Gambling in various locations: 17 people taken into custody

- ಪ್ರತ್ಯೇಕ ದಾಳಿ: 5 ಪ್ರಕರಣ ದಾಖಲು, ₹17990 ನಗದು ಜಪ್ತಿ

- - -

ದಾವಣಗೆರೆ: ಜಿಲ್ಲೆಯ ವಿವಿಧೆಡೆ ಇಸ್ಪೀಟ್ ಮತ್ತು ಮಟ್ಕಾ ಜೂಜಾಟ ಸ್ಥಳಗಳ ಮೇಲೆ ಪೊಲೀಸರು ಪ್ರತ್ಯೇಕ ದಾಳಿ ನಡೆಸಿ, 5 ಪ್ರಕರಣ ದಾಖಲಿಸಿ, 17 ಜನರ ವಿರುದ್ಧ ಕ್ರಮ ಕೈಗೊಂಡು, ₹17,990 ನಗದು ಜಪ್ತಿ ಮಾಡಿದ್ದಾರೆ.

ನ್ಯಾಮತಿ ತಾ. ಚಿನ್ನಿಕಟ್ಟೆ ಗ್ರಾಮದ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿ, ಓರ್ವನನ್ನು ಬಂಧಿಸಿ, ₹530 ನಗದು, ಮಟ್ಕಾ ಚೀಟಿ ಜಪ್ತಿ ಮಾಡಿದ್ದಾರೆ. ನ್ಯಾಮತಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ದಾವಣಗೆರೆ ಗಾಂಧಿ ನಗರ ಠಾಣೆ ವ್ಯಾಪ್ತಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಡುತ್ತಿದ್ದ ಓರ್ವನನ್ನು ಬಂಧಿಸಿ, ₹5500 ನಗದು, ಮಟ್ಕಾ ಚೀಟಿ ಜಪ್ತಿ ಮಾಡಲಾಗಿದೆ.

ಚನ್ನಗಿರಿ ತಾ. ಕೊರಟಿಕೆರೆ ಕೆರೆ ಪಕ್ಕದಲ್ಲಿ. ಇಸ್ಪೀಟ್ ಜೂಜಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿ, ನಾಲ್ವರನ್ನು ಬಂಧಿಸಿ, ₹3700 ಜಪ್ತಿ ಮಾಡಿದ್ದಾರೆ. ಹರಿಹರ ತಾ. ಬೆಳ್ಳೂಡಿ ಗ್ರಾಮದಲ್ಲಿ ಇಸ್ಪೀಟ್ ಜೂಜಾಡುತ್ತಿದ್ದವರ ಮೇಲೆ ಹರಿಹರ ವೃತ್ತ ಪೊಲೀಸ್ ನಿರೀಕ್ಷಕರು ಹಾಗೂ ಗ್ರಾಮಾಂತರ ಪೊಲೀಸ್ ಠಾಣೆ ಅಧಿಕಾರಿ, ಸಿಬ್ಬಂದಿ ದಾಳಿ ಮಾಡಿ, ಜೂಜಾಟಕ್ಕೆ ಸಂಬಂಧಿಸಿದಂತೆ 9 ಜನರನ್ನು ವಶಕ್ಕೆ ಪಡೆದು, ಒಟ್ಟು ₹5160 ನಗದು ಜಪ್ತಿ ಮಾಡಿದ್ದಾರೆ.

ದಾವಣಗರೆ ತಾ. ಜರೇಕಟ್ಟೆಯಲ್ಲಿ ಇಸ್ಪೀಟ್ ಜೂಜಾಡುತ್ತಿದ್ದವರ ಮೇಲೆ ಜಿಲ್ಲಾ ಎ.ಎನ್.ಟಿ.ಎಫ್ ತಂಡದ ಪೊಲೀಸ್ ಅಧಿಕಾರಿ-ಸಿಬ್ಬಂದಿ ದಾಳಿ ಮಾಡಿ, ಇಬ್ಬರನ್ನು ವಶಕ್ಕೆ ಪಡೆದು, ಒಟ್ಟು ₹3100 ಜಪ್ತಿ ಮಾಡಿದ್ದಾರೆ. ಹದಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.

- - -