ಸಾರಾಂಶ
ಜಿಲ್ಲಾ ಪಂಚಾಯಿತಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಟೌನ್ ಕೋ-ಆಪರೇಟಿವ್ ಸೊಸೈಟಿಗಳಲ್ಲಿ ಗಣತಂತ್ರದಿನ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕಾಫಿ ನಾಡಿನಾದ್ಯಂತ ವಿವಿಧ ಶಾಲೆ, ಸಂಸ್ಥೆಗಳಲ್ಲಿ ಶುಕ್ರವಾರ ಗಣ ರಾಜ್ಯೋತ್ಸವ ಆಚರಿಸಲಾಯಿತು.ಜಿಲ್ಲಾ ಪಂಚಾಯಿತಿ ಮುಂಭಾಗದಲ್ಲಿ ದಸಂಸ (ಅಂಬೇಡ್ಕರ್ ವಾದ)ಯಿಂದ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಾಯಿತು. ಬಳಿಕ ಮಾತನಾಡಿದ ಗೃಹರಕ್ಷಕ ದಳದ ಮಾಜಿ ಸಮಾದೇಷ್ಠ ಆರ್.ಅನಿಲ್‌ಕುಮಾರ್, ರಾಷ್ಟ್ರವನ್ನು ಇನ್ನಷ್ಟು ಅಭ್ಯುದಯ ಪಥದಲ್ಲಿ ಮುನ್ನಡೆಸುವುದು, ಭಾರತೀಯರ ಕರ್ತವ್ಯ ಎಂದರು. ದಸಂಸ ಜಿಲ್ಲಾ ಸಂಚಾಲಕ ಮರ್ಲೆ ಅಣ್ಣಯ್ಯ ಮಾತನಾಡಿ, ಭಾರತ ಸ್ವತಂತ್ರಗೊಂಡು ತನ್ನದೇ ಅಸ್ತಿತ್ವ, ಗುರುತು ರೂಪಿಸಿ ಕೊಂಡಿದ್ದನ್ನು ಈ ಗಣರಾಜ್ಯೋತ್ಸವ ಸಾರುತ್ತದೆ. ಅಷ್ಟೇ ಅಲ್ಲ, ಪ್ರಜಾಸತ್ತಾತ್ಮಕವಾಗಿ ತಮ್ಮ ಸರ್ಕಾರವನ್ನು ಆಯ್ಕೆ ಮಾಡಿ ಕೊಳ್ಳುವ ಶಕ್ತಿಯನ್ನು ನಾಗರಿಕರಿಗೆ ನೀಡಿದ ದಿನವನ್ನು ಗಣರಾಜ್ಯೋತ್ಸವೆಂದು ಸ್ಮರಿಸುತ್ತೇವೆ ಎಂದು ಹೇಳಿದರು.ದೇಶದ ಏಕತೆ ಸಾರುವ ನಿಟ್ಟಿನಲ್ಲಿ ಹಾಗೂ ಸರ್ವರಿಗೂ ಸಮಪಾಲು, ಸಮಬಾಳು ನೀಡುವ ದೃಷ್ಟಿಯಿಂದ ಅಂಬೇಡ್ಕರ್ ಸಂವಿಧಾನ ರಚಿಸಿ ದೇಶಕ್ಕೆ ಕೊಡುಗೆ ನೀಡಿದ ದಿನವಾಗಿದೆ ಎಂದರು.ಈ ಸಂದರ್ಭದಲ್ಲಿ ದಸಂಸ ಮುಖಂಡರಾದ ಸಂತೋಷ್ ಲಕ್ಯಾ, ಸುರೇಂದ್ರ, ಮಂಜುನಾಥ್ ನಂಬಿಯಾರ್, ಹೊನ್ನೇಶ್, ಹುಣಸೇಮಕ್ಕಿ ಲಕ್ಷ್ಮಣ್, ಹಿರೇಮಗಳೂರು ರಾಮಚಂದ್ರ, ಸುಭಾಷ್, ಮಹೇಶ್, ಪಳನಿ ಹಾಜರಿದ್ದರು. ಜಿಲ್ಲಾ ಕನ್ನಡ ಭವನ: ಸಂವಿಧಾನದ ಜಾಗೃತಿ ಇಂದಿನ ಪೀಳಿಗೆಗೆ ಅತ್ಯಗತ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಗೌರವ ಕಾರ್ಯದರ್ಶಿ ಜಿ.ಬಿ.