ಸಾರಾಂಶ
ಕೌಟುಂಬಿಕ ಪಿಂಚಣಿಯನ್ನು ಶೇ.30 ಏರಿಸಬೇಕು. ಎನ್ ಪಿಎಸ್ ನಲ್ಲಿ ಸಂಸ್ಥೆಯ ಕೊಡುಗೆಯನ್ನು ಶೇ.14ಕ್ಕೆ ಏರಿಸಬೇಕು.
ಕನ್ನಡಪ್ರಭ ವಾರ್ತೆ ಮೈಸೂರು
ಸಾರ್ವಜನಿಕ ವಲಯ ಸಾಮಾನ್ಯ ವಿಮಾ ಸಂಸ್ಥೆಗಳ ಜಂಟಿ ಕ್ರಿಯಾ ಸಮಿತಿಯು ಕರೆಯ ಮೇರೆಗೆ ನಾಲ್ಕು ಕಂಪನಿಗಳ ಎಲ್ಲಾ ನೌಕರರು ಮತ್ತು ಅಧಿಕಾರಿಗಳು ಸರಸ್ವತಿಪುರಂನಲ್ಲಿರುವ ದಿ ಓರಿಯೆಂಟಲ್ ಇನ್ಸೂರೆನ್ಸ್ ಕಂಪನಿ ವಿಭಾಗೀಯ ಕಚೇರಿಯ ಮುಂಭಾಗದಲ್ಲಿ ಗುರುವಾರ ಘೋಷಣೆ ಕೂಗುತ್ತ ಒಗ್ಗಟ್ಟಿನ ಮತ ಪ್ರದರ್ಶನ ಮಾಡಿದರು. ಹಳೆ ಪಿಂಚಣಿ ಯೋಜನೆಯನ್ನು ಉತ್ಕೃಷ್ಟಗೊಳಿಸಬೇಕು. ಕೌಟುಂಬಿಕ ಪಿಂಚಣಿಯನ್ನು ಶೇ.30 ಏರಿಸಬೇಕು. ಎನ್ ಪಿಎಸ್ ನಲ್ಲಿ ಸಂಸ್ಥೆಯ ಕೊಡುಗೆಯನ್ನು ಶೇ.14ಕ್ಕೆ ಏರಿಸಬೇಕು. 2022 ಆಗಸ್ಟ್ ಯಿಂದ ನೆನೆಗುದಿಗೆಗೆ ಬಿದ್ದಿರುವ ವೇತನ ಪರಿಷ್ಕರಣೆಯ ಮಾತುಕತೆ ಆರಂಭಿಸಬೇಕು. ನಾಲ್ಕು ಸಾರ್ವಜನಿಕ ವಲಯ ಸಾಮಾನ್ಯ ವಿಮಾ ಸಂಸ್ಥೆಗಳನ್ನು ವಿಲೀನಗೊಳಿಸಬೇಕು ಎಂದು ಅವರು ಒತ್ತಾಯಿಸಿದರು. ಸಂಘಟನೆಗಳ ಮುಖಂಡರಾದ ಎನ್. ಮಹೇಶ್, ಬಲರಾಮ್, ಗುರು, ಪ್ರಕಾಶ್, ಮಲ್ಲೇಶ್ ಮೊದಲಾದವರು ಇದ್ದರು.