ಸಾಹಿತ್ಯ ಸಮ್ಮೇಳನಕ್ಕೆ ಸಂಪೂರ್ಣ ಬೆಂಬಲ: ದರ್ಶನಾಪೂರ

| Published : Feb 07 2024, 01:45 AM IST

ಸಾಹಿತ್ಯ ಸಮ್ಮೇಳನಕ್ಕೆ ಸಂಪೂರ್ಣ ಬೆಂಬಲ: ದರ್ಶನಾಪೂರ
Share this Article
  • FB
  • TW
  • Linkdin
  • Email

ಸಾರಾಂಶ

ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಶಹಾಪುರ ನಾಗರಿಕರು, ಸಾಹಿತಿಗಳು, ಸಾಹಿತಿ ಆಸಕ್ತರು, ಕವಿಗಳು ಹಾಗೂ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರು, ಪರಿಷತ್ತಿನ ಸರ್ವ ಸದಸ್ಯರ ಸಂಪೂರ್ಣ ಸಹಕಾರ ಅಗತ್ಯ.

ಕನ್ನಡಪ್ರಭ ವಾರ್ತೆ ಶಹಾಪುರ

ತಾಲೂಕು 4ನೇ ಕನ್ನಡ ಸಾಹಿತ್ಯಸಮ್ಮೇಳನ ನಿಮಿತ್ತ ಶಹಾಪುರ ಸಮೀಪದ ಭೀಮರಾಯನ ಗುಡಿಯ ಪ್ರವಾಸಿ ಮಂದಿರದಲ್ಲಿ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಅವರನ್ನು ಭೇಟಿ ಮಾಡಿ ಚರ್ಚಿಸಿದ ನಂತರ ಫೆ.26ರಂದು ಸಮ್ಮೇಳನ ನಡೆಸಲು ದಿನಾಂಕ ನಿಗದಿಪಡಿಸಿದರು.

ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ನಡೆಸೋಣ. ಅದಕ್ಕೆ ನನ್ನ ಸಂಪೂರ್ಣ ಸಹಕಾರ ಬೆಂಬಲವಿದೆ. ಎಲ್ಲರನ್ನು ಒಳಗೊಳ್ಳುವ ನಾಡಿನಲ್ಲಿ ಮಾದರಿ ಸಮ್ಮೇಳನವಾಗಿಸಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದು ದರ್ಶನಾಪೂರ ನಿಯೋಗಕ್ಕೆ ಭರವಸೆ ನೀಡಿದರು.

ಕಸಾಪ ತಾಲೂಕು ಅಧ್ಯಕ್ಷ ಡಾ. ರವೀಂದ್ರನಾಥ ಹೊಸಮನಿ ಮಾತನಾಡಿ, ಸಚಿವರ ಸಹಾಯ, ಸಹಕಾರದಿಂದ ಸಾಹಿತ್ಯ ಸಮ್ಮೇಳನವನ್ನು ಅದ್ದೂರಿಯಾಗಿ ವಿಶಿಷ್ಟವಾಗಿ ಆಚರಿಸೋಣ. ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಶಹಾಪುರ ನಾಗರಿಕರು, ಸಾಹಿತಿಗಳು, ಸಾಹಿತಿ ಆಸಕ್ತರು, ಕವಿಗಳು ಹಾಗೂ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರು, ಪರಿಷತ್ತಿನ ಸರ್ವ ಸದಸ್ಯರ ಸಂಪೂರ್ಣ ಸಹಕಾರ ಅಗತ್ಯವಿದೆ ಎಂದರು.

ಹಿರಿಯ ಮುಖಂಡ ಮರಿಗೌಡ ಹುಲಕಲ್, ಶಿವಮಾಂತಪ್ಪ ಸಾಹು, ಮಲ್ಲಾರೆಡ್ಡಿ ಪಾಟೀಲ್ ಹೋತಪೇಟ, ನಾನಾಗೌಡ ಸೈದಾಪುರ, ಹಿರಿಯ ಸಾಹಿತಿ ಸಿದ್ಧರಾಮ ಹೊನ್ಕಲ್, ನಿಕಟಪೂರ್ವ ಅಧ್ಯಕ್ಷ ಸಿದ್ಧಲಿಂಗಣ್ಣ ಆನೆಗುಂದಿ, ಭೀಮರಾಯನಗುಡಿ ವಲಯ ಕಸಾಪ ಅಧ್ಯಕ್ಷ ಶರಣಬಸವ ಪೊಲೀಸ್ ಬಿರಾದಾರ್, ಸಣ್ಣ ನಿಂಗಪ್ಪ ನಾಯ್ಕೋಡಿ, ಬಸವರಾಜ ಹಿರೇಮಠ, ನೀಲಕಂಠ ಬಡಿಗೇರ, ಸಾಯಿಬಣ್ಣ ಪುರ್ಲೆ, ದೇವಿಂದ್ರಪ್ಪ ಮೇಟಿ, ಶಕುಂತಲಾ ಹಡಗಲಿ, ಕಾವೇರಿ ಪಾಟೀಲ್, ಸಾಯಬಣ್ಣ ಮಡಿವಾಳಕರ್, ಪ್ರೊ. ಶಿವಲಿಂಗಣ್ಣ ಸಾಹು, ದೇವಿಂದ್ರಪ್ಪ ವಿಶ್ವಕರ್ಮ ಇತರರಿದ್ದರು.