ಏಡ್ಸ್, ಎಚ್ಐವಿ ನಿಯಂತ್ರಣದಲ್ಲಿ ಗದಗ ಜಿಲ್ಲೆ ಮಹತ್ವದ ಸಾಧನೆ

| Published : Dec 01 2024, 01:34 AM IST

ಏಡ್ಸ್, ಎಚ್ಐವಿ ನಿಯಂತ್ರಣದಲ್ಲಿ ಗದಗ ಜಿಲ್ಲೆ ಮಹತ್ವದ ಸಾಧನೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸಕ್ತ ಸಾಲಿನಲ್ಲಿ ಎಚ್ಐವಿ ಸೋಕಿಂತ ಗರ್ಭಿಣಿಯಿಂದ ಜನಿಸಿದ ಎಲ್ಲ ಮಕ್ಕಳು ಎಚ್ಐವಿ ಮುಕ್ತವಾಗಿದ್ದು ಜಿಲ್ಲೆಯ ಹಿರಿಮೆಗೆ ಮತ್ತೊಂದು ಸಾಕ್ಷಿ

ಶಿವಕುಮಾರ ಕುಷ್ಟಗಿ ಗದಗ

ಏಡ್ಸ್, ಎಚ್ಐವಿ ನಿಯಂತ್ರಣದಲ್ಲಿ ಗದಗ ಜಿಲ್ಲೆ ಮಹತ್ವದ ಸಾಧನೆ ಮಾಡಿದ್ದು, ಕಳೆದ 5 ವರ್ಷಗಳಲ್ಲಿ ಪಾಜಿಟಿವಿಟಿ ರೇಟ್ ಸಂಪೂರ್ಣ ಕುಸಿತವಾಗಿದೆ, ಜಿಲ್ಲೆಯ ಜನರಲ್ಲಿ ಜಾಗೃತಿ ಮೂಡಿಸಿ ಭಯಾನಕ ಕಾಯಿಲೆಯಿಂದ ದೂರಗೊಳಿಸುವಲ್ಲಿ ಆರೋಗ್ಯ ಇಲಾಖೆಯೊಂದಿಗೆ ವಿವಿಧ ಇಲಾಖೆಗಳು ನಿರಂತರವಾಗಿ ನಡೆಸುತ್ತಿರುವ ಪ್ರಯತ್ನ ಸಾಕಾರವಾಗಿದೆ.

2019-20 ನೇ ಸಾಲಿನಲ್ಲಿ ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ ಏಡ್ಸ್, ಎಚ್ಐವಿ ಪಾಜಿಟಿವಿಟಿ ದರ 0.51ರಷ್ಟು ಇತ್ತು, ಇದನ್ನು ಸೊನ್ನೆಗೆ ತರುವ ಪ್ರಯತ್ನದೊಂದಿಗೆ ಅಧಿಕಾರಿಗಳು ಕಾರ್ಯೋನ್ಮುಖವಾಗಿದ್ದು, ಕಳೆದ 5 ವರ್ಷಗಳಲ್ಲಿ ಪಾಜಿಟಿವಿಟಿ ದರ 0.20 ಕ್ಕೆ ಕುಸಿತವಾಗಿದ್ದು, ಇದು ಸಾರ್ವಜನಿಕರಲ್ಲಿ ನೆಮ್ಮದಿ ಮೂಡಿಸಿದೆ.

ಸಾಮಾನ್ಯರಲ್ಲಿಯೂ ಕುಸಿತ: 2019-20 ನೇ ಸಾಲಿನಲ್ಲಿ ಒಟ್ಟು 46535 ಜನರ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಅವರಲ್ಲಿ 237 ಸೋಂಕು ಖಚಿತವಾಗಿದ್ದು, ಪಾಜಿಟಿವಿಟಿ ದರ 0.51ರಷ್ಟಿತ್ತು. 2020-21 ನೇ ಸಾಲಿನಲ್ಲಿ ಕೋವಿಡ್ ನಂತರ ಅಕ್ಕಪಕ್ಕದ ಜಿಲ್ಲೆ, ರಾಜ್ಯಗಳಿಂದ ಸಾಕಷ್ಟು ಜನರು ವಲಸೆ ಬಂದಿದ್ದು, ಈ ಸಂದರ್ಭದಲ್ಲಿ ಕೇವಲ 23122 ಜನರನ್ನು ತಪಾಸಣೆಗೊಳಿಸಿದ ವೇಳೆ 136 ಸೋಂಕು ದೃಢಪಟ್ಟಿದ್ದು, ಶೇ.0.59 ರಷ್ಟು ಅತೀ ಹೆಚ್ಚು ದಾಖಲಾಗಿತ್ತು. 2021-22 ನೇ ಸಾಲಿನಲ್ಲಿ 36959 ಜನರನ್ನು ತಪಾಸಣೆ ನಡೆಸಿದಾಗ 173 ಜನರಲ್ಲಿ ತೊಂದರೆ ಕಂಡು ಬಂದಿದ್ದು, ಶೇ.0.47 ರಷ್ಟು ಪ್ರಮಾಣ ದಾಖಲಾಗಿತ್ತು. 2022-23 ರಲ್ಲಿ 53721 ಜನರನ್ನು ಪರೀಕ್ಷೆಗೊಳಿಸಿದಾಗ 172 ಜನರನ್ನು ಸೋಂಕು ಖಚಿತ ಪಟ್ಟಿದ್ದು ಶೇ.0.32 ಪ್ರಮಾಣದಲ್ಲಿತ್ತು. 2023-24 ರಲ್ಲಿ ಅತೀ ಹೆಚ್ಚು 63133 ಜನರನ್ನು ತಪಾಸಣೆಗೊಳಿಸಲಾಗಿದ್ದು 178 ಜನರಲ್ಲಿ ಸೋಂಕು ಕಂಡು ಬಂದಿದೆ, ಶೇ. 0.28 ರಷ್ಟಿತ್ತು. 2024-25 ಪ್ರಸಕ್ತ ಸಾಲಿನಲ್ಲಿ ಇದುವರೆಗೂ 45988 ಜನರನ್ನು ತಪಾಸಣೆಗೊಳಿಸಲಾಗಿದ್ದು ಕೇವಲ 92 ಜನರಲ್ಲಿ ಮಾತ್ರ ಸೋಂಕು ಖಚಿತವಾಗಿದ್ದು, ಶೇ 0.20 ರಷ್ಟು ಅತ್ಯಂತ ಕಡಿಮೆ ದಾಖಲಾಗಿದೆ.

