ಸಾರಾಂಶ
ತಾಲೂಕಿನ ಆಗರಬನ್ನಿಹಟ್ಟಿ ಗ್ರಾಮದ ರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ 1ನೇ ತರಗತಿಯ ಮಕ್ಕಳಿಗಾಗಿ ನಲಿ-ಕಲಿ ಕೊಠಡಿಗೆ ಬೇಕಾದಂತಹ ಟೇಬಲ್‌ಗಳು ಮತ್ತು ಚೇರುಗಳ ಖರೀದಿಗೆ ಆರ್ಥಿಕ ನೆರವು ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನ ಆಗರಬನ್ನಿಹಟ್ಟಿ ಗ್ರಾಮದ ರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ 1ನೇ ತರಗತಿಯ ಮಕ್ಕಳಿಗಾಗಿ ನಲಿ-ಕಲಿ ಕೊಠಡಿಗೆ ಬೇಕಾದಂತಹ ಟೇಬಲ್‌ಗಳು ಮತ್ತು ಚೇರುಗಳ ಖರೀದಿಗೆ ಆರ್ಥಿಕ ನೆರವು ನೀಡಿದರು.ಎಸ್.ಡಿ.ಎಂ.ಸಿ. ಅಧ್ಯಕ್ಷ ಮಹಬೂಬ್ ಖಾನ್ ₹5 ಸಾವಿರ, ಸದಸ್ಯರಾದ ಮುಹಿಬ್ ಉಲ್ಲಾ ₹5 ಸಾವಿರ, ಸಮೀಉಲ್ಲಾ ₹5 ಸಾವಿರ, ಮಾಜಿ ಅಧ್ಯಕ್ಷ ನಜೀಬ್ ಉಲ್ಲಾ ₹2 ಸಾವಿರ, ಮಹಮದ್ ಹಫೀಜ್ ₹2 ಸಾವಿರ ನೀಡಿದರು. ಈ ಹಣದಲ್ಲಿ ನಲಿ-ಕಲಿ ತರಗತಿಗಳಿಗೆ ಅನುಕೂಲ ಆಗುವಂತಹ ಪೀಠೋಪಕರಗಳ ಖರೀದಿಸುವಂತೆ ತಿಳಿಸಿದರು.
ಈ ಸಂದರ್ಭ ಅಧ್ಯಕ್ಷ ಮಹಬೂಬ್ ಖಾನ್ ಮಾತನಾಡಿ, ಗ್ರಾಮದ ಸರ್ಕಾರಿ ಉರ್ದು ಶಾಲೆ ಒಂದು ಮಾದರಿಯಾದ ಶಾಲೆಯಾಗಿದೆ. ಶಾಲೆ ಮಕ್ಕಳ ಶೈಕ್ಷಣಿಕ ಬೆಳವಣಿಗೆಗಾಗಿ ನಾವೆಲ್ಲರೂ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.ಮಾಜಿ ಅಧ್ಯಕ್ಷ ಶಂಷೀರ್ ಜಾನ್ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿರುವ ಈ ಉರ್ದು ಶಾಲೆಗೆ ಚನ್ನಗಿರಿ ಪಟ್ಟಣದಿಂದ 80 ವಿದ್ಯಾರ್ಥಿಗಳು ದಾಖಲಾಗಿರುವುದು ಗ್ರಾಮಕ್ಕೆ ಸಂದ ಗೌರವವಾಗಿದೆ ಎಂದು ತಿಳಿಸಿದರು.
ಮುಖ್ಯ ಶಿಕ್ಷಕ ಸೈಯ್ಯದ್ ಇಲ್ಯಾಸ್ ಅಹಮದ್ ಮಾತನಾಡಿ, ಈ ಶಾಲೆಗೆ ದಾಖಲಾಗಿರುವ ಮಕ್ಕಳನ್ನು ಪ್ರತಿನಿತ್ಯ ಶಾಲೆಗೆ ಕಳಿಸಿಕೊಡಬೇಕಾದ ಜವಾಬ್ದಾರಿ ಪೋಷಕರದಾಗಿದೆ. ಶಾಲೆಯಿಂದ ಮಕ್ಕಳು ಮನೆಗೆ ಬಂದ ತಕ್ಷಣ ಹೋಂ ವರ್ಕ್ ಮಾಡಿಕೊಳ್ಳಲು, ಓದಿಕೊಳ್ಳಲು ಹೇಳಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಶಾಲೆಯ ಎಲ್ಲ ಶಿಕ್ಷಕರು, ಮಕ್ಕಳು ಹಾಜರಿದ್ದರು.
- - --4ಕೆಸಿಎನ್‌ಜಿ1.ಜೆಪಿಜಿ: