ಪರಿಣಾಮಕಾರಿಯಾಗಿ ಕಠಿಣ ಕಾನೂನು ತರಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರುಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನದ ಅಂಗವಾಗಿ ಮಾನವ ಹಕ್ಕುಗಳ ಬಲವರ್ಧನೆ ಮಾಡುವಂತೆ ಜನ ಸಂಗ್ರಾಮ ಪರಿಷತ್‌ ಪದಾಧಿಕಾರಿಗಳು ಬುಧವಾರ ನಗರದ ಗಾಂಧಿ ಚೌಕದಲ್ಲಿ ಪ್ರತಿಭಟಿಸಿದರು.ಸಮಿತಿಯವರು ಅಕ್ರಮ ಅನ್ಯಾಯ ಮೋಸ ವಂಚನೆ, ಅತ್ಯಾಚಾರ, ಭ್ರಷ್ಟಾಚಾರ ಅನ್ಯಾಯದ ಭೂ ಸ್ವಾಧೀನ ಇನ್ನು ಮುಂತಾದ ಕಾನೂನು ಬಾಹಿರ ಚಟುವಟಿಕೆ ಮಾಡುವವರ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡಲಾಗುತ್ತಿದೆ ಎಂದರು.ಗಾಂಧಿ ಪ್ರತಿಮೆಯ ಮುಂದೆ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ದಿನದಂದು ಮಾನವ ಹಕ್ಕುಗಳ ಉಳಿವಿಗಾಗಿ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ತಡೆಯಲು ಸರ್ಕಾರ ಪರಿಣಾಮಕಾರಿಯಾಗಿ ಕಠಿಣ ಕಾನೂನು ತರಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಪರಿಷತ್‌ ನ ರಾಜ್ಯ ಉಪಾಧ್ಯಕ್ಷ ಪಾಲಹಳ್ಳಿ ಪ್ರಸನ್ನ, ನಗರ್ಲೆ ವಿಜಯಕುಮಾರ್‌ ಮೊದಲಾದವರು ಇದ್ದರು.