ಸಾರಾಂಶ
ಹಾವೇರಿ: ನಗರದ ಕೆಎಲ್‌ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಯೂಥ್ ರೆಡ್‌ಕ್ರಾಸ್ (ವೈಆರ್‌ಸಿ) ವಿಭಾಗದ ವತಿಯಿಂದ ಬೆಳಗಾವಿ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆಯವರ ೭೭ನೇ ಜನ್ಮದಿನದ ಪ್ರಯುಕ್ತ ನಗರದ ಜಿಲ್ಲಾಸ್ಪತ್ರೆಯ ೧೦೦ಕ್ಕೂ ಅಧಿಕ ಒಳರೋಗಿಗಳಿಗೆ ಹಣ್ಣು, ಬ್ರೇಡ್, ಬಿಸ್ಕತ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಆರ್. ಹಾವನೂರ, ಡಾ. ಪ್ರಕಾಶ್ ನವಲೆ, ಪದವಿ ಪ್ರಾಚಾರ್ಯೆ ಡಾ.ಸಂಧ್ಯಾ ಕುಲಕರ್ಣಿ, ಪಪೂ ಕಾಲೇಜಿನ ಪ್ರಾಚಾರ್ಯ ಡಾ.ಜೆ. ಆರ್. ಶಿಂಧೆ, ಪ್ರೊ.ಡಿ.ಎ. ಕೊಲ್ಲಾಪುರೆ, ವೈಆರ್‌ಸಿ ಅಧಿಕಾರಿಗಳಾದ ಡಾ.ಅಶ್ವಿನಿ ಹತ್ತಿಕಾಳ, ಡಾ. ಚೇತನಾ ಎಂ., ಪ್ರೊ. ಶಮಂತಕುಮಾರ, ಪ್ರೊ.ಎಂ.ಎಸ್. ಬೆಂಡಿಗೇರಿ, ಎನ್.ಸಿ.ಸಿ. ಅಧಿಕಾರಿ ಡಾ. ನಾಗರಾಜ ಎಂ., ಗ್ರಂಥಪಾಲಕ ಆತ್ಮಾನಂದ ಹೊಳೆಯಣ್ಣವರ ಸೇರಿದಂತೆ ಇತರರು ಇದ್ದರು. ೧ಎಚ್‌ವಿಆರ್೩-ಹಾವೇರಿ ನಗರದ ಕೆಎಲ್‌ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಯೂಥ್ ರೆಡ್‌ಕ್ರಾಸ್ (ವೈಆರ್‌ಸಿ) ವಿಭಾಗದ ವತಿಯಿಂದ ಡಾ.ಪ್ರಭಾಕರ ಕೋರೆಯವರ ೭೭ನೇ ಜನ್ಮದಿನದ ಪ್ರಯುಕ್ತ ನಗರದ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಹಣ್ಣು, ಬ್ರೇಡ್, ಬಿಸ್ಕತ್ ವಿತರಿಸಲಾಯಿತು.