ನಾಗಲಾಪುರ ಗ್ರಾಪಂ ಅಧ್ಯಕ್ಷ-ಪಿಡಿಒಗೆ ಗಾಂಧಿ ಗ್ರಾಮ ಪುರಸ್ಕಾರ

| Published : Oct 06 2023, 12:07 PM IST

ನಾಗಲಾಪುರ ಗ್ರಾಪಂ ಅಧ್ಯಕ್ಷ-ಪಿಡಿಒಗೆ ಗಾಂಧಿ ಗ್ರಾಮ ಪುರಸ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ನಾಗಲಾಪುರ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ
ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್‌ ಸಚಿವರಿಂದ ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ ನಾಗಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀನಾ ಬೆನ್ನಿ, ಉಪಾಧ್ಯಕ್ಷೆ ಆಶಾ ಹಾಗೂ ಪಿಡಿಒ ಮಂಜುಳಾ ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆದ ಗಾಂಧಿ ಜಯಂತಿಯಲ್ಲಿ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಪತ್ರ, 5 ಲಕ್ಷ ರು. ಹಾಗೂ ಪಾರಿತೋಷಕವನ್ನು ಗ್ರಾಮೀಣ ಅಭಿವೃದ್ದಿ, ಪಂಚಾಯತ್ ರಾಜ್ಯ ಸಚಿವ ಪ್ರಿಯಾಂಕ ಖರ್ಗೆಯಿಂದ ಸ್ವೀಕರಿಸಿದರು. ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಪ್ರತಿ ವರ್ಷ ಗ್ರಾಪಂ ಸಮಗ್ರ ಅಭಿವೃದ್ಧಿ ಪರಿಶೀಲಿಸಿ ಪ್ರತಿ ತಾಲೂಕಿನ ಒಂದು ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ನೀಡುತ್ತದೆ. 2022-23 ನೇ ಸಾಲಿನಲ್ಲಿ ನಾಗಲಾಪುರ ಗ್ರಾಪಂ ನರೇಗಾ ಯೋಜನೆ, ಕಂದಾಯ ವಸೂಲಿ, ಕಸ ವಿಲೇವಾರಿ ಸೇರಿದಂತೆ ಸಮಗ್ರ ಅಭಿವೃದ್ಧಿ ಪರಿಗಣಿಸಿ ನಾಗಲಾಪುರ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ ನೀಡಿದೆ. ---ಬಾಕ್ಸ್‌---- ನಾಗಲಾಪುರ ಗ್ರಾಪಂಗೆ ಇದುವರೆಗೆ 3 ಬಾರಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ. 2017-18, 2019-20 ಹಾಗೂ 2022-23 ನೇ ಸಾಲಿಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಸ್ವೀಕರಿಸಿದೆ ಎಂದು ನಾಗಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀನಾ ಬೆನ್ನಿ ತಿಳಿಸಿದ್ದಾರೆ. ಈ ಪುರಸ್ಕಾರ ಬರಲು ಗ್ರಾಪಂ ಪಿಡಿಒ ಕಾರ್ಯದರ್ಶಿ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಎಲ್ಲಾ ಸಿಬ್ಬಂದಿ ಪರಿಶ್ರಮವೇ ಕಾರಣ. ಪ್ರಶಸ್ತಿ ಬಂದಿರುವುದರಿಂದ ಇನ್ನಷ್ಟು ಅಭಿವೃದ್ದಿ ಮಾಡಲು ಸ್ಪೂರ್ತಿ ಬಂದಿದೆ ಎಂದರು.