿಕ ಮತ್ತು ಮಾನಸಿಕ ಸಬಲತೆ ಹೊಂದಲು ಮತ್ತು ನಿಯಮಿತ ದೈಹಿಕ ಚೌಕಟ್ಟು ಪಡೆಯಲು ನಿತ್ಯ ಜೀವನದಲ್ಲಿ ನಿಯಮಿತವಾಗಿ ಯೋಗ ಅಳವಡಿಸಿಕೊಂಡಲ್ಲಿ ರೋಗಮುಕ್ತ ಜೀವನ ನಡೆಸಲು ಸಾಧ್ಯ. ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ ಎಂಬಂತೆ ನಾವು ದೈಹಿಕವಾಗಿ ಸಕ್ಷಮರಾದರೆ ಎಂಥದೇ ರೋಗಕ್ಕೂ ಸುಲಭದಲ್ಲಿ ತುತ್ತಾಗಲಾರೆವು. ಮಾನಸಿಕವಾಗಿಯೂ ನಾವಂದುಕೊಂಡ ಗುರಿ ತಲುಪಲು ಯೋಗ ಪದ್ಧತಿ ನಮಗೆ ನೆರವಾಗಲ್ಲದೆಂದರು.

ಶಿಕ್ಷಕ ಉಮೇಶ ವಲ್ಯಾಪುರ ಮಕ್ಕಳಿಗೆ ಯೋಗದ ಮಹತ್ವ ತಿಳಿಸುತ್ತ, ವಿವಿಧ ಆಸನಗಳನ್ನು ಪ್ರಾತ್ಯಕ್ಷಿಕವಾಗಿ ಪ್ರದರ್ಶಿಸಿ ಮಕ್ಕಳಿಂದ ಮಾಡಿಸಿದರು. ಪದ್ಮಾವತಿ ಇಂಟರನ್ಯಾಶನಲ್ ಶಾಲೆಯ ಪ್ರಾಚಾರ್ಯ ಬಸವರಾಜ ಕಲಾದಗಿ, ಪದ್ಮಾವತಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲ ಶ್ರೀಶೈಲ ಕುಂಬಾರ, ಪದ್ಮಾವತಿ ವಿದ್ಯಾಲಯದ ಮುಖ್ಯಗುರುಗಳು ಮತ್ತು ಎಲ್ಲ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಶಿಬಿರದಲ್ಲಿ ಪಾಲ್ಗೊಂಡಿದ್ದರು.