ಭಾರತ- ಪಾಕಿಸ್ತಾನ ಯುದ್ಧಕ್ಕೆ ಸಂರ್ಪೂಣ ಬೆಂಬಲ: ಇಮ್ಮಡಿ ಮುರುಗೇಂದ್ರ ಸ್ವಾಮೀಜಿ

| Published : May 11 2025, 11:54 PM IST

ಭಾರತ- ಪಾಕಿಸ್ತಾನ ಯುದ್ಧಕ್ಕೆ ಸಂರ್ಪೂಣ ಬೆಂಬಲ: ಇಮ್ಮಡಿ ಮುರುಗೇಂದ್ರ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಆರಂಭಗೊಂಡು, ಅನೇಕ ಮುಗ್ದ ಜನರ ಸಾವು ನೋವು ಉಂಟಾಗಿದೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನಮ್ಮ ನೆಲಕ್ಕೆ ಬಂದು ಅಮಾಯಕ ಪ್ರವಾಸಿಗರನ್ನು ಹೊಡೆದು ಹಾಕಿದ ಪಾಕಿಸ್ತಾನದ ಮೇಲೆ ಯುದ್ಧ ಸಾರಿರುವ ಪ್ರದಾನಿ ನರೇಂದ್ರ ಮೋದಿ ಅವರ ನಿರ್ಧಾರಕ್ಕೆ ಮತ್ತು ಅವರ ನಾಯಕತ್ವಕ್ಕೆ ಮಠಾಧೀಶರ ಸಂಪೂರ್ಣ ಬೆಂಬಲ ಇದೆ ಎಂದು ಮರಿಯಾಲ ಮಠದ ಶ್ರೀ ಇಮ್ಮಡಿ ಮುರುಗೇಂದ್ರ ಸ್ವಾಮೀಜಿ ತಿಳಿಸಿದರು.

ನಗರದ ವಿರಕ್ತರ ಮಠದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ನಾಲ್ಕು ದಿನಗಳಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಆರಂಭಗೊಂಡು, ಅನೇಕ ಮುಗ್ದ ಜನರ ಸಾವು ನೋವು ಉಂಟಾಗಿದೆ. ಭಾರತ ಮತ್ತು ಪಾಕಿಸ್ತಾನದಲ್ಲಿರುವ ಮುಗ್ಧ ಜನರ ಸಾವು ನೋವುಗಳು ಶಾಂತಿಪ್ರಿಯ ಮಠಾಧೀಶರಾದ ನಮಗೆ ನೋವುಂಟು ಮಾಡುತ್ತಿದೆ ಎಂದರು.

ಯಾವಾಗಲೂ ಜನತೆ ಶಾಂತಿಯಿಂದ ಬಾಳಬೇಕು ಎಂದು ಹಾರೈಸುತ್ತೇವೆ. ಆದರೂ ಈ ನಾಡಿನ ಈ ಮಣ್ಣಿನ ಋಣ ತೀರಿಸುವುದಕ್ಕಾಗಿ ಮಠಾಧೀಶರಾದ ನಾವು ಭಾರತ ದೇಶದ ಪ್ರಧಾನಿಗಳಾದ ನರೇಂದ್ರ ಮೋದಿ ಅವರ ನಾಯಕತ್ವವನ್ನು ಒಪ್ಪಿದ್ದೇವೆ. ಅವರ ಯುದ್ಧದ ನಿರ್ಣಯಗಳನ್ನು ಬೆಂಬಲಿಸುತ್ತೇವೆ ಎಂದರು.

ನರೇಂದ್ರ ಮೋದಿಯವರು ಅತ್ಯಂತ ದಕ್ಷ ಹಾಗೂ ಪ್ರಾಮಾಣಿಕ ವ್ಯಕ್ತಿಯಾಗಿದ್ದು ಸದಾ ದೇಶದ ಅಭಿವೃದ್ಧಿ ಹಾಗೂ ಒಳಿತನ್ನು ಬಯಸುತ್ತಿದ್ದಾರೆ. ಆಧ್ಯಾತ್ಮಿಕತೆಗೆ ಹೆಚ್ಚು ಒತ್ತು ನೀಡುವ ಭಾರತೀಯ ಸಂಸ್ಕೃತಿ, ಪರಂಪರೆಗೆ ಹೆಚ್ಚಿನ ಒತ್ತು ನೀಡುವ ಅವರ ನಿರ್ಧಾರಗಳು ಸಹ ದೇಶಧ ಒಳಿತಾಗಿ ಇರುತ್ತದೆ ಎಂದರು.

