ಆತ್ಮಹತ್ಯೆ ಮಾಡಿಕೊಂಡಿದ್ದ ಪೊಲೀಸ್ ಪೇದೆಯ ಅಂತ್ಯಕ್ರಿಯೆ

| Published : Mar 25 2024, 12:51 AM IST

ಸಾರಾಂಶ

ಪಾಲಬಾವಿ: ಹಾಸನ ಜಿಲ್ಲೆಯ ಅರಸಿಕೆರೆ ರೈಲು ನಿಲ್ದಾಣದ ಬಳಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದ ಪೊಲೀಸ್ ಪೇದೆ ಆನಂದ ಶ್ರೀಮಂತ ಹಂಜೆ(32) ಅಂತ್ಯಕ್ರಿಯೆಯನ್ನು ಆತನ ತವರೂರು ಅಳಗವಾಡಿ ಗ್ರಾಮದಲ್ಲಿ ನಡೆಸಲಾಯಿತು.

ಪಾಲಬಾವಿ: ಹಾಸನ ಜಿಲ್ಲೆಯ ಅರಸಿಕೆರೆ ರೈಲು ನಿಲ್ದಾಣದ ಬಳಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದ ಪೊಲೀಸ್ ಪೇದೆ ಆನಂದ ಶ್ರೀಮಂತ ಹಂಜೆ(32) ಅಂತ್ಯಕ್ರಿಯೆಯನ್ನು ಆತನ ತವರೂರು ಅಳಗವಾಡಿ ಗ್ರಾಮದಲ್ಲಿ ನಡೆಸಲಾಯಿತು.

ಬೆಂಗಳೂರಿನ ಎಲೆಕ್ಟ್ರಾನಿಕ್ಸ್‌ ಸಿಟಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಆನಂದ ಗುರುವಾರ ರಾತ್ರಿ ಹಾಸನ ಜಿಲ್ಲೆಯ ಅರಸಿಕೆರೆ ರೈಲು ನಿಲ್ದಾಣದ ಸಮೀಪ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಬಗ್ಗೆ ಅರಸಿಕೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ದೇಹವನ್ನು ಶನಿವಾರ ಸ್ವಗ್ರಾಮಕ್ಕೆ ತರಲಾಗಿತ್ತು. ಬೆಳಗಾವಿ ಜಿಲ್ಲಾ ಮೀಸಲು ಪೊಲೀಸ್ ಪಡೆಯ ನೇತೃತ್ವದಲ್ಲಿ ಸಕಲ ಪೊಲೀಸ್ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ತಂದೆ-ತಾಯಿಗೆ ಒಬ್ಬನೆ ಗಂಡು ಮಗ. ಮಗನನ್ನು ಕಳೆದುಕೊಂಡ ಮನೆಯಲ್ಲಿ ತಂದೆ-ತಾಯಿಯ ಅಂಕ್ರಂದನ ಮುಗಿಲು ಮುಟ್ಟಿತ್ತು.