ಗಡಿನಾಡಿನ ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಶಿಕ್ಷಣದ ಜ್ಯೋತಿ ಬೆಳಗಿಸುತ್ತಾ, ಬಡ ರೈತ ಕುಟುಂಬಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸಿಕೊಡುವ ನಿಟ್ಟಿನಲ್ಲಿ ತಮ್ಮದೇ ಆದ ಕಾರ್ಯಶೈಲಿಯಿಂದ ಗಮನ ಸೆಳೆದಿರುವ ಶಿಕ್ಷಕ ಶರಣಪ್ಪ ಭೀಮರಾಯ ಫುಲಾರಿ, ಶಿಕ್ಷಕ ವೃತ್ತಿಯ ಜತೆಗೆ ಸಾಮಾಜಿಕ ಜವಾಬ್ದಾರಿಯನ್ನೂ ಸಮರ್ಥವಾಗಿ ನಿಭಾಯಿಸಿದ ಅಪರೂಪದ ಶಿಕ್ಷಕರು.

ಶಿವಲಿಂಗ ಜಾಲವಾದಿಕನ್ನಡಪ್ರಭ ವಾರ್ತೆ ಕರಜಗಿ ಗಡಿನಾಡಿನ ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಶಿಕ್ಷಣದ ಜ್ಯೋತಿ ಬೆಳಗಿಸುತ್ತಾ, ಬಡ ರೈತ ಕುಟುಂಬಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸಿಕೊಡುವ ನಿಟ್ಟಿನಲ್ಲಿ ತಮ್ಮದೇ ಆದ ಕಾರ್ಯಶೈಲಿಯಿಂದ ಗಮನ ಸೆಳೆದಿರುವ ಶಿಕ್ಷಕ ಶರಣಪ್ಪ ಭೀಮರಾಯ ಫುಲಾರಿ, ಶಿಕ್ಷಕ ವೃತ್ತಿಯ ಜತೆಗೆ ಸಾಮಾಜಿಕ ಜವಾಬ್ದಾರಿಯನ್ನೂ ಸಮರ್ಥವಾಗಿ ನಿಭಾಯಿಸಿದ ಅಪರೂಪದ ಶಿಕ್ಷಕರು. ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನ ಬೋರೋಟಿ (ಕೆ) ಗ್ರಾಮದ ಜಿಲ್ಲಾ ಪರಿಷತ್ ಪ್ರಾಥಮಿಕ ಕನ್ನಡ ಶಾಲೆಯಲ್ಲಿ 2025ರ ನವೆಂಬರಿನಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಫುಲಾರಿ, ಶಾಲೆಯ ಅಭಿವೃದ್ಧಿಯನ್ನೇ ತಮ್ಮ ಧ್ಯೇಯವನ್ನಾಗಿಸಿಕೊಂಡಿದ್ದು ಕಳೆದ ವರ್ಷ ಕೇವಲ 27 ವಿದ್ಯಾರ್ಥಿಗಳ ಸಂಖ್ಯೆ ಇದ್ದರೂ ಒಂದು ವರ್ಷದಲ್ಲಿ ಹತ್ತಾರು ಉಪಕ್ರಮಗ ಹಮ್ಮಿಕೊಂಡು ಪಾಲಕರ ಮನಸ್ಸು ಗೆದ್ದು 34ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಕನ್ನಡ ಕಲಿಯಲು ಪ್ರೇರೇಪಿಸಿದ್ದಾರೆ.