ಪಾಕಿಸ್ತಾನದಿಂದ ಬಂದ ಉಗ್ರವಾದಿಗಳು ಮುಗ್ಧ ಭಾರತೀಯರನ್ನು ಧರ್ಮದ ನೆಪದಲ್ಲಿ ಕೊಂದು ಹಾಕಿರುವುದನ್ನು ನಾವು ಖಂಡಿಸುತ್ತೇವೆ. ಇಂಥವರನ್ನು ಹೊಡೆದು ಹಾಕಲು ಭಾರತದ ಸೈನಿಕರು ಹಾಗೂ ಪ್ರಧಾನಿ ಮೋದಿ ಅವರಿಗೆ ನಮ್ಮ ಆಶೀರ್ವಾದ ಬೆಂಬಲ ಇರುತ್ತದೆ. ಪಾಕಿಸ್ತಾನ ಒಂದು ರೋಗಗ್ರಸ್ತ ದೇಶವಾಗಿದ್ದು ಧರ್ಮದ ನೆಪದಲ್ಲಿ ಮುಗ್ಧ ಭಾರತೀಯರನ್ನು ಕೊಲ್ಲಲು ಸಂಚು ಮಾಡುತ್ತಿರುವುದು ಖಂಡನೀಯ ಎಂದರು.

ಮೋದಿಯವರ ನಾಯಕತ್ವದಲ್ಲಿ ಈ ಯುದ್ಧವನ್ನು ಗೆಲ್ಲಲು ಭಾರತೀಯರಾದ ನಾವು ಪಕ್ಷಾತೀತವಾಗಿ ಹಾಗೂ ಧರ್ಮಾತೀತವಾಗಿ ಬೆಂಬಲ ನೀಡಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಮಠಾಧೀಶರ ಬೆಂಬಲ ಸದಾ ಇರುತ್ತದೆ ಎಂದರು.

ನಗರ ಮಠದ ಶ್ರೀ ಚನ್ನಬಸವ ಸ್ವಾಮೀಜಿ ಮಾತನಾಡಿ, ಪ್ರಧಾನಿ ಮೋದಿಯವರಿಗೆ ಕರ್ನಾಟಕದ ಬಗ್ಗೆ ವಿಶೇಷವಾದ ಕಾಳಜಿ ಇದೆ. 12ನೇ ಶತಮಾನದ ಶರಣ ಬಸವಣ್ಣನವರ ಬಗ್ಗೆ ಅಪಾರ ಪ್ರೀತಿ ಉಳ್ಳವರಾಗಿದ್ದು ಪಾರ್ಲಿಮೆಂಟ್‌ನಲ್ಲಿ ಬಸವಣ್ಣನವರ ಮೂರ್ತಿಯನ್ನು ಸ್ಥಾಪಿಸಿದ್ದು ಅಲ್ಲಿ ಶ್ರೀ ಬಸವೇಶ್ವರರವರ ವಚನಗಳನ್ನು ಕೆತ್ತಿಸಿದ್ದಾರೆ. ಈ ಬಾರಿ ಪಾರ್ಲಿಮೆಂಟಿನಲ್ಲಿ ಅದ್ಧೂರಿಯಾಗಿ ಕೇಂದ್ರ ಸಚಿವ ವಿ. ಸೋಮಣ್ಣ ಅವರ ನೇತೃತ್ವದಲ್ಲಿ ಬಸವ ಜಯಂತಿ ಆಚರಣೆಯಾಗಿರುವುದು ಸಂತಸ ತಂದಿದೆ. ಈ ಕಾರಣಕ್ಕಾಗಿ ಕರ್ನಾಟಕದ ಮಠಾಧೀಶರಾದ ನಾವುಗಳು ಮೋದಿಯವರನ್ನು ಹಾಗೂ ಕೇಂದ್ರ ಸಚಿವ ವಿ. ಸೋಮಣ್ಣನವರನ್ನು ಸಂಪೂರ್ಣವಾಗಿ ಬೆಂಬಲಿಸುವುದಾಗಿ ತಿಳಿಸಿದರು.

ಗೋಷ್ಠಿಯಲ್ಲಿ ಹಂಡ್ರಕಳ್ಳಿ ವೀರಾಸಿಂಹಾಶನ ಮಠಾಧ್ಯಕ್ಷರಾದ ಶಿವಚಾರ್ಯ ಸ್ವಾಮೀಜಿ, ಕೊತ್ತಲವಾಡಿ ಪಟ್ಟದ ಮಠಾಧ್ಯಕ್ಷರಾದ ಶ್ರೀ ಗುರು ಸ್ವಾಮೀಜಿ, ಉಗನೇದಹುಂಡಿ ಮಠಾಧ್ಯಕ್ಷರಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮುಖಂಡರಾದ ಅಮ್ಮನಪುರ ಮಲ್ಲೇಶ್, ಕೊತ್ತಲವಾಡಿ ಕುಮಾರ್, ನಟರಾಜು ಇದ್ದರು. -------

11ಸಿಎಚ್ಎನ್52

ಚಾಮರಾಜನಗರದ ವಿರಕ್ತರ ಮಠದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮರಿಯಾಲ ಮಠದ ಶ್ರೀ ಇಮ್ಮಡಿ ಮುರುಗೇಂದ್ರಸ್ವಾಮೀಜಿ ಅ‍ವರು ಮಾತನಾಡಿದರು.