ಯುವಜನರಲ್ಲಿ ಸಾಮಾಜಿಕ ಹೊಣೆ ಕನಸಿದ್ದ ಗಾಂಧೀಜಿ

| Published : Oct 05 2024, 01:33 AM IST

ಯುವಜನರಲ್ಲಿ ಸಾಮಾಜಿಕ ಹೊಣೆ ಕನಸಿದ್ದ ಗಾಂಧೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬ ನಾಗರೀಕರು ಯಾವುದೇ ಪ್ರತಿಫಲವಿಲ್ಲದೇ ಸೇವಾ ಮನೋಭಾವನೆ ಬೆಳೆಸಿಕೊಳ್ಳುವ ಮೂಲಕ ಸಮಾಜ, ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದು ನಾಲಂದ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಬಿ.ಎನ್.ಎಂ. ಸ್ವಾಮಿ ಜಗಳೂರಲ್ಲಿ ಹೇಳಿದ್ದಾರೆ.

- ಹೊಸಹಟ್ಟಿಯಲ್ಲಿ ಎನ್ನೆಸ್ಸೆಸ್‌ ವಾರ್ಷಿಕ ಶಿಬಿರ ಉದ್ಘಾಟಿಸಿ ಪ್ರಾಂಶುಪಾಲ ಬಿ.ಎನ್.ಎಂ. ಸ್ವಾಮಿ - - - ಕನ್ನಡಪ್ರಭ ವಾರ್ತೆ ಜಗಳೂರು

ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬ ನಾಗರೀಕರು ಯಾವುದೇ ಪ್ರತಿಫಲವಿಲ್ಲದೇ ಸೇವಾ ಮನೋಭಾವನೆ ಬೆಳೆಸಿಕೊಳ್ಳುವ ಮೂಲಕ ಸಮಾಜ, ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದು ನಾಲಂದ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಬಿ.ಎನ್.ಎಂ. ಸ್ವಾಮಿ ಹೇಳಿದರು.

ತಾಲೂಕಿನ ಹೊಸಹಟ್ಟಿ ಗ್ರಾಮದಲ್ಲಿ 2024- 2025ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರವನ್ನು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಬದಲಾವಣೆ ಆಗಬೇಕಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಯುವಜನಾಂಗ ಅದರಲ್ಲೂ ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿ ಅರಿತು, ಬದುಕಿನೊಡನೆ ನೇರ ಸಂಪರ್ಕ ಇಟ್ಟಿಕೊಳ್ಳಬೇಕು ಎಂಬುದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಸಾಗಿತ್ತು ಎಂದರು.

ಎನ್‌ಎಸ್‌ಎಸ್‌ ಶಿಬಿರವು ಏಳು ದಿನಗಳ ಕಾಲ ನಡೆಯುವುದು. ಅದರಲ್ಲಿ ಗ್ರಾಮೀಣ ಆರೋಗ್ಯ, ಜನಪದರ ಬದುಕು, ಆಧುನಿಕ ಕೃಷಿ ಹಾಗೂ ಸಾವಯವ ಕೃಷಿ, ಸಾರ್ವಜನಿಕರ ಕಾನೂನು ಅರಿವು, ಮೂಢನಂಬಿಕೆ, ಮೌಢ್ಯತೆ, ವಿಚಾರಗಳ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರಾರ್ಥಿಗಳು ಹಾಗೂ ಗ್ರಾಮಸ್ಥರು, ಮಹಿಳೆಯರು, ಸಾರ್ವಜನಿಕರು, ಎಲ್ಲರೂ ಶಿಬಿರದ ಸದುಪಯೋಗ ಮಾಡಿಕೊಳ್ಳಲು ಸಲಹೆ ನೀಡಿದರು.

ಹೊಸಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಗಂಗಾಧರಪ್ಪ, ಅಮರ ಭಾರತಿ ವಿದ್ಯಾ ಕೇಂದ್ರದ ಆಡಳಿತ ಮಂಡಳಿ ಸದಸ್ಯ ತಿಪ್ಪೇಸ್ವಾಮಿ, ಆರೋಗ್ಯ ನಿರೀಕ್ಷಕ ಟಿ ರುದ್ರಮುನಿ ಮಾತನಾಡಿದರು. ಶಿಬಿರಾಧಿಕಾರಿ ಎ.ಪಿ. ನಿಂಗಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭ ಎಸ್‌ಡಿಎಂಸಿ ಅಧ್ಯಕ್ಷ ಟಿ.ಎಂ. ತಿಪ್ಪೇಸ್ವಾಮಿ, ಗ್ರಾ.ಪಂ. ಸದಸ್ಯ ಎಂ.ಜಿ. ಸಿದ್ದಲಿಂಗಪ್ಪ, ಪವಿತ್ರ ಸುರೇಶ್, ಬಿ.ಚೌಡಪ್ಪ, ಮುಖಂಡರು ಹೊಸಹಟ್ಟಿ ಗಿರಿಯಪ್ಪ, ಉಪನ್ಯಾಸಕರಾದ ಜಿ.ಟಿ. ಪರಮೇಶ್ವರಪ್ಪ, ಆರ್.ನಾಗೇಶ್ ಚಂದ್ರಪ್ಪ, ಸಹ ಶಿಬಿರ ಅಧಿಕಾರಿಗಳಾದ ಹೊನ್ನೇಶ್, ಮೆಹಬೂಬ್ ಸಾಬ್ ಇತರರು ಉಪಸ್ಥಿತರಿದ್ದರು.

- - - -02ಜೆಜಿಎಲ್2:

ಎನ್‌ಎಸ್‌ಎಸ್ ವಾರ್ಷಿಕ ಶಿಬಿರವನ್ನು ನಾಲಂದ ಕಾಲೇಜು ಪ್ರಾಂಶುಪಾಲ ಬಿ.ಎನ್.ಎಂ. ಸ್ವಾಮಿ ಉದ್ಘಾಟಿಸಿದರು.