ಗಾಂಧಿ ರಾಮರಾಜ್ಯ ನಿರ್ಮಿಸಲು ಯುವಜನತೆ ವ್ಯಸನ ಮುಕ್ತರಾಗಲಿ

| Published : Oct 14 2025, 01:00 AM IST

ಗಾಂಧಿ ರಾಮರಾಜ್ಯ ನಿರ್ಮಿಸಲು ಯುವಜನತೆ ವ್ಯಸನ ಮುಕ್ತರಾಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಪಾನಮುಕ್ತರಿಗೆ ಹಮ್ಮಿಕೊಳ್ಳಲಾದ ಅಭಿನಂದನಾ ಸಮಾರಂಭದಲ್ಲಿ ಬಸವಲಿಂಗ ಶ್ರೀ ಸಲಹೆ

ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು

ಗಾಂಧೀಜಿ ಕನಸಿನ ರಾಮರಾಜ್ಯ ನಿರ್ಮಿಸಲು ಇಂದಿನ ಯುವಜನತೆ ವ್ಯಸನ ಮುಕ್ತರಾಗಬೇಕಿದೆ ಎಂದು ಚಿತ್ತರಗಿ ಶ್ರೀ ವಿಜಯ ಮಾಂತೇಶ್ವರ ಸಂಸ್ಥಾನ ಶಾಖಾ ಮಠ ಸಿದ್ದಯ್ಯನ ಕೋಟೆ ಮ.ನಿ.ಪ್ರ.ಬಸವಲಿಂಗ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಕೊಂಡ್ಲಹಳ್ಳಿ ಗ್ರಾಮದ ಸಾಲೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಆಯೋಜನೆ ಮಾಡಿದ್ದ ಪಾನಮುಕ್ತರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದಿನ ಜನತೆ ವಯಸ್ಸಿನ ಭೇದವಿಲ್ಲದೆ ಮಧ್ಯಪಾನ, ತಂಬಾಕು ಸೇವನೆ, ಹಲವಾರು ಸಾಮಾಜಿಕ ಪಿಡುಗಿನಂತಹ ವ್ಯಸನಗಳಿಗೆ ದಾಸರಾಗುತ್ತಿದ್ದಾರೆ. ಇದನ್ನು ಮನಗಂಡ ಡಾ.ವೀರೇಂದ್ರ ಹೆಗ್ಗಡಯವರು ವ್ಯಸನ ಮುಕ್ತ ಭಾರತದ ನಿರ್ಮಾಣಕ್ಕೆ ಪಣತೊಟ್ಟಿರುವುದು ದೇಶಕ್ಕೆ ಮಾದರಿಯಾಗಿದೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯವನ್ನು ಪ್ರತಿಯೊಬ್ಬ ನಾಗರೀಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಪೂಜ್ಯ ಡಾ.ವಿರೇಂದ್ರ ಹೆಗ್ಗಡೆಯವರು ರಾಜ್ಯಾದಂತ ಲಕ್ಷಾಂತರ ಕುಟುಂಬಗಳ ಸ್ವ ಸಹಾಯ ಸಂಘಗಳ ಸದಸ್ಯರಿಗೆ‌ ಆರ್ಥಿಕವಾಗಿ ಸಹಾಯ ಮಾಡುತ್ತಿರುವುದು ಶ್ಲಾಘನೀಯ. ಈ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಗಾಂಧೀಜಿ‌ ಕಂಡ ಕನಸನ್ನು ನಿಮ್ಮ ಮನ ಪರಿವರ್ತನೆ ಮೂಲಕ ತೋರಿಸಿಕೊಟ್ಟಿದ್ದಾರೆ. ನಿಮ್ಮಲ್ಲಿರುವ ದುಶ್ಚಟಗಳನ್ನ ಬಿಡಿಸಲು ಸಾವಿರಾರು ಶಿಬಿರಗಳನ್ನ ಏರ್ಪಡಿಸಿ ಲಕ್ಷಾಂತರ ವ್ಯಸನಿಗಳನ್ನು ಪಾನಮುಕ್ತರಾಗಿ ಹೊಸ ಬದುಕನ್ನ ಕಟ್ಟಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ

ಕೊಂಡ್ಲಹಳ್ಳಿ ರೇವಣ್ಣ, ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ ಕುಮಾರ್, ಯೋಜನಾಧಿಕಾರಿ‌ ನಾಗರಾಜ್ ಕುಲಾಲ್, ಯೋಜನಾಧಿಕಾರಿ ಶಶಿಧರ್, ಜನಜಾಗೃತಿ ವೇದಿಕೆ ನಿಕಟ ಪೂವ೯ ಅಧ್ಯಕ್ಷ ಷಡಕ್ಷರಪ್ಪ ಮುಖಂಡರಾದ ಶ್ರೀರಾಮರೆಡ್ಡಿ ತಿಪ್ಪೇಸ್ವಾಮಿ, ಗ್ರಾಪಂ ಅಧ್ಯಕ್ಷೆ ಪವಿತ್ರ, ಜನಜಾಗೃತಿ ಸದಸ್ಯ ಲತೀಪ್ ಸಾಬ್ ನಾಯಕನಹಟ್ಟಿ, ಯೋಜನಾಧಿಕಾರಿ ಜಯಂತ್‌ ಮೇಲ್ವಿಚಾರಕರಾದ ಸಂತೋಷ ಕುಮಾರ್, ಬೋರಯ್ಯ ಇದ್ದರು.