ಅತಂತ್ರ ಸ್ಥಿತಿಯಲ್ಲಿ ೪೧೭ ಮಕ್ಕಳ ಭವಿಷ್ಯ

| Published : Apr 22 2025, 01:46 AM IST

ಸಾರಾಂಶ

ಕಣ್ವ ಸೌಹಾರ್ದ ಕೋ-ಆಪರೇಟಿವ್ ಕ್ರೆಡಿಟ್ ಲಿಮಿಟೆಡ್ ಹಾಗೂ ಕಣ್ವ ಸಮೂಹ ಸಂಸ್ಥೆಯ ಆರ್ಥಿಕ ಅವ್ಯವಹಾರದಿಂದ ಸರ್ಕಾರ ಜಿ.ನಾಗೇನಹಳ್ಳಿಯ ಕಣ್ವ ಇಂಟರ್ ನ್ಯಾಷನಲ್ ಶಾಲೆಯ ಜಮೀನು, ಕಟ್ಟಡ ಮತ್ತು ನಿವೇಶನ ಮುಟ್ಟುಗೋಲು ಹಾಕಿಕೊಂಡಿದೆ. ಕಣ್ವ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ೪೧೭ ಮಂದಿ ವಿದ್ಯಾರ್ಥಿಗಳ ಶಿಕ್ಷಣ ಅತಂತ್ರ ಸ್ಥಿತಿಯಲ್ಲಿದ್ದು ಮಕ್ಕಳ ಭವಿಷ್ಯದ ಬಗ್ಗೆ ಆತಂಕ ಎದುರಾಗಿದೆ.

ಎಚ್.ಎನ್.ನಾಗರಾಜು, ಕನ್ನಡಪ್ರಭ ವಾರ್ತೆ ಕೊರಟಗೆರೆ

ಕಣ್ವ ಸೌಹಾರ್ದ ಕೋ-ಆಪರೇಟಿವ್ ಕ್ರೆಡಿಟ್ ಲಿಮಿಟೆಡ್ ಹಾಗೂ ಕಣ್ವ ಸಮೂಹ ಸಂಸ್ಥೆಯ ಆರ್ಥಿಕ ಅವ್ಯವಹಾರದಿಂದ ಸರ್ಕಾರ ಜಿ.ನಾಗೇನಹಳ್ಳಿಯ ಕಣ್ವ ಇಂಟರ್ ನ್ಯಾಷನಲ್ ಶಾಲೆಯ ಜಮೀನು, ಕಟ್ಟಡ ಮತ್ತು ನಿವೇಶನ ಮುಟ್ಟುಗೋಲು ಹಾಕಿಕೊಂಡಿದೆ. ಕಣ್ವ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ೪೧೭ ಮಂದಿ ವಿದ್ಯಾರ್ಥಿಗಳ ಶಿಕ್ಷಣ ಅತಂತ್ರ ಸ್ಥಿತಿಯಲ್ಲಿದ್ದು ಮಕ್ಕಳ ಭವಿಷ್ಯದ ಬಗ್ಗೆ ಆತಂಕ ಎದುರಾಗಿದೆ.

