ಮುದ್ದಂಡ ಕಪ್‌: ಗಾಂಡಗಂಡ, ಬೆರೇರಾ ತಂಡ ಮುಂದಿನ ಸುತ್ತಿಗೆ

| Published : Mar 30 2025, 03:01 AM IST

ಮುದ್ದಂಡ ಕಪ್‌: ಗಾಂಡಗಂಡ, ಬೆರೇರಾ ತಂಡ ಮುಂದಿನ ಸುತ್ತಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಮುದ್ದಂಡ ಕಪ್‌ ಮೊದಲ ದಿನದ ಪಂದ್ಯದಲ್ಲಿ ಹಲವು ತಂಡಗಳು ಮಂದಿನ ಸುತ್ತು ಪ್ರವೇಶಿಸಿವೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ 25ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಟೂರ್ನಿ ಮುದ್ದಂಡ ಕಪ್‌ನ ಮೊದಲ ದಿನದ ಪಂದ್ಯದಲ್ಲಿ ಗಾಂಡಗಂಡ, ಬೆರೇರಾ, ಕುಂಡ್ಯೋಳಂಡ, ಪುಲಿಯಂಡ ಸೇರಿದಂತೆ ಹಲವು ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.

ಬೊಳ್ಳಚೆಟ್ಟಿರ ಮತ್ತು ಗಾಂಡಗಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಗಾಂಡಗಂಡ 3-0 ಗೋಲು ಅಂತರದಲ್ಲಿ ಗೆಲುವು ಸಾಧಿಸಿತು.

ಬೊಳ್ಳಿಮಾಡ ಮತ್ತು ಬೆರೇರಾ ತಂಡಗಳ ನಡುವೆ ನಡೆದ ಪಂದ್ಯದಲ್ಲಿ 2-0 ಅಂತರದಲ್ಲಿ ಬೆರೇರಾ ತಂಡ ಗೆಲುವು ಸಾಧಿಸಿತು. ತಂಡದ ಆಟಗಾರರಾದ ಸೂರಜ್ ಹಾಗೂ ಮಿತುನ್ ಬೆಳ್ಯಪ್ಪ ತಲಾ 1 ಗೋಲು ಬಾರಿಸಿದರು.

ಗುಡ್ಡಂಡ ಮತ್ತು ಕುಂಡ್ಯೋಳಂಡ ತಂಡಗಳ ನಡುವಿನ ಪಂದ್ಯಾವಳಿಯಲ್ಲಿ ಕುಂಡ್ಯೋಳಂಡ ತಂಡ 4-0 ಅಂತರದಲ್ಲಿ ಜಯ ಸಾಧಿಸಿದೆ.

ಮುಕ್ಕಾಟಿರ ಮತ್ತು ಚೆಟ್ಟಿರ ತಂಡಗಳ ನಡುವಿನ ಪಂದ್ಯಾವಳಿಯಲ್ಲಿ ಮುಕ್ಕಾಟಿರ ತಂಡ 4-0 ಗೋಲುಗಳ ಅಂತರದಿಂದ ಜಯಗಳಿಸಿತು.

ಬೊಳ್ಳೇರಪಂಡ ಮತ್ತು ಪುಲಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಪುಲಿಯಂಡ ತಂಡ ಗೆಲುವು ಸಾಧಿಸಿತು.

ಕಾಂಗೀರ ಮತ್ತು ಪಾಲಚಂಡ ತಂಡಗಳ ನಡುವಿನ ಪಂದ್ಯದಲ್ಲಿ ಕಾಂಗೀರ ತಂಡ 2-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು.

ಸರ್ಕಂಡ ಮತ್ತು ಉದ್ದಿನಾಡಂಡ ತಂಡಗಳ ನಡುವಿನ ಪಂದ್ಯದಲ್ಲಿ 5-1 ಗೋಲುಗಳ ಅಂತರದಲ್ಲಿ ಉದ್ದಿನಾಡಂಡ ತಂಡ ಜಯ ಸಾಧಿಸಿತು.

ಹಂಚೆಟ್ಟಿರ ಮತ್ತು ಮಾಚಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಮಾಚಂಗಡ ತಂಡ 3-1 ಗೋಲು ಅಂತರ ಗೆಲುವು ಸಾಧಿಸಿತು.

ಓಡಿಯಂಡ ಮತ್ತು ಮೋರ್ಕಂಡ ತಂಡಗಳ ನಡುವಿನ ಪಂದ್ಯದಲ್ಲಿ ಓಡಿಯಂಡ ತಂಡ 4-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು.

ಚೋಕಂಡ ಮತ್ತು ಮೂಕಚಂಡ ತಂಡಗಳ ನಡುವಿನ ಪಂದ್ಯದಲ್ಲಿ ಮೂಕಚಂಡ ತಂಡ 2-0 ಗೋಲುಗಳ ಅಂತರದಿಂದ ಗೆಲುವು ದಾಖಲಿಸಿತು.

ಚೆಯ್ಯಂಡಿರ ಮತ್ತು ತಾಣಚ್ಚಿರ ತಂಡಗಳ ನಡುವಿನ ಪಂದ್ಯಾವಳಿಯಲ್ಲಿ ಚೈಯಂಡ ತಂಡ 3-1 ಅಂತರದಲ್ಲಿ ಗೆಲುವು ಸಾಧಿಸಿತು.