ಜಾಲಿಗೆ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ
KannadaprabhaNewsNetwork | Published : Oct 06 2023, 01:11 AM IST
ಜಾಲಿಗೆ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ
ಸಾರಾಂಶ
ಕುಂದಾಣ: ತಾಲೂಕಿನ 24 ಪಂಚಾಯಿತಿಗಳ ಪೈಕಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿರುವ ಜಾಲಿಗೆ ಗ್ರಾಮ ಪಂಚಾಯಿತಿಗೆ ಗಾಂಧಿ ಜಯಂತಿಯಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ರಾಜ್ಯ ಸರ್ಕಾರ 2023ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ನೀಡಿ ಗೌರವಿಸಿದೆ.
- ಗಾಂಧಿ ಗ್ರಾಮ ಪುರಸ್ಕಾರ ಸ್ವೀಕರಿಸಿದ ಗ್ರಾಪಂ ಅಧ್ಯಕ್ಷ ಆನಂದ್ ಕುಮಾರ್, ಉಪಾಧ್ಯಕ್ಷೆ ಭವ್ಯ, ಪಿಡಿಒ ಪ್ರಕಾಶ್ ಕನ್ನಡಪ್ರಭ ವಾರ್ತೆ ಕುಂದಾಣ ತಾಲೂಕಿನ 24 ಪಂಚಾಯಿತಿಗಳ ಪೈಕಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿರುವ ಜಾಲಿಗೆ ಗ್ರಾಮ ಪಂಚಾಯಿತಿಗೆ ಗಾಂಧಿ ಜಯಂತಿಯಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ರಾಜ್ಯ ಸರ್ಕಾರ 2023ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ನೀಡಿ ಗೌರವಿಸಿದೆ. ತಾಲೂಕಿನಲ್ಲಿಯೇ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಡಿಜಿಟಲ್ ಗ್ರಂಥಾಲಯ ಅನುಷ್ಠಾನಗೊಳಿಸಿರುವ ಜಾಲಿಗೆ ಪಂಚಾಯಿತಿಯೂ ಇದನ್ನು ಅಂಗವಿಕಲರ, ಕುರುಡರ ಸ್ನೇಹಿಯಾಗಿ ವಿನ್ಯಾಸಗೊಳ್ಳಿಸುವಲ್ಲಿ ಯಶಸ್ವಿಯಾಗಿತ್ತು. ಗಾಂಧಿ ಪುರಸ್ಕಾರದೊಂದಿಗೆ 5 ಲಕ್ಷ ಹೆಚ್ಚುವರಿ ನಿಧಿಯೂ ಪಂಚಾಯಿತಿಗೆ ನೀಡಿದ್ದು ಅಭಿವೃದ್ಧಿ ಕೆಲಸಕ್ಕೆ ಇನ್ನಷ್ಟು ವೇಗ ಸಿಕ್ಕಂತಾಗಿದೆ. ಸಾಮಾನ್ಯವಾಗಿ ಗಡಿ ಪ್ರದೇಶಗಳು ಅಭಿವೃದ್ಧಿ ಕೊರತೆ ಎದುರಿಸುತ್ತಿರುತ್ತವೆ ಎಂಬ ಅಪವಾದಕ್ಕೆ ಜಾಲಿಗೆ ಪಂಚಾಯಿತಿ ವಿರುದ್ಧವಾಗಿದ್ದು, ತಾಲೂಕಿನ ಗಡಿಯಲ್ಲಿದ್ದರೂ ವಿವಿಧ ಮಹತ್ವಾಕಾಂಕ್ಷಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಕೆರೆ ಏರಿಯ ಮೇಲೆ ಯೋಧರ ಸ್ಮಾರಕ ನಿರ್ಮಿಸಿ ದೇಶ ಪ್ರೇಮ ಜಾಗೃತಗೊಳಿಸಿದೆ. ಗ್ರಾಪಂ ವ್ಯಾಪ್ತಿಯ ನೈರ್ಮಲ್ಯ ಕಾಪಾಡುವಲ್ಲಿ ಸ್ತ್ರೀ ಶಕ್ತಿ ಪ್ರದರ್ಶನವಾಗಿದ್ದು, ಸಂಜೀವನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್‌ನಲ್ಲಿ ಸಂಜೀವನಿ ಸ್ವಸಹಾಯ ಸಂಘದ ಮಹಿಳೆಯರು ಸಂಪೂರ್ಣ ತ್ಯಾಜ್ಯ ವಿಂಗಡಣೆಯನ್ನು ವೈಜ್ಞಾನಿಕವಾಗಿ ನಿರ್ವಹಿಸುತ್ತಿದ್ದಾರೆ. 15 ಹಳ್ಳಿಗಳನ್ನೊಳಗೊಂಡ ಪಂಚಾಯಿತಿ: ಪಂಚಾಯಿತಿ ಆವರಣದೊಳಗೆ ಜನಸ್ನೇಹಿ ಗ್ರಂಥಾಲಯ, ಕಂಪ್ಯೂಟರ್ ವಿಶೇಷ ಚೇತನರಿಗೆ ಕಲಿಕಾ ಯಾಂತ್ರಿಕ ಉಪಕರಣ, ಮಕ್ಕಳಿಗೆ ಬರವಣಿಗೆ ಕೌಶಲ್ಯ ಸ್ಪರ್ಧೆ, ವಯೋವೃದ್ಧರಿಗೆ ಆಸನದ ವ್ಯವಸ್ಥೆ ಇತ್ಯಾದಿ ಮಾಡಿದೆ. ಪಂಚಾಯಿತಿಯಲ್ಲಿ 15 ಹಳ್ಳಿಗಳಿದ್ದು ತಾಲೂಕಿನಲ್ಲಿಯೇ ಹೆಚ್ಚು ವಿಸ್ತೀರ್ಣ ಹೊಂದಿದ ಪಂಚಾಯಿತಿಯಾಗಿದೆ. ಕೋಟ್ಸ್............ ಎಲ್ಲ ಚುನಾಯಿತ ಸದಸ್ಯರು, ಹಿಂದಿನ ಅಧ್ಯಕ್ಷ, ಉಪಾಧ್ಯಕ್ಷರ ಶ್ರಮದಿಂದಾಗಿ ಎಲ್ಲ ಯೋಜನೆಗಳು ಸಮಪರ್ಕವಾಗಿ ಅನುಷ್ಠಾನಗೊಂಡಿದೆ. ಪ್ರತಿಯೊಬ್ಬರೂ ಯೋಜನೆಯ ಪಾತ್ರದಾರರೇ ಆಗಿದ್ದಾರೆ. ಜಾಲಿಗೆ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿರುವುದು ಸಂತಸ ತಂದಿದೆ. -ಎಸ್.ಎಂ.ಆನಂದ್ ಕುಮಾರ್, ಅಧ್ಯಕ್ಷ, ಜಾಲಿಗೆ ಗ್ರಾಪಂ ಕೋಟ್ಸ್ .................. ನನ್ನ ಅವಧಿಯಲ್ಲಿ ಗಾಂಧಿ ಪುರಸ್ಕಾರ ಲಭಿಸಿರುವುದು ತುಂಬ ಸಂತಸ ತಂದಿದೆ. ಸಿಬ್ಬಂದಿ ಕಾರ್ಯವೈಖರಿ, ಮಹಿಳಾ ಸಬಲೀಕರಣ, ಮಕ್ಕಳ ಸಭೆ, ಗ್ರಾಮ ನೈರ್ಮಲ್ಯ, ತ್ಯಾಜ್ಯ ವಿಲೇವಾರಿ ಸೇರಿದಂತೆ ಹತ್ತು ಹಲವು ಮೂಲ ಸೌಲಭ್ಯ ಒದಗಿಸುವಲ್ಲಿ ಪಂಚಾಯಿತಿ ಯಶಸ್ವಿಯಾಗಿದೆ. ಅದರ ಫಲವೇ ಗಾಂಧಿ ಗ್ರಾಮ ಪುರಸ್ಕಾರ. ಇದೀಗ ನಮ್ಮ ಮೇಲೆ ಮತ್ತಷ್ಟು ಜವಾಬ್ದಾರಿ ಹೆಚ್ಚಿದೆ. - ಪ್ರಕಾಶ್, ಪಿಡಿಒ, ಜಾಲಿಗೆ ಗ್ರಾಪಂ ೦೧ ಕುಂದಾಣ ೦೫ ಚಿತ್ರಸುದ್ದಿ : ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಜಾಲಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ್ ಕುಮಾರ್, ಉಪಾಧ್ಯಕ್ಷೆ ಭವ್ಯ, ಪಿಡಿಒ ಪ್ರಕಾಶ್‌ಗೆ ಗಾಂಧಿ ಗ್ರಾಮ ಪುರಸ್ಕಾರ ನೀಡಿ ಅಭಿನಂದಿಸಿದರು.