ಮಾವುತರು, ಕಾವಾಡಿಗಳಿಗೆ ಲಿಡ್ಕರ್ ನಿಂದ ಪಾದರಕ್ಷೆಗಳ ವಿತರಣೆ

| Published : Sep 29 2024, 01:32 AM IST

ಸಾರಾಂಶ

ಮಾವುತರು, ಕಾವಾಡಿಗಳಿಗೆ ಲಿಡ್ಕರ್ ನಿಂದ ಪಾದರಕ್ಷೆಗಳ ವಿತರಣೆ

ಕನ್ನಡಪ್ರಭ ವಾರ್ತೆ ಮೈಸೂರು

ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸಿರುವ ಗಜಪಡೆಯ ಮಾವುತರು ಹಾಗೂ ಕಾವಾಡಿಗರ ಕುಟುಂಬಕ್ಕೆ ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ (ಲಿಡ್ಕರ್) ವತಿಯಿಂದ ಸಿದ್ಧಪಡಿಸಿದ ಪಾದರಕ್ಷೆಗಳನ್ನು ಶನಿವಾರ ವಿತರಿಸಲಾಯಿತು.ದಸರಾ ಆನೆಗಳ ಮಾವುತರು, ಕಾವಾಡಿಗರು ಮತ್ತು ಅವರ ಕುಟುಂಬದವರಿಗೆ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ನಟ ಹಾಗೂ ಲಿಡ್ಕರ್ ರಾಯಭಾರಿ ಡಾಲಿ ಧನಂಜಯ ಅವರು ಪಾದರಕ್ಷೆಗಳನ್ನು ವಿತರಿಸಿದರು. ಈ ವೇಳೆ ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಲಿಡ್ಕರ್ ವ್ಯವಸ್ಥಾಪಕ ನಿರ್ದೇಶಕಿ ವಸುಂದರಾ, ಡಿಸಿಎಫ್ ಡಾ.ಐ.ಬಿ. ಪ್ರಭುಗೌಡ, ಆನೆ ವೈದ್ಯ ಡಾ. ಮುಜೀಬ್ ಮೊದಲಾದವರು ಇದ್ದರು.