ಗುರುವಿನ ಪರಿಶ್ರಮ, ತ್ಯಾಗದಿಂದ ಮೌಲಿಕ ಶಿಕ್ಷಣ ಸಾಧ್ಯ

| Published : Sep 07 2025, 01:00 AM IST

ಗುರುವಿನ ಪರಿಶ್ರಮ, ತ್ಯಾಗದಿಂದ ಮೌಲಿಕ ಶಿಕ್ಷಣ ಸಾಧ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ಷರ ಬಿತ್ತುವ ಪವಿತ್ರ ಕಾರ್ಯದಲ್ಲಿ ಶ್ರದ್ಧೆ ಅತ್ಯಂತ ಮುಖ್ಯವಾಗುತ್ತದೆ. ಒಬ್ಬೊಬ್ಬರು ಒಂದೊಂದು ವೃತ್ತಿ ಆಯ್ಕೆ ಮಾಡಿಕೊಂಡಿರುತ್ತಾರೆ

ಹಾನಗಲ್ಲ: ಶಾಲಾ ಮಕ್ಕಳ ಸುಭದ್ರ ಭವಿಷ್ಯ ರೂಪಿಸುವ ಸಂಕಲ್ಪ ಶಿಕ್ಷಕರದಾದರೆ ಭವ್ಯ ಭಾರತ ನಿರ್ಮಾಣ ಸುಲಭ ಸಾಧ್ಯವಿದ್ದು, ಗುರುವಿನ ಪರಿಶ್ರಮ ತ್ಯಾಗದಿಂದ ಮಾತ್ರ ಮೌಲಿಕ ಶಿಕ್ಷಣ ಸಾಧ್ಯ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.

ಶನಿವಾರ ಇಲ್ಲಿನ ಶ್ರೀಕುಮಾರೇಶ್ವರ ವಿರಕ್ತಮಠದ ಆವರಣದ ಸದಾಶಿವ ಮಂಗಲಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ತಾಲೂಕಾಡಳಿತ ಆಯೋಜಿಸಿದ ತಾಲೂಕು ಮಟ್ಟದ ಶಿಕ್ಷಕ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಅಕ್ಷರ ಬಿತ್ತುವ ಪವಿತ್ರ ಕಾರ್ಯದಲ್ಲಿ ಶ್ರದ್ಧೆ ಅತ್ಯಂತ ಮುಖ್ಯವಾಗುತ್ತದೆ. ಒಬ್ಬೊಬ್ಬರು ಒಂದೊಂದು ವೃತ್ತಿ ಆಯ್ಕೆ ಮಾಡಿಕೊಂಡಿರುತ್ತಾರೆ. ಅದರಲ್ಲಿ ನಿಷ್ಠೆಯಿಂದ ಕೆಲಸ ನಿರ್ವಹಿಸಬೇಕು. ಎಲ್ಲರೂ ತಮ್ಮ ತಮ್ಮ ಕೆಲಸ ಸರಿಯಾಗಿ ನಿರ್ವಹಿಸಿದರೆ ಮಾತ್ರ ಎಲ್ಲವೂ ಸರಿಯಾಗಿರಲು ಸಾಧ್ಯ. ಇಂದು ಶಿಕ್ಷಣ ವ್ಯವಸ್ಥೆ ಸವಾಲಿನದಾಗಿದ್ದು, ವಿವಿಧ ಸಂಘ ಸಂಸ್ಥೆಗಳು ಹಾನಗಲ್ಲ ತಾಲೂಕಿನ ಶೈಕ್ಷಣಿಕ ಸೇವೆಗೆ ಸಹಕರಿಸುತ್ತಿರುವುದೇ ಒಂದು ಭಾಗ್ಯವಾಗಿದೆ ಎಂದರು.

ಸಾನ್ನಿಧ್ಯ ವಹಿಸಿ ಮಾತನಾಡಿದ ಅಕ್ಕಿಆಲೂರು ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ನಮ್ಮ ವೃತ್ತಿಗೆ ಬೆಲೆ ಬರುವ ತೆರನಾಗಿ ನಮ್ಮ ಸೇವೆ ಇರಬೇಕು. ವೃತ್ತಿ ಪ್ರವೃತ್ತಿಗಳು ಪರಿಶುದ್ಧ ಭಾವದಿಂದ ಕೂಡಿರಬೇಕು. ಗುರುವನ್ನು ಅತ್ಯಂತ ಎತ್ತರದಲ್ಲಿ ಗುರುತಿಸಿ ಪೂಜಿಸುವ ಈ ಸಮಾಜಕ್ಕೆ ಗುರುಗಳು ಕೂಡ ಸಮಾಜದ ಋಣ ತೀರಿಸುವಂತಿರಬೇಕು ಎಂದರು.

ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ ಮಾತನಾಡಿ, ಶಿಕ್ಷಕ ಸಮಾಜದ ನಡುವೆ ಉತ್ತಮ ಬಾಂಧವ್ಯ ಬೇಕಾಗಿದೆ. ನಮ್ಮ ಪಠ್ಯದಲ್ಲಿ ಮೌಲ್ಯ ಶಿಕ್ಷಣದ ಮಾನದಂಡಗಳಿರಬೇಕು. ಬದಲಾದ ಕಾಲಕ್ಕೆ ಶಿಕ್ಷಣದ ನೀತಿ ರೀತಿಗಳೂ ಬದಲಾಗಬೇಕು. ಆದರೆ ಮೌಲ್ಯ ಶಿಕ್ಷಣಕ್ಕೆ ಹೆಚ್ಚಿನ ಒತ್ತ ನೀಡಬೇಕು ಎಂದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಪೂಜಾರ, ವಾಣಿಜ್ಯ ತೆರಿಗೆ ಅಧಿಕಾರಿ ಭುವನೇಶ್ವರಿ ಪಾಟೀಲ ಮಾತನಾಡಿದರು. ಪುರಸಭೆ ಅಧ್ಯಕ್ಷೆ ರಾಧಿಕಾ ದೇಶಪಾಂಡೆ, ಉಪಾಧ್ಯಕ್ಷೆ ವೀಣಾ ಗುಡಿ, ಕೆಡಿಪಿ ಸದಸ್ಯರಾದ ಮಹ್ಮದಹನೀಫ ಬಂಕಾಪೂರ, ಅನಿತಾ ಡಿಸೋಜಾ, ಪ್ರಕಾಶ ಈಳಿಗೇರ, ರಾಜೇಶ ಚೌಹಾಣ, ಮಾರ್ಕಂಡಪ್ಪ ಮೂಡೂರ, ಅನಿತಾ ಶಿವೂರ, ಹೆಗ್ಗಪ್ಪ ಕಾಮನಹಳ್ಳಿ ಅತಿಥಿಗಳಾಗಿದ್ದರು.

ವಿವಿಧ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳಾದ ಗುರುನಾಥ ಗವಾಣಿಕರ, ಶಿವಯೋಗಿ ನರೇಗಲ್ಲ, ಸಿ.ಜಿ. ಪಾಟೀಲ, ಎಂ.ಎಸ್. ಬಡಿಗೇರ, ಪಿ.ಆರ್. ಚಿಕ್ಕಳ್ಳಿ, ಡಿ.ಡಿ. ಲಂಗೋಟಿ, ಎಸ್.ವಿ. ಬೂದಿಹಾಳ, ಎಂ.ಎ.ಮನ್ನಂಗಿ, ಅನಿತಾ ಕಿತ್ತೂರ, ಜಿ.ಜಿ.ನೂಲ್ವಿ, ಸಂತೋಷ ದೊಡ್ಡಮನಿ, ಅನಿಲಕುಮಾರ ಗೋಣೆಣ್ಣನವರ, ಬಿ.ವೈಬೆಳ್ಳಿಕಟ್ಟಿ, ಪ್ರಕಾಶ ಚವ್ಹಾಣ, ಶಿವಾನಂದ ಚಕ್ರಸಾಲಿ, ಮಖಬೂಲ ಲಿಂಗದಹಳ್ಳಿ, ಮಹೇಶ ನಾಯಕ, ಬಿ.ಎಸ್. ಚಲ್ಲಾಳ, ಎಸ್.ಕೆ. ದೊಡ್ಡಮನಿ, ಸಂತೋಷ ವಡ್ಡರ, ರಾಕೇಶ ಜಿಗಳಿ, ಲಕ್ಷ್ಮೀಬಾಯಿ ಓಂಕಾರಿ, ಎಂ.ಎ .ಲೋಹಾರ, ಆರ್.ಬಿ.ಬಡಿಗೇರ, ರಮೇಶ, ಎನ್.ಎಸ್. ಮುಶಪ್ಪನವರ, ಮಹಮ್ಮದ್‌ಸಲೀಂ ಜಮಖಂಡಿ, ಹರೀಶಕುಮಾರ ಮಹೇಂದ್ರಕರ, ಗಂಗಾಧರಯ್ಯ ಹಿರೇಮಠ ಮೊದಲಾದವರು ವೇದಿಕೆಯಲ್ಲಿದ್ದರು.

ಜಗದೀಶ ಮಡಿವಾಳರ ಸಂಗಡಿಗರು ಪ್ರಾರ್ಥನೆ ಹಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಸ್. ಹಿರೇಮಠ ಸ್ವಾಗತಿಸಿದರು. ಸಿದ್ದಲಿಂಗೇಶ ಗೌಡಣ್ಣನವರ ನಿರೂಪಿಸಿದರು. ಗಂಗಾಧರ ವಡ್ಡರ ವಂದಿಸಿದರು.