ಮೇಲುಕೋಟೆ ದೇವಾಲಯದ ಸ್ಥಾನೀಕರು ಮತ್ತು ವ್ಯವಸ್ಥಾಪನಾ ಸಮಿತಿ ಈ ಬಗ್ಗೆ ಗಮನ ಸೆಳೆದಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರೊಂದಿಗೆ ಮಾತನಾಡಿ ಇಬ್ಬರೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ಷೇತ್ರದ ಅಭಿವೃದ್ಧಿಗೆ ಕಾರ್ಯ ಮಾಡಲಾಗುತ್ತದೆ.
ಕನ್ನಡಪ್ರಭ ವಾರ್ತೆ ಮೇಲುಕೋಟೆ
ರಾಮಾನುಜಾಚಾರ್ಯರ ಕರ್ಮಭೂಮಿ ಮೇಲುಕೋಟೆ ಅಭಿವೃದ್ಧಿಗೆ ಎಲ್ಲಾ ಸಹಕಾರ ನೀಡುತ್ತೇನೆ ಎಂದು ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ತಿಳಿಸಿದರು.ಮಂಗಳವಾರ ಸಂಜೆ ಮೇಲುಕೋಟೆ ದೇವಾಲಯಕ್ಕೆ ಆಗಮಿಸಿ ದರ್ಶನ ಪಡೆದು ಮಾತನಾಡಿ, ದೇವಾಲಯದ ಸ್ಥಾನೀಕರು ಮತ್ತು ವ್ಯವಸ್ಥಾಪನಾ ಸಮಿತಿ ಈ ಬಗ್ಗೆ ಗಮನ ಸೆಳೆದಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರೊಂದಿಗೆ ಮಾತನಾಡಿ ಇಬ್ಬರೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ಷೇತ್ರದ ಅಭಿವೃದ್ಧಿಗೆ ಕಾರ್ಯ ಮಾಡಲಾಗುತ್ತದೆ ಎಂದರು.
ನವೆಂಬರ್ ಮಾಹೆಯಲ್ಲಿ ರಾಜಮುಡಿ ಉತ್ಸವದಲ್ಲಿ ಕುಟುಂಬ ಸಮೇತ ಭಾಗವಹಿಸುತ್ತೇನೆ. ಸಚಿವ ಚಲುವರಾಯಸ್ವಾಮಿ ಅವರೊಂದಿಗೆ ಚರ್ಚಿಸಿ ಸಿಎಂರನ್ನು ರಾಜಮುಡಿ ಉತ್ಸವಕ್ಕೆ ಕರೆತರಲು ಪ್ರಯತ್ನ ಮಾಡುತ್ತೇನೆ ಎಂದರು.ಕ್ಷೇತ್ರದ ಅಭಿವೃದ್ಧಿಗೆ ಆಗಬೇಕಾದ ಕೆಲಸ ಕಾರ್ಯಗಳ ಪಟ್ಟಿಮಾಡಿ ನನಗೆ ನೀಡಿದರೆ ಶ್ರೀಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನ ಪಡುತ್ತೇನೆ. ಚಲುವನಾರಾಯಣಸ್ವಾಮಿ ವೈರಮುಡಿ ಉತ್ಸವದ ಬಗ್ಗೆ ಕೇಳಿದ್ದೆ. ಆದರೆ, ಬರಬೇಕೆಂದರೂ ಉತ್ಸವದ ವೇಳೆ ಆಗುತ್ತಿಲ್ಲ ಎಂದರು.
ಮೈಸೂರಿನಿಂದ ಸಂಜೆ ಮೇಲುಕೋಟೆಗೆ ಆಗಮಿಸಿದ ಸಚಿವರಿಗೆ ಸಾಂಪ್ರದಾಯಿಕ ಪದ್ಧತಿಯಂತೆ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು. ಚೆಲುವನಾರಾಯಣಸ್ವಾಮಿ ಮಹಾಲಕ್ಷ್ಮಿ ಯದುಗಿರಿನಾಯಕಿ ಅಮ್ಮನವರು ಹಾಗೂ ರಾಮಾನುಜಾಚಾರ್ಯರ ದರ್ಶನ ಪಡೆದರು.ಈ ವೇಳೆ ವ್ಯವಸ್ಥಾಪನಾ ಸಮಿತಿ ಪರ ಸ್ವಾಗತಿಸಿದ ಸದಸ್ಯ ಹಾಗೂ ವಕೀಲ ಕಾಡೇನಹಳ್ಳಿ ಸತೀಶ್ ಭಕ್ತಸ್ನೇಹಿಯಾಗಿ ಕ್ಷೇತ್ರದ ಅಭಿವೃದ್ದಿ ಕಾರ್ಯಗಳನ್ನು ವಿವರಿಸಿ ಸರ್ಕಾರದಿಂದ ಸಹಕಾರ ಕೊಡಿಸಲು ಕೋರಿದರು.
