ಸಾರಾಂಶ
ಕನ್ನಡಪ್ರಭ ವಾರ್ತೆ ಸವದತ್ತಿ
ಸಮಾಜದ ಉದ್ದಾರಕ್ಕಾಗಿ ವಿಶೇಷವಾದಂತ ಕೊಡುಗೆಗಳನ್ನು ನೀಡಿದ ಮಹನೀಯರ ಸ್ಮರಣೆಯನ್ನು ಮಾಡುವುದು ಇಂದು ಅತ್ಯವಶ್ಯಕವಾಗಿದೆ. ಮಹಾತ್ಮರ ನೆನಪಿಗಾಗಿ ಪಟ್ಟಣದ ಹೊರವಲಯದಲ್ಲಿರುವ ವರ್ತುಲಕ್ಕೆ ಹೂಗಾರ ಮಾದಯ್ಯನವರ ವರ್ತುಲ ಎಂದು ನಾಮಕರಣ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾದುದು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.ಪಟ್ಟಣದ ಹೂಲಿ ಕ್ರಾಸ್‌ನಲ್ಲಿ ಹೂಗಾರ, ಗುರವ, ಜೀರ, ಪೂಜಾರ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಹೂಗಾರ ಮಾದಯ್ಯನವರ ಜಯಂತಿ ಅಂಗವಾಗಿ ಹೂಲಿ ಕ್ರಾಸ್‌ಗೆ ಹೂಗಾರ ಮಾದಯ್ಯನವರ ವರ್ತುಲ ಎಂಬ ನಾಮಕರಣಗೊಳಿಸಿದ ಫಲಕ ಉದ್ಘಾಟಿಸಿ ಅವರು ಮಾತನಾಡಿದರು. ಹೂಗಾರ ಸಮಾಜದ ಅಭಿವೃದ್ಧಿಗೆ ನನ್ನ ಸಂಪೂರ್ಣ ಸಹಕಾರವಿದೆ. ಬರುವಂತ ದಿನಗಳಲ್ಲಿ ಸಮಾಜದಿಂದ ಕೈಗೊಳ್ಳುವ ಅಭಿವೃದ್ಧಿ ಕೆಲಸಗಳಿಗೆ ಸ್ಪಂದನೆ ನೀಡುವುದರ ಜೊತೆಗೆ ಸೂಕ್ತ ಅನುದಾನ ಒದಗಿಸುವ ಭರವಸೆ ನೀಡಿದರು.
ಬಿಜೆಪಿ ತಾಲೂಕು ಅಧ್ಯಕ್ಷ ವಿರುಪಾಕ್ಷ ಮಾಮನಿ ಮಾತನಾಡಿ, ಬಸವಾದಿ ಶರಣ ಹೂಗಾರ ಮಾದಯ್ಯನವರ ಜಯಂತಿ ಅಂಗವಾಗಿ ಇಂದು ಹಮ್ಮಿಕೊಂಡಿರುವ ಕಾರ್ಯ ಅತ್ಯುತ್ತಮವಾಗಿದ್ದು, ಶರಣರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾವೆಲ್ಲಾ ಮುನ್ನಡೆದುಕೊಂಡು ಶುದ್ಧ ಕಾಯಕವನ್ನು ಮೈಗೂಡಿಸಿಕೊಂಡು ಸಾಗಬೇಕಿದೆ ಎಂದರು.ಚಿದಂಬರೇಶ್ವರ ದೇವಸ್ಥಾನದ ಶ್ರೀ ಪ್ರಸನ್ನ ದೀಕ್ಷೀತರು, ಹೂಗಾರ ಸಮಾಜದ ಜಿಲ್ಲಾಧ್ಯಕ್ಷ ಶಿವಾನಂದ ಹೂಗಾರ, ಶಿವಲಿಂಗಪ್ರಭು ಹೂಗಾರ, ಮೋಹನ ಹೂಗಾರ, ತಾಲೂಕು ಅಧ್ಯಕ್ಷ ಶಿವಾನಂದ ಚನ್ನಪ್ಪ ಹೂಗಾರ, ಬಿ.ಎನ್.ಪ್ರಭುನವರ, ಶಿವಪುತ್ರಪ್ಪ ಹೂಗಾರ, ಉದಯಕುಮಾರ ಹೂಗಾರ, ಚನಬಸಪ್ಪ ಪೂಜೇರ, ಬಸವರಾಜ ಕಪ್ಪಣ್ಣವರ, ಅರ್ಜುನ ಅಮ್ಮೋಜಿ, ಜಗದೀಶ ಕೌಜಗೇರಿ, ವೀರೇಶ ಪ್ರಭುನವರ, ರವಿ ಬ್ಯಾಹಟ್ಟಿ, ಯಲ್ಲಪ್ಪ ಭಜೇರಿ, ಬಸವರಾಜ ಗುರಣ್ಣವರ, ಕಾಂತು ಪೂಜೇರ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.