ಕೊರಟಗೆರೆ ತಾಲೂಕು ಕಸಬಾ ಹೋಬಳಿ ಹಂಚಿಹಳ್ಳಿ ಗ್ರಾಪಂ ವ್ಯಾಪ್ತಿಯ ದೊಡ್ಡೇನಹಳ್ಳಿ ಸರ್ವೆ ನಂ.೫/೪ರಲ್ಲಿ ೨ಎಕರೆ ೩೭ಕುಂಟೆ ಜಮೀನು ಮತ್ತು ೦.೨೬ಕುಂಟೆ ಕಣ್ವ ಇಂಟರ್ ನ್ಯಾಷನಲ್ ಶಾಲೆ ಮತ್ತು ಶಾಲಾ ಕಟ್ಟಡವನ್ನು ಕೆಪಿಐಡಿಎಫ್‌ಇ ಕಾಯ್ದೆಯಡಿ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ. ಬಿಇಒರನ್ನು ಆಡಳಿತಾಧಿಕಾರಿ ಆಗಿ ನೇಮಿಸಲು ಮಾಡಿದ ಮನವಿಗೂ ಈಗ ಅವಕಾಶ ಇಲ್ಲದಾಗಿದೆ.ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಯಿಂದ ಪ್ರಸಕ್ತ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ಶಾಲೆ ಮುಂದುವರಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಆದರೆ ಶಾಲೆಯ ಐಸಿಎಸ್‌ಸಿ ಮಾನ್ಯತೆ ೨೦೨೫ರ ಮಾರ್ಚ್ ೩೧ಕ್ಕೆ ಮುಕ್ತಾಯವಾಗಿದೆ. ಇದುವರೆಗೆ ಶಾಲೆಯು ಕರ್ನಾಟಕ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ಶಾಲೆಯ ಮಾನ್ಯತೆ ಸಹ ನವೀಕರಣ ಮಾಡದಿರುವುದು ಇನ್ನೂ ಅನುಮಾನಕ್ಕೆ ಕಾರಣವಾಗಿದೆ.ಶಿಕ್ಷಣ ಇಲಾಖೆ ಆಯುಕ್ತರ ಆದೇಶ