ರಾಜಾಶೀರ್ವಾದ ಪಡೆದ ಸಚಿವರು:ದರ್ಶನ ಮುಗಿಸಿ ಹೊರಡಲು ಸಿದ್ಧರಾದ ಸಚಿವ ಬಾಲಕೃಷ್ಣಗೆ ಸ್ಥಾನೀಕರು ಮಹಾಮಂಗಳಾರತಿಯಿದ್ದು, ಚೆಲುವನಾರಾಯಣಸ್ವಾಮಿ ಸನ್ನಿಧಿಯಲ್ಲಿ ವಿಶೇಷವಾಗಿ ನಡೆಯಲಿದೆ ಎಂದಾಗ ಅರ್ಧಗಂಟೆ ಕಾದು ರಾಜಗೋಪುರದ ಮುಂದೆ ಸಾಂಪ್ರದಾಯಿಕ ಪದ್ಧತಿಯಂತೆ ಮಹಾಮಂಗಳಾರತಿಯಲ್ಲಿ ಪಾಲ್ಗೊಂಡರು.
ದೀವಟಿಕೆ ನಮನದೊಂದಿಗೆ ಮತ್ತೊಮ್ಮೆ ದೇಗುಲಕ್ಕೆ ಪ್ರವೇಶಿಸಿ ಚೆಲುವನಾರಾಯಣಸ್ವಾಮಿ ಆಚಾರ್ಯರು, ಆಳ್ವಾರರು ಹಾಗೂ ಸನ್ನಿಧಿಗಳ ದರ್ಶನ ಪಡೆದ ಸಚಿವರು ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಭಕ್ತವಿಗ್ರಹಕ್ಕೆ ಗೌರವ ಸಮರ್ಪಿಸಿದರು. ನಂತರ ರಾಜಗೌರವ ಸ್ವೀಕರಿಸಿ ಜಕ್ಕನಹಳ್ಳಿಗೆ ತೆರಳಿದರು. ಅಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಟೀ ಕುಡಿದು ಬೆಂಗಳೂರಿಗೆ ತೆರಳಿದರು.ಸುಳ್ಳಿನ ಮೇಲೆ ಬಿಜೆಪಿ, ಆರ್‌ಎಸ್‌ಎಸ್ ರಾಜಕೀಯ: ರಿಜ್ವಾನ್ ಹರ್ಷದ್
ಕನ್ನಡಪ್ರಭ ವಾರ್ತೆ ಮದ್ದೂರುಬಿಜೆಪಿ ಮತ್ತು ಆರ್‌ಎಸ್‌ಎಸ್ ಸುಳ್ಳಿನ ಆಧಾರದ ಮೇಲೆ ರಾಜಕೀಯ ಮಾಡುತ್ತಾ ಸಮಾಜವನ್ನು ಛದ್ರಗೊಳಿಸುವ ಕೆಲಸ ಮಾಡುತ್ತಿವೆ ಎಂದು ನಾಗರಿಕ ಆಹಾರ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಖಾತೆ ಸಚಿವ ರಿಜ್ವಾನ್ ಹರ್ಷದ್ ದೂರಿದರು.ತಾಲೂಕಿನ ಗೆಜ್ಜಲಗೆರೆ ಸಮೀಪದ ಖಾಸಗಿ ಹೋಟೆಲ್‌ನಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಕುದರಗುಂಡಿ ನಾಗೇಶ್ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಿಂದ ಈ ದೇಶವನ್ನು ರಕ್ಷಣೆ ಮಾಡಬೇಕಾದರೆ ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಬೇಕಿದೆ ಎಂದರು.ಮುಂದಿನ ಚುನಾವಣೆ ವೇಳೆಗೆ ಕಾರ್ಯಕರ್ತರು ನಮ್ಮ ಸರ್ಕಾರದ ಜನಪರ ಯೋಜನೆಗಳನ್ನು ತಳ ಮಟ್ಟಕ್ಕೆ ಕೊಂಡೊಯ್ದು ಮತದಾರರ ಸಂಘಟನೆಗೆ ಈಗಿನಿಂದಲೇ ಕಾರ್ಯೋನ್ಮುಕರಾಗಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಕಾಂಗ್ರೆಸ್ ಮುಖಂಡರಾದ ಮುಟ್ಟನಹಳ್ಳಿ ಮಹೇಂದ್ರ, ಕೆ.ಪಿ.ಶ್ರೀಧರ ಸೇರಿದಂತೆ ಹಲವು ಮುಖಂಡರು ಇದ್ದರು.