ಭಾರೀ ವಿರೋಧದ ನಡುವೆಯೂ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗಾಂಧಿ ಹೆಸರನ್ನು ಕೈಬಿಟ್ಟು ವಿಬಿ ಜಿ ರಾಮ್‌ ಜಿ ಹೆಸರನ್ನು ಇಟ್ಟ ಮಾತ್ರಕ್ಕೆ ಗಾಂಧಿ ವಿಚಾರಧಾರೆಗಳು ಕೊನೆಗೊಳ್ಳುವುದಿಲ್ಲ ಎಂದು ರಾಜ್ಯ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ಡಾ. ವೂಡೇ ಪಿ.ಕೃಷ್ಣ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರುಭಾರೀ ವಿರೋಧದ ನಡುವೆಯೂ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗಾಂಧಿ ಹೆಸರನ್ನು ಕೈಬಿಟ್ಟು ವಿಬಿ ಜಿ ರಾಮ್‌ ಜಿ ಹೆಸರನ್ನು ಇಟ್ಟ ಮಾತ್ರಕ್ಕೆ ಗಾಂಧಿ ವಿಚಾರಧಾರೆಗಳು ಕೊನೆಗೊಳ್ಳುವುದಿಲ್ಲ ಎಂದು ರಾಜ್ಯ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ಡಾ. ವೂಡೇ ಪಿ.ಕೃಷ್ಣ ತಿಳಿಸಿದ್ದಾರೆ.ಇಲ್ಲಿನ ದೊಡ್ಡಹೊಸೂರು ಗ್ರಾಮದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬೆಂಗಳೂರು ಹಾಗೂ ಮಹಾತ್ಮಗಾಂಧಿ ಬೇಸಾಯ ಆಶ್ರಮದ ಸಂಯುಕ್ತಾಶ್ರಮದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮಗಾಂಧಿ ಪುತ್ಥಳಿ ಅನಾವರಣ ಮತ್ತು ಪುಸ್ತಕ ಲೋಕಾರ್ಣೆ ಕಾರ್ಯಕ್ರಮದ ಉಪನ್ಯಾಸದಲ್ಲಿ ಅವರು ಮಾತನಾಡಿದರು.ಗಾಂಧಿ ಕೇವಲ ಹೆಸರಲ್ಲ, ಜಗತ್ತಿನ ಆದರ್ಶ, ಇದು ಎಲ್ಲಿಯವರೆಗೆ ಜೀವಂತವಾಗಿರುತ್ತೋ ಅಲ್ಲಿಯವರೆಗೆ ಶಾಂತಿ ಮತ್ತು ಅಹಿಂಸೆ ಜೀವಂತವಾಗಿರುತ್ತೆ ಎಂದರು. ಈ ಭಾರಿಯ ಶೃಂಗಸಭೆಯ ನಂತರ 20 ದೇಶಗಳ ಪ್ರಧಾನಿಗಳು ಬಯಸಿದ್ದು, ಗಾಂಧಿ ಸಮಾಧಿಗೆ ನಮನ ಸಲ್ಲಿಸುವ ಪ್ರಸ್ತಾಪವನ್ನು ಈ ಮೂಲಕ ಗಾಂಧೀಜಿಯ ಮಹತ್ವವೆಷ್ಟು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಗಾಂಧಿಯನ್ನು ನಮ್ಮ ನಿರಂತರ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್.‌ ಪಾಟೀಲ್‌ ಅವರು ಮಾತನಾಡುತ್ತಾ, ಗಾಂಧಿ ಸ್ವರಾಜ್ಯದ ಕಲ್ಪನೆಯನ್ನು ಕಾನೂನಾತ್ಮಕವಾಗಿ ಸಾಕಾರಗೊಳಿಸುವ ಪ್ರಯತ್ನಗಳು ನಡೆದಿವೆ, ಅದು ಯಶಸ್ವಿ ಸಾಕಾರಗೊಳಿಸುವ ಕಡೆ ಜನಸಾಮಾನ್ಯರಾದಿಯಾಗಿ ಶ್ರಮಿಸಿದರೆ ಈ ಗ್ರಾಮ ಭಾರತ ಸಶಕ್ತವಾಗಲು ಸಾಧ್ಯವಿದೆ. ಗಾಂಧಿಯ ಆಶಯ ಕಠಿಣ, ಆದರೆ ಆ ದಾರಿ ಅನಿವಾರ್ಯ ನಾವು ಸಂವೇದನೆಗಳನ್ನ ಬೆಳೆಸಿಕೊಳ್ಳಬೇಕಿದೆ. ಸಮಾಜದ ಅಸಮಾನತೆ, ಅಸಹಿಷ್ಣುತೆ, ಅಸತ್ಯಗಳನ್ನು ಅರ್ಥ ಮಾಡಿಕೊಳ್ಳಬೇಕು. ಸುತ್ತಲಿನ ತಪ್ಪುಗಳನ್ನು ತಿದ್ದುವ ಮತ್ತು ಸುಧಾರಿಸುವ ಕೆಲಸಗಳು ಆಗಬೇಕು ಎಂದರು.