ಎಚ್ಐವಿ ಮುಕ್ತ ಮಕ್ಕಳು ಜನನ: ಗರ್ಭಿಣಿ ತಾಯಂದಿರಲ್ಲಿ ಎಚ್ಐವಿ ಕಂಡು ಬಂದ ವೇಳೆ ಅವರಿಗೆ ಸೂಕ್ತ ಸಲಹೆ ಸೂಚನೆ ನೀಡಿ ಆಸ್ಪತ್ರೆಗಳಲ್ಲಿ ಸುರಕ್ಷಿತ ಹೆರಿಗೆ ಮಾಡಿಸಿಕೊಳ್ಳಲು ಪ್ರೋತ್ಸಾಹಿಸಿ, ಜೀವನಾವಧಿಯವರೆಗೆ ಎಆರ್ ಟಿ ಔಷಧಿಯನ್ನು ತಾಯಿಗೆ ಹಾಗೂ ಹೆರಿಗೆಯ ನಂತರ ಮಗುವಿಗೆ ನವಿರಾಪಿನ ದ್ರಾವಣ ನೀಡಿ, ಮಗುವಿನ ಜನನವಾದ 18 ತಿಂಗಳ ನಂತರ ಎಚ್ಐವಿ ಸ್ಥಿತಿಗತಿ ಪರಿಶೀಲಿಸಿ ಪರೀಕ್ಷೆಗೆ ಒಳಪಡಿಸಿ ಖಚಿತ ಪಡಿಸಿಕೊಳ್ಳಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಎಚ್ಐವಿ ಸೋಕಿಂತ ಗರ್ಭಿಣಿಯಿಂದ ಜನಿಸಿದ ಎಲ್ಲ ಮಕ್ಕಳು ಎಚ್ಐವಿ ಮುಕ್ತವಾಗಿದ್ದು ಜಿಲ್ಲೆಯ ಹಿರಿಮೆಗೆ ಮತ್ತೊಂದು ಸಾಕ್ಷಿಯಾಗಿದೆ.

ನಮ್ಮ ಇಲಾಖೆಯ ಸಿಬ್ಬಂದಿಗಳು ಇನ್ನುಳಿದ ಹಲವಾರು ಇಲಾಖೆಗಳೊಂದಿಗೆ ಸಮನ್ವಯದಿಂದ ಕಾರ್ಯ ನಡೆಸಿ ಜಿಲ್ಲೆಯಲ್ಲಿ ಏಡ್ಸ್, ಎಚ್ಐವಿ ತಡೆಗಟ್ಟುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ವಿಶೇಷ 18 ವಿವಿಧ ಜಾಗೃತಿ ಕಾರ್ಯಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ, ಕಾಯಿಲೆ ಬಗ್ಗೆ ಜನರಿಗೆ ಉಪಯುಕ್ತ ತಿಳಿವಳಿಕೆ ನೀಡಲಾಗಿದೆ. ಎಚ್ಐವಿ, ಏಡ್ಸ್ ಪ್ರಮಾಣ ಸೊನ್ನೆಗೆ ತರುವ ಸಂಕಲ್ಪದೊಂದಿಗೆ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಗದಗ ಡಿಎಚ್ಓ ಡಾ. ಎಸ್.ಎಸ್.ನೀಲಗುಂದ ತಿಳಿಸಿದ್ದಾರೆ. ಏಡ್ಸ್ ನಿಂದ ಮೃತ ಪಟ್ಟವರ ವಿವರ

ವರ್ಷ ಗಂಡು ಹೆಣ್ಣು ಒಟ್ಟು

2019-2016 11 27

2020-2111 718

2021-2215 1126

2022-2313 8 21

2023-2410 9 19

ಜಿಲ್ಲೆಯಲ್ಲಿ ಏಡ್ಸ್, ಎಚ್ಐವಿ ಚಿಕಿತ್ಸೆ ಪಡೆಯುತ್ತಿರುವವರು.

ಮೇ 2009 ರಿಂದ ಅಕ್ಟೋಬರ್ -2024 ರವರೆಗೆ

ವಯಸ್ಕರು ಮಕ್ಕಳು

ಗಂಡು ಹೆಣ್ಣು ಒಟ್ಟು ಗಂಡು ಹೆಣ್ಣು ಒಟ್ಟು ಜಿಲ್ಲಾ ಒಟ್ಟು

3797 4217 8014268 216 484 8498