ಪವನ್ ಹೇಳಿದರು.ಜಿಲ್ಲಾ ಕನ್ನಡ ಭವನದ ಗಣರಾಜ್ಯೋತ್ಸವದಲ್ಲಿ ದ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭಾರತದ ಸಂವಿಧಾನ ಸರ್ವ ಶ್ರೇಷ್ಠ. ಇದನ್ನು ದೇಶದ ಎಲ್ಲಾ ಧರ್ಮೀಯರು ತಮ್ಮ ಮೊದಲ ಪವಿತ್ರ ಗ್ರಂಥವೆಂದು ಭಾವಿಸಿ ನಡೆದರೆ ಉತ್ತಮ ಮತ್ತು ಸಾಮರಸ್ಯದ ಭಾರತ ನಮ್ಮದಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು. ಕಸಾಪ ತಾಲೂಕು ಅಧ್ಯಕ್ಷ ಬಿ.ಎಚ್. ಸೋಮಶೇಖರ್ ಮಾತನಾಡಿ ಸಂವಿಧಾನದ ಅನುಸರಣೆಯೇ ನಮ್ಮ ಜೀವನದ ಆದ್ಯತೆ ಆಗಬೇಕೆಂದರು. ಈ ಸಂದರ್ಭದಲ್ಲಿ ಕಸಾಪ ನಗರ ಅಧ್ಯಕ್ಷ ಸಚಿನ್ ಸಿಂಗ್, ಮೇಕನಗದ್ದೆ ಲಕ್ಷ್ಮಣ್‌ಗೌಡ, ಈಶ್ವರಪ್ಪ ಹೊಸಳ್ಳಿ, ನಂದಕುಮಾರ್, ಪ್ರತಿಬಾ ವೀರೇಶ್ ಕೌಲಗಿ, ರವಿ, ವೀಣಾ ಅರವಿಂದ್, ಜಯಂತಿ ಉಪಸ್ಥಿತರಿದ್ದರು.ಟೌನ್ ಕೋ-ಆಪರೇಟಿವ್ ಸೊಸೈಟಿ: ನಗರದ ಎಂ.ಜಿ.ರಸ್ತೆಯ ಟೌನ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಸೊಸೈಟಿ ಅಧ್ಯಕ್ಷ ಬಿ.ಎನ್.ರಾಜಣ್ಣಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾದ್ಯಕ್ಷ ಮಲ್ಲೇಶ್, ನಿರ್ದೇಶಕರುಗಳಾದ ಸಿ.ಆರ್.ಕೇಶವಮೂರ್ತಿ, ಅಂಬಿಕಾ, ಜಯಂತಿ, ಗಂಗಾಧರ್, ಸಿಬ್ಬಂದಿ ಮೋಹನ್‌ಕುಮಾರ್ ಉಪಸ್ಥಿತರಿದ್ದರು.ಇಂದಾವರ ಶಾಲೆ: ತಾಲೂಕಿನ ಇಂದಾವರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್ ಧ್ವಜಾರೋಹಣ ನೆರವೇರಿಸಿದರು. ಶಾಲೆ ಮುಖ್ಯೋಪಾಧ್ಯಾ ಯಿನಿ ವನಿತಾ, ಸಹ ಶಿಕ್ಷಕಿ ಉಮಾ, ಮಹಾನಾಯಕ ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಚಂದನ್, ಉಪಾಧ್ಯಕ್ಷ ಲಭಿತ್, ಖಜಾಂಚಿ ರೋಹನ್, ಕಾರ್ಯಕರ್ತರಾದ ಉಮೇಶ್, ಆದರ್ಶ್, ರಂಜನ್, ಸದಸ್ಯರಾದ ಮಂಜುನಾಥ್, ನವೀನ್, ದಿನೇಶ್, ಪ್ರದೀಪ್, ಪವನ್, ನಿಖಿಲ್ ಉಪಸ್ಥಿತರಿದ್ದರು.
