ಸಾರಾಂಶ
ಬ್ಯಾಡಗಿ: ಜಿಲ್ಲಾ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ರಸ್ತೆಬದಿ ನೆಡುತೋಪು ನಿರ್ಮಾಣ ಮಾಡಲು ಬಿಡುಗಡೆಯಾದ ಅನುದಾನ ಸದ್ಬಳಕೆಯಾಗುತ್ತಿಲ್ಲ ಎಂದು ಆರೋಪಿಸಿ ಕರವೇ ಗಜಪಡೆ ಕಾರ್ಯಕರ್ತರು ಪಟ್ಟಣದ ಅರಣ್ಯ ವಲಯ ಅಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.ಬಳಿಕ ಮಾತನಾಡಿದ ಜಿಲ್ಲಾಧ್ಯಕ್ಷ ಮಂಜುನಾಥ ಓಲೇಕಾರ, ಹಲವು ವರ್ಷದಿಂದ ಜಿಲ್ಲೆಯ ವಿವಿಧ ವಲಯಗಳಲ್ಲಿ ಸಸಿಗಳನ್ನು ನೆಪಮಾತ್ರಕ್ಕೆ ನೆಡಲಾಗುತ್ತಿದೆ. ಪ್ರತಿ ವರ್ಷವೂ ಸಸಿ ಬೆಳೆಸಲಾಗಿದೆ ಎಂದು ದಾಖಲೆ ಸೃಷ್ಟಿಸಲಾಗಿದೆ. ಆದರೆ ಹಚ್ಚಿದ ಸಸಿಗಳು ಎಲ್ಲಿ ಹೋದವು ಎಂದು ಪ್ರಶ್ನಿಸಿದರು. ಪ್ರಸಕ್ತ ಸಾಲಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸಸಿ ನೆಡಲು(ಆರ್‌ಆರ್‌ಪಿ ಯೋಜನೆ) ಪ್ರತಿ ವಿಧಾನಸಭೆ ಮತ ಕ್ಷೇತ್ರದಲ್ಲಿ ₹75 ಲಕ್ಷ ಬಿಡುಗಡೆಯಾಗಿದೆ ಎಂದರು.
ಇದೇ ವೇಳೆ ಹಾವೇರಿಯ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಶ್ರೀನಾಥ ಕಡೋಲ್ಕರ ಅವರಿಗೆ ಮನವಿ ಸಲ್ಲಿಸಿದರು. ಮುಖಂಡ ಚಂದ್ರಶೇಖರ ಗದಗಕರ, ಕರವೇ ತಾಲೂಕಾಧ್ಯಕ್ಷ ಪವನ ಒಡ್ಡರ, ಪುಟ್ಟಪ್ಪ ಹಿತ್ತಲಮನಿ, ಫಕ್ಕೀರಪ್ಪ ಕಟ್ಟಿಮನಿ, ಸುಧಾ ಪಾಟೀಲ, ಪ್ರಕಾಶ ಕೆಮ್ಮಣಕೇರಿ, ಆರ್. ರೇಣುಕಾ ಶಾರದಾ ಬುರಡೀಕಟ್ಟಿ ಇತರರಿದ್ದರು.ನಾಳೆ ಹಾನಗಲ್ಲಿನಲ್ಲಿ ಉದ್ಯೋಗ ಮೇಳಹಾನಗಲ್ಲ: ಶಾಸಕ ಶ್ರೀನಿವಾಸ ಮಾನೆ ಅವರ 50ನೇ ಜನ್ಮದಿನದ ಅಂಗವಾಗಿ ಇಲ್ಲಿನ ಗುರುಭವನದಲ್ಲಿನ ಉದ್ಯೋಗ ಸಮೃದ್ಧಿ ಕೇಂದ್ರದಲ್ಲಿ ಮೇ 17 ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 12ಗಂಟೆವರೆಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ.ಎಸ್ಸೆಸ್ಸೆಲ್ಸಿ ಪಾಸ್, ದ್ವಿತೀಯು ಪಿಯುಸಿ ಪಾಸ್/ಫೇಲ್, ಐಟಿಐ, ಡಿಪ್ಲೊಮಾ ಆದವರು ಮೇಳದಲ್ಲಿ ಭಾಗವಹಿಸಬಹುದು. ಜಪಾನ್ ಮೂಲದ ಯಜೂಕಿ ಇಂಡಿಯಾ ಪ್ರೆ.ಲಿ., ಎಂಎನ್‌ಸಿ ಕಂಪನಿ 300ಕ್ಕೂ ಹೆಚ್ಚು ಉದ್ಯೋಗಾವಕಾಶ ಕಲ್ಪಿಸಿಕೊಡಲಿದೆ. ಆಯ್ಕೆಯಾದವರಿಗೆ ಪ್ರತಿ ತಿಂಗಳು ₹12,900 ರಿಂದ ₹13,919 ಸಂಬಳ ಅಲ್ಲದೇ ಪಿಎಫ್,ಇಎಸ್‌ಐ, ಕ್ಯಾಂಟೀನ್, ಸಾರಿಗೆ ಸೇರಿದಂತೆ ಇತರ ಸೌಲಭ್ಯ ಕಲ್ಪಿಸಲಾಗುವುದು. ಹೆಚ್ಚಿನ ಮಾಹಿತಿಗೆ ಗಿರೀಶ, ಉದ್ಯೋಗ ಸಮೃದ್ಧಿ ಕೇಂದ್ರ ಗುರುಭವನ ಹಾನಗಲ್ಲ ಮೊ. 6361154867 ಸಂಪರ್ಕಿಸುವಂತೆ ಪ್ರಕಟಣೆ ಕೋರಿದೆ.ನೇತ್ರ ತಪಾಸಣೆ ಶಿಬಿರ: ಶಾಸಕ ಶ್ರೀನಿವಾಸ ಮಾನೆ ಅವರ ಜನ್ಮ ವರ್ಷಾಚರಣೆ ಅಂಗವಾಗಿ ಮೇ 16ರಂದು ತಾಲೂಕಿನ ಬೈಚವಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 1ಗಂಟೆಯವರೆಗೆ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ. ಶಿರಸಿಯ ರೋಟರಿ ಚಾರಿಟೇಬಲ್ ಆಸ್ಪತ್ರೆ ಹಾಗೂ ಟೀಂ ಆಪತ್ಬಾಂಧವ ಆಶ್ರಯದಲ್ಲಿ ಆಯೋಜಿಸಿರುವ ಶಿಬಿರದಲ್ಲಿ ತಜ್ಞ ವೈದ್ಯರು ತಪಾಸಣೆ ಕೈಗೊಳ್ಳಲಿದ್ದು, ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದವರಿಗೆ ಶಿರಸಿಯಲ್ಲಿ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗುವುದು. ಹೆಚ್ಚಿನ ಮಾಹಿತಿಗೆ ಮೊ. 8120781217 ಸಂಪರ್ಕಿಸುವಂತೆ ಪ್ರಕಟಣೆ ಕೋರಿದೆ.