ಗದಗ ವಿಧಾನಸಭಾ ಶಾಸಕರೇ ಮತದಾರರಿಗೆ ಉತ್ತರ ಕೊಡಿ: ರಾಜು ಕುರಡಗಿ

| Published : Feb 11 2024, 01:47 AM IST

ಗದಗ ವಿಧಾನಸಭಾ ಶಾಸಕರೇ ಮತದಾರರಿಗೆ ಉತ್ತರ ಕೊಡಿ: ರಾಜು ಕುರಡಗಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಕಾನೂನು ಹಾಗೂ ಪ್ರವಾಸೋದ್ಯಮ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರಿಗೆ ಬಿಜೆಪಿ ಜಿಲ್ಲಾ ವತಿಯಿಂದ ಗದಗ ವಿಧಾನ ಸಭಾ ಕ್ಷೇತ್ರದ ಶಾಸಕರೆ, ನಿಮ್ಮ ಅಧಿಕೃತ ಕಚೇರಿ ವಿಳಾಸ ಕೊಡಿ ಎಂದು ಪತ್ರ ನೀಡಲಾಯಿತು.

ಗದಗ: ರಾಜ್ಯದ ಕಾನೂನು ಹಾಗೂ ಪ್ರವಾಸೋದ್ಯಮ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರಿಗೆ ಬಿಜೆಪಿ ಜಿಲ್ಲಾ ವತಿಯಿಂದ ಗದಗ ವಿಧಾನ ಸಭಾ ಕ್ಷೇತ್ರದ ಶಾಸಕರೆ, ನಿಮ್ಮ ಅಧಿಕೃತ ಕಚೇರಿ ವಿಳಾಸ ಕೊಡಿ ಎಂದು ಪತ್ರ ನೀಡಲಾಯಿತು.

ನಿಮ್ಮ ಸರ್ಕಾರ ರಚನೆಯಾಗಿ ಹಲವು ತಿಂಗಳು ಕಳೆದರೂ ಸಹಿತ ರಾಜ್ಯದ ಜನತೆ ಬರಗಾಲದ ಛಾಯೆಯಲ್ಲಿ ಬೆಂದು ಹೋಗುತ್ತಿದ್ದರೂ ನೀವು ಏನು ಮಾಡುತ್ತಿದ್ದೀರಿ? ಇಲ್ಲಿಯವರೆಗೆ ಬರ ಪರಿಹಾರ ಘೋಷಣೆಯಾಗಿಲ್ಲ, ರೈತರಿಗೆ ನೀಡುತ್ತಿರುವಂತ ಹಾಲಿನ ಪ್ರೋತ್ಸಾಹ ಧನವನ್ನು ಕೂಡ ಕಡಿತಗೊಳಿಸಿದ್ದೀರಿ. ದನ-ಕರುಗಳಿಗೆ ಮತ್ತು ಜಿಲ್ಲೆಯ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಹಾಗೆ ಮುಂದುವರೆದಿದ್ದು, ಗದಗ ನಗರದಲ್ಲಿ ೩೦ ವರ್ಷಗಳಿಂದ ಕುಡಿಯುವ ನೀರಿನ ಅಭಾವವಿದ್ದರೂ ಸಹಿತ ಇಲ್ಲಿಯವರೆಗೆ ಜನತೆಗೆ ಕುಡಿಯುವ ನೀರಿನ ಸುಳ್ಳು ಭರವಸೆ ನೀಡುತ್ತಾ ಬಂದಿದ್ದೀರಿ ಹಾಗೂ ೨೫-೩೦ ವರ್ಷಗಳಿಂದ ಗದಗ ನಗರದ ಬಡ ಜನರಿಗೆ ಮನೆಗಳ ಕುರಿತು ಸಮಸ್ಯೆ ವ್ಯವಸ್ಥಿತ ರೀತಿಯಾಗಿ ಕೇವಲ ನಿಮ್ಮ ಹಿಂಬಾಲಕರಿಗೆ ಮಾತ್ರ ಒದಗಿಸಿದ್ದೀರಿ. ಮನೆಯಿಲ್ಲದ ನಿಜವಾದ ವಸತಿ ರಹಿತ ಬಡವರು ಹಾಗೆ ಉಳಿದಿರುವರು.

ರಾಜ್ಯದಲ್ಲಿ ನೀರಾವರಿ ಮತ್ತು ಲೋಕೋಪಯೋಗಿ ಇಲಾಖೆಯಲ್ಲಿ ಯಾವುದೆ ಕಾಮಗಾರಿಗಳು ಆಗುತ್ತಿಲ್ಲಾ.

ಈಗ ತಾವು ಉದ್ಘಾಟನೆ ಮಾಡುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಹಿಂದಿನ ಸರ್ಕಾರವಿದ್ದಾಗ ಉದ್ಘಾಟನೆ ಹಂತಕ್ಕೆ ಬಂದ ಕಾಮಗಾರಿಗಳೆ ಇರುತ್ತವೆ. ತಾವು ಅಧಿಕಾರಕ್ಕೆ ಬಂದು ಹಲವಾರು ತಿಂಗಳು ಕಳೆದರು ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ಯಾವುದೆ ಅಭಿವೃದ್ಧಿ ಕಾರ್ಯಗಳು ಆಗಿರುವುದಿಲ್ಲ. ಹಲವಾರು ಭರವಸೆಗಳು, ನಿರೀಕ್ಷೆಗಳನ್ನು ಇಟ್ಟುಕೊಂಡು ತಮ್ಮನ್ನು ವಿಧಾನಸಭೆಗೆ ಕಳುಹಿಸಿಕೊಟ್ಟಿದ್ದಾರೆ. ಆದರೆ ಅಧಿಕಾರಕ್ಕೆ ಬಂದ ಮೇಲೆ ಗದಗ ಜಿಲ್ಲೆ ಕೇಂದ್ರ ಸ್ಥಳವಾದ ಗದಗ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ.

ಇಷ್ಟೇಲ್ಲಾ ತಮ್ಮ ತಮ್ಮ ಸರ್ಕಾರದ ತಪ್ಪುಗಳನ್ನು ಇಟ್ಟುಕೊಂಡು ಕೇಂದ್ರದ ಮೇಲೆ ಸುಳ್ಳು ಆರೋಪ ಮಾಡುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿಗಳ ಬಗ್ಗೆ ಅರಿವು ಮೂಡಿಸಿಲು ಪತ್ರ ನೀಡಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ, ವಿಪ ಸದಸ್ಯ ಎಸ್.ವಿ. ಸಂಕನೂರ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಕ್ಕಿರೇಶ ರಟ್ಟಿಹಳ್ಳಿ, ಹಿರಿಯರಾದ ಎಂ.ಎಸ್. ಕರೀಗೌಡ್ರ, ಎಂ.ಎಂ. ಹಿರೇಮಠ, ಜಗನ್ನಾಥಸಾ ಭಾಂಡಗೆ, ಅಶೋಕ ಸಂಕಣ್ಣವರ, ಅನಿಲ ಅಬ್ಬಿಗೇರಿ, ವಿನಾಯಕ ಮಾನ್ವಿ, ಸುಧೀರ ಕಾಟಿಗರ, ಸುರೇಶ ಮರಳಪ್ಪನವರ, ಅಮರನಾಥ ಬೆಟಗೇರಿ, ಸುಜೇಂದ್ರ ಗಲಗಲಿ ಹಾಗೂ ಪಕ್ಷದ ಮುಖಂಡರು ಇದ್ದರು.