ನಾಗಣಸೂರ ಕನ್ನಡ ಹೆಣ್ಣುಮಕ್ಕಳ ಶಾಲೆಯಿಂದ ಬೋರೋಟಿ (ಖು.) ಜಿಲ್ಲಾ ಪರಿಷತ್ ಪ್ರಾಥಮಿಕ ಕನ್ನಡ ಶಾಲೆಗೆ ವರ್ಗಾವಣೆ ಆಗಿರುವ ಹಿನ್ನೆಲೆಯಲ್ಲಿ ನಾಗಣಸೂರಿನ ವಿದ್ಯಾರ್ಥಿನಿಯರು ಕಣ್ಣೀರಿನ ವಿದಾಯ ನೀಡಿದ ಘಟನೆ ಕರ್ನಾಟಕ ಸಹಿತ ಗಡಿಭಾಗದ ರಾಜ್ಯಗಳ ಮನೆ ಮಾತಾಗಿದ್ದಾರೆ. ಬೋರೋಟಿ ಶಾಲೆಯ ವಿದ್ಯಾರ್ಥಿಗಳಲ್ಲಿ ಹೊಸ ಶಿಕ್ಷಕರ ಆಗಮನದ ಸಂಭ್ರಮ ಮನೆಮಾಡಿದೆ.ಸರ್ ಫೌಂಡೇಶನ್ ಮೂಲಕ ಪ್ರಿಸಿಜನ್ ಕಂಪನಿಯ ಸಹಕಾರ ಪಡೆದು 4.5 ಲಕ್ಷ ರು. ಮೌಲ್ಯದ ಇ-ಲರ್ನಿಂಗ್ ಡಿಜಿಟಲ್ ಟಚ್‌ಸ್ಕ್ರೀನ್ ಹಾಗೂ ಸೌರಫಲಕಗಳನ್ನು ಶಾಲೆಗೆ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಸಹಿತ ವಿವಿಧ ಸಂಸ್ಥೆಗಳ ಸಹಕಾರದಿಂದ ಸುಮಾರು 10 ಲಕ್ಷ ರು. ಮೌಲ್ಯದ ಆಧುನಿಕ ಶೈಕ್ಷಣಿಕ ಸೌಲಭ್ಯಗಳ ಒದಗಿಸುವಲ್ಲಿ ಶ್ರಮಿಸಿದ್ದಾರೆ.ಶರಣಪ್ಪ ಫುಲಾರಿ ಅವರು ಈ ಹಿಂದೆ ತೊಳನೂರು, ಜಕಾಪುರ ಮತ್ತು ಬಬಲಾದ, ನಾಗಣಸೂರ ಶಾಲೆಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಫುಲಾರಿ ಮಾರ್ಗದರ್ಶನದಲ್ಲಿ ನಾಗಣಸೂರಿನ ವಿದ್ಯಾರ್ಥಿನಿಯರು ಶಾಲೆಯ ಗಡಿಗಳನ್ನು ಮೀರಿ ರಾಷ್ಟ್ರಮಟ್ಟದ ವೇದಿಕೆಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸುವ ಅವಕಾಶ ಪಡೆದರು. ಆರು ವರ್ಷಗಳಲ್ಲಿ ಶಾಲೆಯ 18 ವಿದ್ಯಾರ್ಥಿನಿಯರು ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ವಚನ ನೃತ್ಯ, ಕವಿಗೋಷ್ಠಿ ಹಾಗೂ ಇತರ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡರು.

----ಬಾಕ್ಸ್‌----

ಗಡಿನಾಡಿನಲ್ಲಿ ಕನ್ನಡದ ಕಂಪು ಶರಣಪ್ಪ ಭೀಮರಾಯರು ತಾವು ಸೇವೆ ಸಲ್ಲಿಸಿದ ಪ್ರತಿಯೊಂದು ಶಾಲೆಯಲ್ಲಿಯೂ ಮಕ್ಕಳ ಭವಿಷ್ಯಕ್ಕೆ ಹೊಸ ದಿಕ್ಕು ತೋರಿಸಲು ಪ್ರಯತ್ನಿಸಿದರು. ಶಿಕ್ಷಕ ವೃತ್ತಿಯನ್ನು ಉದ್ಯೋಗವಾಗಿ ಮಾತ್ರವಲ್ಲದೆ ಸಮಾಜ ನಿರ್ಮಾಣದ ಜವಾಬ್ದಾರಿಯಾಗಿ ಸ್ವೀಕರಿಸಿದ್ದಾರೆ. ಆದರೆ ಮಕ್ಕಳ ಹೃದಯದಲ್ಲಿ ಸ್ಥಾನ ಪಡೆದ ಶಿಕ್ಷಕರ ನೆನಪು ಎಂದಿಗೂ ಅಳಿಯುವುದಿಲ್ಲ. ಗಡಿನಾಡಿನ ಕನ್ನಡ ಶಿಕ್ಷಣದ ಬೆಳವಣಿಗೆಗಾಗಿ ಶರಣಪ್ಪ ಫುಲಾರಿ ಅವರು ನಡೆಸಿದ ಪ್ರಯತ್ನಗಳು ಈ ಮಾತಿಗೆ ಸಾಕ್ಷಿಯಾಗಿವೆ.

----ಫೋಟೊ------ಫೋಟೋ- ಫಉಲಾರಿ 1 ಮತ್ತು 2

ಇವೆರಡೂ ಫೋಟೋ ಬಳಸು ಕೋರಿಕೆ