ಅಲ್ ಅಮೀನ್ ಶಾಲೆ: ನಗರದ ತಮಿಳು ಕಾಲೋನಿಯ ಅಲ್ ಅಮೀನ್ ಪ್ರಾಥಮಿಕ ಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಸೈಯದ್ ಜಮೀಲ್ ಅಹ್ಮದ್ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಸೈಯದ್ ಸಲ್ಲಿಮುನ್ನಿಸ್ ಹಾಗೂ ಶಾಲಾ ಶಿಕ್ಷಕರು ಇದ್ದರು.---ಬಾಕ್ಸ್---
ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿಚಿಕ್ಕಮಗಳೂರು: ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ದೊರೆಯುವ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಪಾಲಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಲು ಮುಂದಾಗಬೇಕು ಎಂದು ಸರ್ವ ಧರ್ಮ ಸೇವಾ ಸಂಸ್ಥೆ ಅಧ್ಯಕ್ಷ ಕೆ.ಭರತ್ ಹೇಳಿದರು. ಹೆಡದಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಗಳಿಗೆ ಗಣರಾಜ್ಯೋತ್ಸವ ಅಂಗವಾಗಿ ಉಚಿತ ನೋಟ್‌ಪುಸ್ತಕ ವಿತರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರಿ ಶಾಲೆಗಳನ್ನು ಆಕರ್ಷಿತವನ್ನಾಗಿ ಮಾಡುವ ಹಾಗೂ ಭೌತಿಕವಾಗಿ ಶ್ರೀಮಂತಗೊಳಿಸಲು ಶಾಲೆ ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು ಕಾರ್ಯೋನ್ಮುಖರಾಗಬೇಕು. ಸುತ್ತಮುತ್ತಲ ಗ್ರಾಮಗಳಿಗೆ ತೆರಳಿ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಲು ಪಾಲಕರಿಗೆ ಪ್ರೇರೇಪಿಸಬೇಕು ಎಂದು ಸಲಹೆ ಮಾಡಿದರು.
ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಕೆ.ಪುಟ್ಟಸ್ವಾಮಿ ಮಾತನಾಡಿ, ಗಣರಾಜ್ಯೋತ್ಸವ ಸಂದರ್ಭದಲ್ಲಿ ಸರ್ವ ಧರ್ಮ ಸಂಸ್ಥೆಯಿಂದ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಿಸುವುದು ಖುಷಿ ತಂದಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಮಕ್ಕಳಿಗೆ ಸಹಾಯಹಸ್ತ ಚಾಚಲಿ ಎಂದರು.ಇದೇ ವೇಳೆ ಇತ್ತೀಚೆಗೆ ನಿವೃತ್ತರಾದ ಮುಖ್ಯೋಪಾಧ್ಯಾಯ ಚಂದ್ರಣ್ಣ ಅವರಿಗೆ ಸಂಸ್ಥೆಯಿಂದ ಬೀಳ್ಕೊಡಲಾಯಿತು. ಈ ಸಂದರ್ಭ ದಲ್ಲಿ ಗ್ರಾಮದ ಮುಖಂಡ ಮಂಜುನಾಥ್, ಮುಖ್ಯೋಪಾಧ್ಯಾಯ ಎಂ.ಸಿ.ಗಂಗಾಧರ್, ಸಹ ಶಿಕ್ಷಕಿ ವಿಮಲಾಕ್ಷಿ ಉಪಸ್ಥಿತರಿದ್ದರು.
26 ಕೆಸಿಕೆಎಂ 2ಚಿಕ್ಕಮಗಳೂರಿನ ಜಿಪಂ ಮುಂಭಾಗದಲ್ಲಿ ದಸಂಸ (ಅಂಬೇಡ್ಕರ್ ವಾದ) ವತಿಯಿಂದ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಪ್ರತಿಜ್ಞೆ ಸ್ವೀಕರಿಸಲಾಯಿತು.