ಕೃಷಿಯನ್ನ ಲಾಭದಾಯಕ ಕಸುಬನ್ನಾಗಿಸಲು ರಾಸಾಯನಿಕ ಕೃಷಿಯನ್ನು ಪೂರ್ಣ ಬಿಡಬೇಕಿದೆ. ಇಂತಹ ಬದಲಾವಣೆ ತರುವ ಕೆಲಸಗಳು ನಿರಂತರವಾಗಿ ಆಗುತ್ತಿರಬೇಕು ಎಂದರು. ತಮಗೆ ಬೇಕಾದ ಸರ್ಕಾರಗಳನ್ನು ರೂಪಿಸುವ ಸಾಮರ್ಥ್ಯ ಜನಸಾಮಾನ್ಯರಿಗೆ ಬರಬೇಕು ಆಗ ಮಾತ್ರ ಗಾಂಧಿ ಕಂಡ ಕನಸು ನನಸಾಗಲಿದೆ ಎಂದರು.ಗಾಂಧಿ ಕಂಡ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಬಗ್ಗೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್‌ ರಾಜ್ಯ ಸದಸ್ಯರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಾಡುಶೆಟ್ಟಿಹಳ್ಳಿ ಸತೀಶ್‌ ಮಾತನಾಡಿದರು. ಈ ಸಂದರ್ಭದಲ್ಲಿ ಇಂದು ಪೋಷಕರಾದಿಯಾಗಿ ಮಕ್ಕಳಿಗೆ ಜೀವನ ಮೌಲ್ಯಗಳನ್ನು ಕಲಿಸುವ ಕಡೆ ಹೆಚ್ಚು ಗಮನಕೊಡಬೇಕಿದೆ. ಕೇವಲ ಅಂಕಪಟ್ಟಿಯ ಸುತ್ತ ತಿರುಗುವ ಮನಸ್ಥಿತಿಯನ್ನು ಬಿಡಬೇಕು. ತಮ್ಮ ಮಕ್ಕಳಿಗೆ ಶ್ರಮದ ಮೌಲ್ಯ ಅರ್ಥ ಮಾಡಿಸಬೇಕಿದೆ. ಮಾಹಿತಿ ಯುಗದಲ್ಲಿ ಅದನ್ನ ತಂತ್ರಜ್ಞಾನವನ್ನ ಹೇಗೆ ಉಪಯೋಗಿಸಬೇಕು ಎಂಬುದಕ್ಕೂ ಮಾರ್ಗದರ್ಶಬೇಕಿದೆ ಕಳೆದ 25 ವರ್ಷಗಳಿಂದ ಶಿಕ್ಷಣ ವ್ಯವಸ್ಥೆಯಲ್ಲಿದ್ದ ನನಗೆ ಒಬ್ಬ ಪೋಷಕರು ತನ್ನ ಮಕ್ಕಳು ಶಾಲೆಯಲ್ಲಿ ಬಿಟ್ಟುಹೋದ ಬೆಲೆಬಾಳುವ ವಸ್ತುಗಳ ಕುರಿತು ವಿಚಾರಿಸಲು ಪೋನ್‌ ಕರೆಗಳನ್ನು ಮಾಡಿಲ್ಲ, ಅಶ್ರಮ ಕಲ್ಪನೆ ಅಸಾಧ್ಯ ಅಂತ ಹೇಳಿದ ಜನಕ್ಕೆ ಈಗ ಮನವರಿಕೆಯಾಗಿದೆ. ವಿದ್ಯೆ ಕಲಿತ ನಂತರ ಅದು ಸಮಾಜಮುಖಿಯಾಗಿ ಹೊರಹೊಮ್ಮಬೇಕಿದೆ. ಕೇವಲ ಹಣಗಳಿಕೆಯ ದೃಷ್ಟಿಕೋನದ ಶಿಕ್ಷಣದಿಂದ ಏನೂ ಉಪಯೋಗವಿಲ್ಲ . ಜಗತ್ತಿನ ದೊಡ್ಡ ಜವಾಬ್ದಾರಿ ಪ್ರಾಥಮಿಕ ಶಿಕ್ಷಣವನ್ನು ಸರಿಮಾಡುವುದರ ಬಗ್ಗೆ ಇರಬೇಕೆಂದರು. ಇದರ ಜೊತೆಗೆ ಸ್ಥಳೀಯವಾದ ಕೌಶಲ್ಯಗಳ ಕಡೆ ಗಮನಕೊಡಬೇಕು ಮತ್ತು ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ನ್ಯೂಸ್‌ ಲೆಟರ್‌ ಪ್ರತಿಯನ್ನು ಬಿಡುಗಡೆಗೊಳಿಸಲಾಯಿತು. ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಗೌರವ ಕಾರ್ಯದರ್ಶಿ ಎಂ.ಸಿ ನರೇಂದ್ರ ಅವರು ಗಾಂಧಿ ಪುತ್ಥಳಿ ಅನಾವರಣಗೊಳಿಸಲಾಯಿತು. ಈ ವೇಳೆ ಕೃಷಿ ತಜ್ಙ ಡಾ. ಮಂಜುನಾಥ್‌, ಫ್ರೊ.ಶಿವರಾಜ್‌, ಸಿ.ಯತಿರಾಜು ಸೇರಿದಂತೆ ಸಹಜ ಬೇಸಾಯ ಶಾಲೆಯ ವಿದ್ಯರ್ಥಿಿಗಳು, ರೈತರು ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.