ಧರ್ಮ ಮಾರ್ಗದಲ್ಲಿ ನಡೆದ ಗಾಂಧಿ

| Published : Oct 03 2024, 01:23 AM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದಂತೆ ಸತ್ಯ ಎತ್ತಿ ಹಿಡಿದು, ಸಾಮಾಜಿಕ ನ್ಯಾಯ ಪಾಲಿಸಿ ಸರ್ವಧರ್ಮಕ್ಕೆ ನ್ಯಾಯ ಕೊಡಿಸಲು ಗಾಂಧೀಜಿ ಮೌಲ್ಯಗಳನ್ನು ಅಳವಡಿಸಿಕೊಂಡು ಸರ್ಕಾರ ಆಡಳಿತ ನಡೆಸುತ್ತಿದೆ.

ನವಲಗುಂದ:

ಮಹಾತ್ಮ ಗಾಂಧೀಜಿ ಆತ್ಮಸಾಕ್ಷಿ, ಅಹಿಂಸಾವಾದಿ ಘೋಷಣೆ, ಅಸಮಾನತೆ ವಿರೋಧಿಸಿದ್ದ, ಎಲ್ಲ ಧರ್ಮದ ಸಾರ ಅರಿತಿದ್ದ, ಸರ್ವಜನಾಂಗಕ್ಕೆ ಆದ್ಯತೆ ನೀಡಿ ಧರ್ಮದ ಮಾರ್ಗದಲ್ಲಿ ನಡೆದು ನಮ್ಮೆಲ್ಲರಿಗೆ ನಿಜವಾದ ದೇವರಾಗಿದ್ದಾರೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.

ಪಟ್ಟಣದ ಶಿಕ್ಷಕರ ಭವನದಲ್ಲಿ 155ನೇ ಗಾಂಧಿ ಜಯಂತಿ ಹಾಗೂ ಲಾಲ ಬಹುದ್ದೂರ್‌ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಗಾಂಧೀಜಿ ಬ್ರಿಟಿಷರ್ ವಿರುದ್ಧ ಹೋರಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟರು ಎಂದ ಅವರು, ಸತ್ಯಮೇವ ಜಯತೆ ಎಂಬ ಘೋಷದೊಂದಿಗೆ ಅವರ ಸಂದೇಶಗಳು ಸರ್ವಕಾಲಿಕ ಸತ್ಯ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದಂತೆ ಸತ್ಯ ಎತ್ತಿ ಹಿಡಿದು, ಸಾಮಾಜಿಕ ನ್ಯಾಯ ಪಾಲಿಸಿ ಸರ್ವಧರ್ಮಕ್ಕೆ ನ್ಯಾಯ ಕೊಡಿಸಲು ಗಾಂಧೀಜಿ ಮೌಲ್ಯಗಳನ್ನು ಅಳವಡಿಸಿಕೊಂಡು ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಹೇಳಿದರು.

ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾವೇಶವು 100 ವರ್ಷ ಪೂರೈಸಿದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಬೆಂಗಳೂರಿನಲ್ಲಿ ನಡೆದ ಸರ್ಕಾರದ ಕಾರ್ಯಕ್ರಮದ ನೇರ ಪ್ರಸಾರವನ್ನು ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ವೀಕ್ಷಿಸಿದರು.

ಇದಕ್ಕೂ ಮುಂಚೆ ಗಣಪತಿ ದೇವಸ್ಥಾನದಿಂದ “ಗಾಂಧಿ ನಡಿಗೆ” ಕಾರ್ಯಕ್ರಮದ ಮೂಲಕ ಗಾಂಧಿ ಮಾರುಕಟ್ಟೆ, ಲಿಂಗರಾಜ ಸರ್ಕಲ್, ರೈತ ವೀರಗಲ್ಲು ಮೂಲಕ ಹಳೇ ತಹಸೀಲ್ದಾರ್‌ ಕಚೇರಿ ಹತ್ತಿರ ಇರುವ ಶಿಕ್ಷಕರ ಭವನಕ್ಕೆ ಆಗಮಿಸಿತು.

ಈ ವೇಳೆ ತಹಸೀಲ್ದಾರ್‌ ಸುಧೀರ ಸಾಹುಕಾರ, ಬಿಇಒ ಎಂ.ಬಿ. ಮಲ್ಲಾಡದ, ತಾಪಂ ಇಒ ಭಾಗ್ಯಶ್ರೀ ಜಾಗೀರದಾರ, ಪುರಸಭೆ ಮುಖ್ಯಾಧಿಕಾರಿ ಎಸ್.ಪಿ. ಪೂಜಾರ, ವರ್ಧಮಾನಗೌಡ ಹಿರೇಗೌಡ್ರ, ಮಂಜುನಾಥ ಮಾಯಣ್ಣನವರ, ಶಿವಾನಂದ ಭೂಮಣ್ಣವರ, ಬಾಪುಗೌಡ ಪಾಟೀಲ, ವಿಜಯ ಕುಲಕರ್ಣಿ, ಅರುಣಕುಮಾರ ಮಜ್ಜಗಿ, ಎಂ.ಎಸ್. ರೋಣದ, ಸದುಗೌಡ ಪಾಟೀಲ, ಎ.ವಿ. ಶೆಟ್ಟರ್‌, ಶಂಕ್ರಪ್ಪ ಗಾಣಿಗೇರ, ಆನಂದ ಹವಳಕೋಡ, ನಿಂಗಪ್ಪ ಕೆಳಗೇರಿ, ಕಿರಣ ಉಳ್ಳಿಗೇರಿ, ಕುಮಾರ ಲಕ್ಕಮ್ಮನವರ, ಅರುಣ ಸುಣಗಾರ, ನಂದಿನಿ ಹಾದಿಮನಿ, ಮಧುಮತಿ ರಾಯನಗೌಡ್ರ ಹಾಗೂ ಪುರಸಭೆ ಸದಸ್ಯರು ಇದ್ದರು.