ಕಣ್ವ ಇಂಟರ್‌ನ್ಯಾಷನಲ್ ಶಾಲೆಯು ಐಸಿಎಸ್‌ಸಿ ಪಠಕ್ರಮ ಆಧಾರಿತ ಶಾಲೆ. ಕಣ್ವಶಾಲೆಯ ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮತ್ತು ಆಡಳಿತಾಧಿಕಾರಿ ನೇಮಿಸಲು ಸಾಧ್ಯವಿಲ್ಲ. ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಕಣ್ವಶಾಲೆಯ ಮಕ್ಕಳ ಪೋಷಕರ ಸಭೆ ಕರೆದು ವಾಸ್ತವಂಶ ಗಮನಕ್ಕೆ ತರಬೇಕು. ಶಿಕ್ಷಣ ಇಲಾಖೆಯ ನಿಯಮಾನುಸಾರ ಸದರಿ ಶಾಲೆ ಮುಂದುವರಿಸಲು ಅವಕಾಶವಿಲ್ಲ. ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ದಾಖಲಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಧುಗಿರಿ ಡಿಡಿಪಿಐಗೆ ೨೦೨೫ರ ಮಾ.೧೭ರಂದೇ ಶಿಕ್ಷಣ ಇಲಾಖೆಯ ನಿರ್ದೇಶಕರು ಆದೇಶ ಮಾಡಿದ್ದಾರೆ. ಮಕ್ಕಳಿಗೆ ಉಚಿತ ಶಿಕ್ಷಣದ ಆಮಿಷಕಣ್ವ ಇಂಟರ್ ನ್ಯಾಷನಲ್ ಶಾಲೆಯ ಆಡಳಿತ ಮಂಡಳಿಯು ಮಕ್ಕಳ ಪೋಷಕರಿಗೆ ಸಮಸ್ಯೆಯ ವಿಷಯ ತಿಳಿಸದೆ ೨೦೨೫-೨೬ರ ಶೈಕ್ಷಣಿಕ ವರ್ಷಕ್ಕೆ ಶುಲ್ಕವನ್ನು ಕಟ್ಟಿಸಿಕೊಳ್ಳದೆ ಉಚಿತ ಬೋಧನೆಯ ವದಂತಿ ಹರಿದಾಡಿವೆ. ಶಾಲೆಯಿಂದ ಮಕ್ಕಳಿಗೆ ಬರುವ ವಾಹನಗಳು ಶುಲ್ಕ ಈ ವರ್ಷ ಉಚಿತ ಎಂಬ ಮಾತು ಕೇಳಿಬಂದಿವೆ. ಇದು ಪೋಷಕರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದ್ದು ಶಿಕ್ಷಣ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕಿದೆ.೪೧೭ಜನ ಮಕ್ಕಳ ಭವಿಷ್ಯವೇ ಅತಂತ್ರ.. ೨೦೨೪-೨೫ನೇ ಸಾಲಿನ ಅನ್ವಯ ನರ್ಸರಿಯಿಂದ ೧೦ನೇ ತರಗತಿ ವರೆಗೆ ೪೧೭ಜನ ಮಕ್ಕಳು ಐಸಿಎಸ್‌ಸಿ ಪಠ್ಯಕ್ರಮ ಅನುಸಾರ ವ್ಯಾಸಂಗ ಮಾಡುತ್ತಿದ್ದಾರೆ. ಮುಖ್ಯ ಶಿಕ್ಷಕರ ಹುದ್ದೆ ಈಗ ಖಾಲಿಯಿದ್ದು ೨೧ಜನ ಶಿಕ್ಷಕರಿದ್ದಾರೆ. ಶಾಲೆಯ ಜಮೀನು ಮತ್ತು ಕಟ್ಟಡವೇ ಸರ್ಕಾರಕ್ಕೆ ಮುಟ್ಟುಗೋಲು ಆದ ಮೇಲೆ ೨೦೨೫-೨೬ರ ಶೈಕ್ಷಣಿಕ ವರ್ಷದಲ್ಲಿ ಮತ್ತೇ ಜಮೀನು ಸಮಸ್ಯೆ ಎದುರಾದರೆ ಮಕ್ಕಳ ಶಿಕ್ಷಣದ ಪಾಡೇನು ಎಂಬುದೇ ಯಕ್ಷಪ್ರಶ್ನೆ.ಕೋಟ್ಜಿ.ನಾಗೇನಹಳ್ಳಿಯ ಕಣ್ವ ಇಂಟರ್ ನ್ಯಾಷನಲ್ ಸ್ಕೂಲ್ ಮುಚ್ಚಿಸಲು ಶಿಕ್ಷಣ ಇಲಾಖೆ ಆಯುಕ್ತರಿಂದ ನಿರ್ದೇಶನವಿದೆ. ಕಣ್ವಶಾಲೆಯಲ್ಲಿ ಏ.೩ರಂದು ಪೋಷಕರ ಸಭೆ ಕರೆಯಲು ಬಿಇಓ ಶಾಲೆಯ ಕಾರ್ಯದರ್ಶಿಗೆ ಮಾ.೨೮ರಂದು ನೊಟೀಸ್ ನೀಡಿದ್ದರು. ಸಭೆ ಕರೆಯಲು ಮಾನ್ಯ ಉಚ್ಚ ನ್ಯಾಯಾಲಯ ತಡೆ ನೀಡಿದೆ. ಗಿರಿಜಾ.ಬಿ.ಎಚ್. ಡಿಡಿಪಿಐ. ಮಧುಗಿರಿಸರ್ಕಾರದ ಜೊತೆ ಕಣ್ವಶಾಲೆ ೩೦ವರ್ಷ ಗುತ್ತಿಗೆ ಒಪ್ಪಂದ ಮಾಡಿಕೊಂಡಿದೆ. ಕಣ್ವಶಾಲೆ ಇರುವ ಜಮೀನು ಸರ್ಕಾರದ ಆಸ್ತಿ. ಈಗ ಕಣ್ವಶಾಲೆ ಮಾತ್ರ ನಮ್ಮದು ಅಷ್ಟೆ. ಶಾಲೆಯ ಜಮೀನು ಮತ್ತು ಕಟ್ಟಡದ ಸಮಸ್ಯೆ ಇರೋದು ಸತ್ಯ. ಸರ್ಕಾರದ ಜೊತೆ ಒಪ್ಪಂದ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಕಾಲಾವಕಾಶ ನೀಡಿದೆ. ರಜತ್.ಪಿ.ಗೌಡ. ಕಾರ್ಯದರ್ಶಿ. ಕಣ್ವ ಎಜುಕೇಷನ್ ಟ್ರಸ್ಟ್. ಬೆಂಗಳೂರು